ಮತ್ತೆ ಶುರುವಾಯ್ತ ಫ್ಯಾನ್ಸ್​ ವಾರ್​; ರಾಮ್​ ಚರಣ್​-ಜ್ಯೂ. ಎನ್​ಟಿಆರ್​ ಅಭಿಮಾನಿಗಳ ಕಿತ್ತಾಟ

ಆರಂಭದಲ್ಲಿ ರಾಮ್​ ಚರಣ್​ ಹಾಗೂ ಜ್ಯೂ. ಎನ್​ಟಿಆರ್​ ಅಭಿಮಾನಿಗಳ ನಡುವೆ ಆರೋಗ್ಯಕರ ಚರ್ಚೆಯೇ ಇತ್ತು. ಆದರೆ, ನಂತರ ಇದು ಮಿತಿಮೀರಿದೆ. ಇಬ್ಬರ ಅಭಿಮಾನಿಗಳು ಪರಸ್ಪರ ಬೈದುಕೊಂಡಿದ್ದಾರೆ.

ಮತ್ತೆ ಶುರುವಾಯ್ತ ಫ್ಯಾನ್ಸ್​ ವಾರ್​; ರಾಮ್​ ಚರಣ್​-ಜ್ಯೂ. ಎನ್​ಟಿಆರ್​ ಅಭಿಮಾನಿಗಳ ಕಿತ್ತಾಟ
ರಾಮ್​ ಚರಣ್​, ಜ್ಯೂ. ಎನ್​ಟಿಆರ್​

Updated on: May 22, 2021 | 3:40 PM

ಫ್ಯಾನ್ಸ್​ ವಾರ್​ಗಳು ಹುಟ್ಟಿಕೊಳ್ಳೋದು ಸಿನಿಮಾ ಇಂಡಸ್ಟ್ರಿಗೆ ಹೊಸದೇನಲ್ಲ. ಹೀರೋಗಳು ಎಷ್ಟೇ ಅನ್ಯೋನ್ಯವಾಗಿದ್ದರೂ, ಫ್ಯಾನ್ಸ್ ಮಾತ್ರ ಸುಮ್ಮನಿರುವುದಿಲ್ಲ. ಚಿಕ್ಕಚಿಕ್ಕ ಕಾರಣಕ್ಕೆ ಜಗಳ ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ವಾರ್​ ನಡೆಸುತ್ತಾರೆ. ಈಗ ಟಾಲಿವುಡ್​ನಲ್ಲಿ ಫ್ಯಾನ್ಸ್​ ವಾರ್​ ಹುಟ್ಟಿಕೊಂಡಿದೆ. ಜ್ಯೂ. ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿಮಾನಿಗಳ ನಡುವೆ ಕಿತ್ತಾಟ ಆರಂಭವಾಗಿದ್ದು, #FanBaselessRamCharan ಮತ್ತು #FanBaselessNTR ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ.

ಅಷ್ಟಕ್ಕೂ ಈ ಫ್ಯಾನ್​ ವಾರ್​ ಆರಂಭವಾಗೋಕೆ ಕಾರಣವೇನು? ಅದಕ್ಕೂ ಉತ್ತರವಿದೆ. ಎಸ್​.ಎಸ್​. ರಾಜಮೌಳಿ ನಿರ್ದೇಶನದ ಆರ್​​ಆರ್​ಆರ್​ ಸಿನಿಮಾದಲ್ಲಿ ರಾಮ್​ ಚರಣ್​ ಹಾಗೂ ಜ್ಯೂ.ಎನ್​ಟಿಆರ್​ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್​ ನಡೆಯುವಾಗಲೇ ಸಿನಿಮಾದ ಡಿಜಿಟಲ್​ ಹಕ್ಕು ಬರೋಬ್ಬರಿ 325 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ರಾಜಮೌಳಿ ಸಿನಿಮಾ ಎಂದರೆ ನಿರೀಕ್ಷೆ ಹಾಗೂ ಅದ್ದೂರಿತನ ಇದ್ದೇ ಇರುತ್ತದೆ. ಈ ಕಾರಣಕ್ಕೆ ಜೀ5 ಇಷ್ಟು ದೊಡ್ಡ ಮೊತ್ತಕ್ಕೆ ಸಿನಿಮಾ ಡಿಜಿಟಲ್ ರೈಟ್ಸ್​ ಖರೀದಿಸಿದೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ, ಈ ಸಿನಿಮಾಗೆ ಇಷ್ಟು ಬೇಡಿಕೆ ಬರುವುದಕ್ಕೆ ತಮ್ಮ ನೆಚ್ಚಿನ ನಟನೇ ಕಾರಣ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ.

ಇಲ್ಲೊಂದು ಅಚ್ಚರಿಯ ವಿಚಾರವಿದೆ. ರಾಮ್​ ಚರಣ್​ ಹಾಗೂ ಜ್ಯೂ. ಎನ್​ಟಿಆರ್​ ಇಬ್ಬರೂ ಉತ್ತಮ ಗೆಳೆಯರು. ಇಬ್ಬರೂ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇಬ್ಬರ ನಡುವೆ ಇಷ್ಟು ಗೆಳೆತನವಿದ್ದರೂ, ಅಭಿಮಾನಿಗಳು ಈ ರೀತಿ ಕಿತ್ತಾಡುತ್ತಿರುವುದು ಅನೇಕರಿಗೆ ಬೇಸರ ತರಿಸಿದೆ.

ಆರ್​ಆರ್​ಆರ್​ ಸಿನಿಮಾದಲ್ಲಿ ರಾಮ್​ಚರಣ್​, ಜ್ಯೂ. ಎನ್​ಟಿಆರ್​, ಅಜಯ್​ ದೇವಗನ್​, ಆಲಿಯಾ ಭಟ್​ ಸೇರಿ ಸಾಕಷ್ಟು ಜನರು ನಟಿಸುತ್ತಿದ್ದಾರೆ. ಕೊವಿಡ್ ಕಾರಣದಿಂದ ಸಿನಿಮಾ ಶೂಟಿಂಗ್​ ನಿಂತಿದೆ. ಬಾಹುಬಲಿ ನಂತರ ತೆರೆಕಾಣುತ್ತಿರುವ ರಾಜಮೌಳಿ ನಿರ್ದೇಶನದ ಅದ್ದೂರಿ ಸಿನಿಮಾ ಇದಾಗಿದೆ. ಇತ್ತೀಚೆಗೆ ಜ್ಯೂ. ಎನ್​ಟಿಆರ್​ ಜನ್ಮದಿನದ ಅಂಗವಾಗಿ ಪೋಸ್ಟರ್​ ಒಂದನ್ನು ರಿಲೀಸ್​ ಮಾಡಲಾಗಿತ್ತು.

ಇದನ್ನೂ ಓದಿ: ಜ್ಯೂ. ಎನ್​​ಟಿಆರ್​ ಮುಂದಿನ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ; ಸ್ಟಾರ್​ ನಟನ ಜನ್ಮದಿನದಂದು ಹೊರಬಿತ್ತು ಸುದ್ದಿ

RRR Ott Rights: 325 ಕೋಟಿ ರೂ.ಗೆ ಸೇಲ್​ ಆಯ್ತು ಆರ್​ಆರ್​ಆರ್ ಚಿತ್ರ; ಯಾವ ಓಟಿಟಿಯಲ್ಲಿ ಪ್ರಸಾರ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us