ಸನ್ನಿ ಡಿಯೋಲ್​ಗೆ ಭರ್ಜರಿ ಗೆಲುವು; ಅಕ್ಷಯ್ ಕುಮಾರ್ ಎದುರು ತೊಡೆ ತಟ್ಟಿದ ನಟ

ಈ ವರ್ಷ ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಗೆದ್ದ ಸಿನಿಮಾಗಳ ಸಂಖ್ಯೆ ತುಂಬಾನೇ ಕಡಿಮೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದಾದ ಬಳಿಕ ಭರ್ಜರಿ ಓಪನಿಂಗ್ ಪಡೆದ ಸಿನಿಮಾ ಎನ್ನುವ ಖ್ಯಾತಿ ‘ಗದರ್ 2’ ಚಿತ್ರಕ್ಕೆ ಸಿಕ್ಕಿದೆ.

ಸನ್ನಿ ಡಿಯೋಲ್​ಗೆ ಭರ್ಜರಿ ಗೆಲುವು; ಅಕ್ಷಯ್ ಕುಮಾರ್ ಎದುರು ತೊಡೆ ತಟ್ಟಿದ ನಟ
ಸನ್ನಿ ಡಿಯೋಲ್-ಅಕ್ಷಯ್ ಕುಮಾರ್

Updated on: Aug 12, 2023 | 12:24 PM

ನಟ ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಸಿನಿಮಾ (Gadar 2 Movie) ಮತ್ತು ಅಕ್ಷಯ್ ಕುಮಾರ್ ಹಾಗೂ ಪಂಕಜ್ ತ್ರಿಪಾಠಿ ಅಭಿನಯದ ‘ಒಎಂಜಿ 2’ ಚಿತ್ರ ಆಗಸ್ಟ್ 11ರಂದು ರಿಲೀಸ್ ಆಗಿದೆ. ಎರಡು ದೊಡ್ಡ ಬಜೆಟ್ ಚಿತ್ರಗಳು ಒಟ್ಟಿಗೆ ರಿಲೀಸ್ ಆಗಿರುವುದರಿಂದ ಕ್ಲ್ಯಾಶ್​ ಏರ್ಪಟ್ಟಿತ್ತು. ಈ ಎರಡೂ ಚಿತ್ರಗಳು ಸೀಕ್ವೆಲ್ ಅನ್ನೋದು ವಿಶೇಷ. ಈ ಪೈಕಿ ‘ಗದರ್ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಈ ಚಿತ್ರ ಮೊದಲ ದಿನ 40 ಕೋಟಿ ರೂಪಾಯಿ ಬಾಚಿಕೊಂಡಿದೆ. ‘ಒಎಂಜಿ 2’ ಚಿತ್ರ ಕೇವಲ 9 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ.

ಈ ವರ್ಷ ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಗೆದ್ದ ಸಿನಿಮಾಗಳ ಸಂಖ್ಯೆ ತುಂಬಾನೇ ಕಡಿಮೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದಾದ ಬಳಿಕ ಭರ್ಜರಿ ಓಪನಿಂಗ್ ಪಡೆದ ಸಿನಿಮಾ ಎನ್ನುವ ಖ್ಯಾತಿ ‘ಗದರ್ 2’ ಚಿತ್ರಕ್ಕೆ ಸಿಕ್ಕಿದೆ. ಸನ್ನಿ ಡಿಯೋಲ್ ಅವರು ಈ ಚಿತ್ರದಿಂದ ಭರ್ಜರಿ ಗೆಲುವು ಕಂಡಿದ್ದಾರೆ. ಅನಿಲ್ ಶರ್ಮಾ ಅವರು ‘ಗದರ್ 2’ ಚಿತ್ರಕ್ಕೆ ಆ್ಯಕ್ಷನ್ ಹೇಳಿದ್ದಾರೆ. 2001ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ‘ಗದರ್’ ಚಿತ್ರದ ಸೀಕ್ವೆಲ್ ಇದಾಗಿದೆ.

ತರಣ್ ಆದರ್ಶ್ ಮಾಡಿರೋ ಟ್ವೀಟ್..

ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕೇವಲ 9 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಲೈಂಗಿಕ ಶಿಕ್ಷಣದ ಕುರಿತು ಸಿನಿಮಾ ಇದೆ. ಗಳಿಕೆ ವಿಚಾರದಲ್ಲಿ ಎರಡೂ ಚಿತ್ರಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ.

ಇದನ್ನೂ ಓದಿ:  ಆಲ್​ಟೈಮ್ ಸೂಪರ್ ಹಿಟ್ ‘ಗದರ್’ ಸಿನಿಮಾಕ್ಕೆ ಸ್ಪೂರ್ತಿ ಈ ಸೈನಿಕ: ಪ್ರೇಮಕ್ಕಾಗಿ ಮಾಡಿದ್ದ ಅದ್ವಿತೀಯ ಸಾಹಸ

‘ಒಎಂಜಿ 2’ ಚಿತ್ರಕ್ಕೆ ಇಂದು (ಆಗಸ್ಟ್ 12) ಹಾಗೂ ನಾಳೆ (ಆಗಸ್ಟ್​ 13) ಒಳ್ಳೆಯ ರೀತಿಯಲ್ಲಿ ಗಳಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇತ್ತೀಚೆಗೆ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರ ಕೂಡ ಮೆಚ್ಚುಗೆ ಪಡೆದಿದ್ದು ರೇಸ್​​ನಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us