AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೂ. ಎನ್​​ಟಿಆರ್​ ಮುಂದಿನ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ; ಸ್ಟಾರ್​ ನಟನ ಜನ್ಮದಿನದಂದು ಹೊರಬಿತ್ತು ಸುದ್ದಿ

ಟಾಲಿವುಡ್​ ಸ್ಟಾರ್​ ನಟ ಜ್ಯೂ. ಎನ್​ಟಿಆರ್​ಗೆ ಇಂದು (ಮೇ 20) ಜನ್ಮದಿನದ ಸಂಭ್ರಮ. ಅವರು ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಹರಿಸುತ್ತಿದೆ.

ಜ್ಯೂ. ಎನ್​​ಟಿಆರ್​ ಮುಂದಿನ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ; ಸ್ಟಾರ್​ ನಟನ ಜನ್ಮದಿನದಂದು ಹೊರಬಿತ್ತು ಸುದ್ದಿ
ಜ್ಯೂ. ಎನ್​ಟಿಆರ್​-ಪ್ರಶಾಂತ್​ ನೀಲ್
ರಾಜೇಶ್ ದುಗ್ಗುಮನೆ
| Edited By: |

Updated on: May 20, 2021 | 2:54 PM

Share

‘ಕೆಜಿಎಫ್’​ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ಪ್ರಶಾಂತ್​ ನೀಲ್​ಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ಅವರು ಟಾಲಿವುಡ್​ ಸ್ಟಾರ್​ ನಟ ಪ್ರಭಾಸ್​ಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಅವರು ನಿರ್ದೇಶನ ಮಾಡುತ್ತಿರುವ ‘ಸಲಾರ್’​ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹೀಗಿರುವಾಗಲೇ ಅವರು ಜ್ಯೂ.ಎನ್​ಟಿಆರ್​ ಜತೆ ಕೈ ಜೋಡಿಸಿದ್ದಾರೆ.

ಟಾಲಿವುಡ್​ ಸ್ಟಾರ್​ ನಟ ಜ್ಯೂ. ಎನ್​ಟಿಆರ್​ಗೆ ಇಂದು (ಮೇ 20) ಜನ್ಮದಿನದ ಸಂಭ್ರಮ. ಅವರು ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಹರಿಸುತ್ತಿದ್ದಾರೆ. ಆರ್​ಆರ್​ಆರ್​ ಚಿತ್ರತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ಇದರ ಜತೆಗೆ ಮುಂದಿನ ಚಿತ್ರದ ಬಗ್ಗೆ ದೊಡ್ಡ ಅನೌನ್ಸ್​ಮೆಂಟ್​ ಕೂಡ ಆಗಿದೆ.

ಹೌದು, ಜ್ಯೂ. ಎನ್​ಟಿಆರ್​ ಮುಂದಿನ ಚಿತ್ರಕ್ಕೆ ಪ್ರಶಾಂತ್​ ನೀಲ್​​ ಆ್ಯಕ್ಷನ್​ ಕಟ್​ ಹೇಳೋಕೆ ರೆಡಿ ಆಗಿದ್ದಾರೆ. ಈ ವಿಚಾರವನ್ನು ಖುದ್ದು ಮೈತ್ರಿ ಮೂವೀ ಮೇಕರ್ಸ್​ ನಿರ್ಮಾಣ ಸಂಸ್ಥೆ ಖಚಿತಪಡಿಸಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಮೈತ್ರಿ ಮೂವೀ ಮೇಕರ್ಸ್​, ಮುಂದಿನ ಸಿನಿಮಾಗೆ ಪ್ರಶಾಂತ್​ ನೀಲ್​-ಜ್ಯೂ.ಎನ್​ಟಿಆರ್​ ಕೈಜೋಡಿಸುತ್ತಿರುವ ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಸಿನಿಮಾ ದೊಡ್ಡ ಬಜೆಟ್​ನಲ್ಲಿ ತಯಾರಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗ ಸಿದ್ಧಗೊಳ್ಳುತ್ತಿರುವ ಚಿತ್ರದಲ್ಲೂ ಆ್ಯಕ್ಷನ್​ಗಳು ಯತೇಚ್ಛವಾಗಿ ಇರಲಿದೆಯಂತೆ.

ಕೊರೊನಾ ವೈರಸ್ ಹಾವಳಿ ಮಿತಿ ಮೀರುವುದರಿಂದ ಈ ಬಾರಿ ಸಾರ್ವಜನಿಕವಾಗಿ ಸಂಭ್ರಮಾಚರಣೆ ಮಾಡಲಾಗುತ್ತಿಲ್ಲ. ಈ ವೇಳೆ ಕೇವಲ ಸೋಶಿಯಲ್ ಮೀಡಿಯಾ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಈಗಾಗಲೇ ಅಭಿಮಾನಿಗಳು ಕಾಮನ್ ಡಿಪಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಜ್ಯೂ. ಎನ್​ಟಿಆರ್​ ಸದ್ಯ, ಆರ್​ಆರ್​ಆರ್​ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಎಸ್​.ಎಸ್​. ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು, ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​-2 ರಿಲೀಸ್​ಗೆ ರೆಡಿ ಇದೆ. ಸಲಾರ್ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ.

ಇದನ್ನೂ ಓದಿ: ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದ ಜೂ. ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢ​

Jr NTR Birthday: ಜ್ಯೂ. ಎನ್​ಟಿಆರ್​ಗೆ ಜನ್ಮದಿನದ ಸಂಭ್ರಮ; ಟಾಲಿವುಡ್​ ಹೀರೋಗೆ ಸಿಕ್ತಿದೆ ಭರ್ಜರಿ ಗಿಫ್ಟ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್