ಒಂದೇ ಮಂಟಪದಲ್ಲಿ ನಾಗ ಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಮದುವೆ?
Akkineni Family: ನಾಗ ಚೈತನ್ಯ ಅವರು ಶೋಭಿತಾ ಧುಲಿಪಾಲ್ ಅವರನ್ನು ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ವಿವಾಹವಾಗುತ್ತಿದ್ದಾರೆ. ಅಖಿಲ್ ಅಕ್ಕಿನೇನಿ ಅವರು ಝೈನಾಬ್ ರಾವ್ಡ್ಜೀ ಅವರನ್ನು 2025 ರಲ್ಲಿ ವಿವಾಹವಾಗಲಿದ್ದಾರೆ.
ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಮನೆ ಮಾಡಿದೆ. ನಾಗ ಚೈತನ್ಯ ಅವರ ಎರಡನೇ ಮದುವೆ ಡಿಸೆಂಬರ್ 4ರಂದು ನಡೆಯಲಿದೆ. ಶೋಭಿತಾ ಧುಲಿಪಾಲ್ ಜೊತೆ ನಾಗ ಚೈತನ್ಯ ಅವರು ಅನ್ನಪೂರ್ಣ ಸ್ಟುಡಿಯೋದಲ್ಲಿ ವಿವಾಹ ಆಗಲಿದ್ದಾರೆ. ಇದೇ ಮಂಟಪದಲ್ಲಿ ಅಖಿಲ್ ಅಕ್ಕಿನೇನಿ ಮದುವೆ ಕೂಡ ನಡೆಯಲಿದೆ ಎನ್ನಲಾಗಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ನಟ ಅಕ್ಕಿನೇನಿ ನಾಗಾರ್ಜುನ ಅವರು ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾಗ ಚೈತನ್ಯ ಅವರು ಈ ಮೊದಲು ಸಮಂತಾ ಜೊತೆ ವಿವಾಹ ಆಗಿದ್ದರು. ಆ ಬಳಿಕ ಇವರು ವಿವಾಹ ಬೇರೆ ಆದರು. ಈಗ ಇವರು ಬೇರೆ ಆಗಿ ಮೂರು ವರ್ಷಗಳೇ ಕಳೆದಿವೆ. ನಾಗ ಚೈತನ್ಯ ಅವರು ಈಗ ಮತ್ತೊಂದು ಮದುವೆ ಆಗುತ್ತಿದ್ದಾರೆ. ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ಶೋಭಿತಾ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಇವರ ಮದುವೆ ದಿನಾಂಕ ಹತ್ತಿರ ಬರುತ್ತಿರುವಾಗಲೇ ಅಖಿಲ್ ಅವರ ನಿಶ್ಚಿತಾರ್ಥ ನಡೆದಿತ್ತು.
ಹೌದು, ಅಕ್ಕಿನೇನಿ ನಾಗಾರ್ಜುನ ಅವರ ಮಗ ಅಖಿಲ್ ಅವರು ಝೈನಾಬ್ ರಾವ್ಡ್ಜೀ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಹೀಗಾಗಿ, ಒಂದೇ ಮಂಟಪದಲ್ಲಿ ಅಣ್ಣ-ತಮ್ಮ ಇಬ್ಬರ ಮದುವೆಯೂ ನಡೆಯಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ನಾಗಾರ್ಜುನ ಸ್ಪಷ್ಟನೆ ನೀಡಿದ್ದಾರೆ.
ಅನ್ನಪೂರ್ಣ ಸ್ಟುಡಿಯೋದಲ್ಲಿ ಡಿಸೆಂಬರ್ 4ರಂದು ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ಮಾತ್ರ ನೆರವೇರಲಿದೆ ಎಂದು ನಾಗಾರ್ಜುನ ಹೇಳಿದ್ದಾರೆ. ಹಾಗಾದರೆ ಅಖಿಲ್ ಹಾಗೂ ಝೈನಾಬ್ ಮದುವೆ ಯಾವಾಗ? ಇದಕ್ಕೂ ಉತ್ತರ ಸಿಕ್ಕಿದೆ. 2025ರಲ್ಲಿ ಈ ಜೋಡಿ ವಿವಾಹ ಆಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಶೋಭಿತಾ-ನಾಗ ಚೈತನ್ಯ ಹಳದಿ ಶಾಸ್ತ್ರ: ಇಲ್ಲಿವೆ ಸುಂದರ ಚಿತ್ರಗಳು
ಅಖಿಲ್ ಅಕ್ಕಿನೇನಿ ಹಾಗೂ ಝೈನಾಬ್ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರಿಗೆ ವಿವಾಹಕ್ಕೆ ಇನ್ನಷ್ಟು ಸಮಯಾವಕಾಶ ಬೇಕಿದೆ. ಅಖಿಲ್ ಸದ್ಯ ಸಹೋದರನ ಮದುವೆ ಸಂಭ್ರಮದಲ್ಲಿ ಬ್ಯುಸಿ ಇದ್ದಾರೆ. ಮದುವೆ ಪೂರ್ವ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಖಿಲ್ ಅಕ್ಕಿನೇನಿ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿಲ್ಲ. ನಾಗ ಚೈತನ್ಯ ಅವರಿಗೆ ಹೋಲಿಕೆ ಮಾಡಿದರೆ ಅಖಿಲ್ಗೆ ಯಾವುದೇ ಸ್ಟಾರ್ಡಂ ಸಿಕ್ಕಿಲ್ಲ. ತಂದೆ ಸ್ಟಾರ್ ಹೀರೋ ಆದರೂ ಇವರು ಚಿತ್ರರಂಗದಲ್ಲಿ ನೆಲೆ ಕಾಣಲು ಒದ್ದಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Tue, 3 December 24