ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಳ್ ಅವರು ಹೈದರಾಬಾದ್ನಲ್ಲಿ ಇಂದು (ಡಿಸೆಂಬರ್ 4) ವಿವಾಹ ಆಗಲಿದ್ದಾರೆ. ಇವರು ಅದ್ದೂರಿ ಮದುವೆಗೆ ಕುಟುಂಬದವರು ಹಾಗೂ ಆಪ್ತರು ಸಾಕ್ಷಿ ಆಗುತ್ತಿದ್ದಾರೆ. ಅದೇ ರೀತಿ ಈ ಮದುವೆಗೆ ಟಾಲಿವುಡ್ನ ಅನೇಕ ದಿಗ್ಗಜರು ಭಾಗಿ ಆಗುತ್ತಿದ್ದಾರೆ ಅನ್ನೋದು ವಿಶೇಷ. ಹಾಗಾದರೆ ಮದುವೆಗೆ ಹಾಜರಿ ಹಾಕಲಿರುವ ಸೆಲೆಬ್ರಿಟಿಗಳು ಯಾರ್ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಅಕ್ಕಿನೇನಿ ನಾಗಾರ್ಜುನ ಅವರಿಗೆ ಟಾಲಿವುಡ್ನಲ್ಲಿ ದೊಡ್ಡ ಹೆಸರು ಇದೆ. ಅನೇಕ ಸೆಲೆಬ್ರಿಟಿಗಳು ಅವರ ಜೊತೆ ಒಳ್ಳೆಯ ನಂಟು ಹೊಂದಿದ್ದಾರೆ. ಹೀಗಾಗಿ ಮದುವೆಗೆ ಅನೇಕರಿಗೆ ಅವರು ಆಹ್ವಾನ ನೀಡಿದ್ದಾರೆ. ಆ ಪೈಕಿ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕೊನಿಡೆಲಾ ಕೂಡ ಮದುವೆಗೆ ಹಾಜರಿ ಹಾಕುತ್ತಿದ್ದಾರೆ. ಮಹೇಶ್ ಬಾಬು ಹಾಗೂ ಅವರ ಪತ್ನಿ ನಮ್ರತಾ ಶಿರೋಡ್ಕರ್, ಮಗಳು ಸಿತಾರಾ ಕೂಡ ಮದುವೆಗೆ ಬರೋ ಸಾಧ್ಯತೆ ಇದೆ. ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ, ನಯನತಾರಾ, ಪ್ರಭಾಸ್ ಕೂಡ ಮದುವೆಯಲ್ಲಿ ಭಾಗಿ ಆಗಲಿದ್ದಾರೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗುತ್ತಿದೆ. ಇದರ ಮಧ್ಯೆಯೂ ಅಲ್ಲು ಅರ್ಜುನ್ ಅವರು ಬಿಡುವು ಮಾಡಿಕೊಂಡು ಮದುವೆಯಲ್ಲಿ ಭಾಗಿ ಆಗಲಿದ್ದಾರೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಲಿದೆ.
ಅನ್ನಪೂರ್ಣ ಸ್ಟುಡಿಯೋ 1976ರಲ್ಲಿ ಸ್ಥಾಪನೆ ಆಯಿತು. ನಾಗ ಚೈತನ್ಯ ಅವರ ತಾತ ಅಕ್ಕಿನೇನಿ ನಾಗೇಶ್ವರ್ ರಾವ್ ಇದನ್ನು ನಿರ್ಮಾಣ ಮಾಡಿದ್ದರು. ಬಂಜಾರ ಹಿಲ್ಸ್ ಭಾಗದಲ್ಲಿ ಇದೆ. ಈ ಸ್ಟುಡಿಯೋ 22 ಎಕರೆ ಜಾಗದಲ್ಲಿ ಇದೆ. ಹೀಗಾಗಿ, ಅದ್ದೂರಿ ಮದುವೆಗೆ ಇದು ಸಿದ್ಧಗೊಂಡಿದೆ. ನಾಗಾರ್ಜುನ ಅವರ ಎನ್ ಕನ್ವೆಷನ್ ಹಾಲ್ ಇದ್ದಿದ್ದರೆ ಅಲ್ಲಿ ಅದ್ದೂರಿಯಾಗಿ ವಿವಾಹ ನಡೆಯುತ್ತಿತ್ತು. ಆದರೆ, ಈಗ ಹಾಗಿಲ್ಲ.
ಇದನ್ನೂ ಓದಿ:ಒಂದೇ ಮಂಟಪದಲ್ಲಿ ನಾಗ ಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಮದುವೆ?
ಈ ಮದುವೆಗೆ ಶೋಭಿತಾ ಧುಲಿಪಾಳ್ ಅವರು ಕಾಂಜೀವರಂ ಸಿಲ್ಕ್ ಸೀರೆಯನ್ನು ಧರಿಸುತ್ತಿದ್ದಾರೆ. ಅವರು ಪಕ್ಕಾ ಸಾಂಪ್ರದಾಯಕವಾಗಿ ವಿವಾಹ ಆಗುತ್ತಿದ್ದಾರೆ. ನಾಗ ಚೈತನ್ಯ ಅವರು ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರನ್ನು ನೆನಪಿಸಿಕೊಳ್ಳಲಿದ್ದಾರೆ. ಮದುವೆ ಬಳಿಕ ಅರಿಶಿಣ ಶಾಸ್ತ್ರ ಕೂಡ ನೆರವರೇರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 am, Wed, 4 December 24