‘ಗುಂಟೂರು ಖಾರಂ’, ‘ಹನುಮಾನ್’, ‘ಕ್ಯಾಪ್ಟನ್ ಮಿಲ್ಲರ್’; ರೇಟಿಂಗ್​ನಲ್ಲಿ ಗೆದ್ದವರು ಯಾರು?

ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್ ಎನ್ನುವ ಕಾರಣಕ್ಕೆ ‘ಗುಂಟೂರು ಖಾರಂ’ ಸಿನಿಮಾ ಸದ್ದು ಮಾಡಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಈ ಊಹೆ ತಪ್ಪಾಗಿದೆ.

‘ಗುಂಟೂರು ಖಾರಂ’, ‘ಹನುಮಾನ್’, ‘ಕ್ಯಾಪ್ಟನ್ ಮಿಲ್ಲರ್’; ರೇಟಿಂಗ್​ನಲ್ಲಿ ಗೆದ್ದವರು ಯಾರು?
‘ಗುಂಟೂರು ಖಾರಂ’, ‘ಹನುಮಾನ್’, ‘ಕ್ಯಾಪ್ಟನ್ ಮಿಲ್ಲರ್’ ರೇಟಿಂಗ್​
Edited By:

Updated on: Jan 13, 2024 | 11:19 AM

ಸಂಕ್ರಾಂತಿ ಸಂದರ್ಭದಲ್ಲಿ ಸಿನಿಪ್ರಿಯರು ಸಂಭ್ರಮಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ‘ಗುಂಟೂರು ಖಾರಂ’ (Guntur Kaaram), ‘ಹನುಮಾನ್’, ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳು ಒಟ್ಟೊಟ್ಟಿಗೆ ರಿಲೀಸ್ ಆಗಿವೆ. ಎಲ್ಲಾ ಸಿನಿಮಾಗಳು ಭಿನ್ನ ಕಥಾ ಹಂದರ ಹೊಂದಿರುವ ಕಾರಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದೆ. ಬುಕ್​ ಮೈ ಶೋ ಹಾಗೂ ಐಎಂಡಿಬಿಯಲ್ಲಿ ಈವರೆಗೆ (ಜನವರಿ 13, ಬೆಳಿಗ್ಗೆ 11 ಗಂಟೆ) ಯಾವ ಸಿನಿಮಾ ಎಷ್ಟು ರೇಟಿಂಗ್ ಪಡೆದಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಗುಂಟೂರು ಖಾರಂ’

ನಟ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರ ಕಾಂಬಿನೇಷನ್ ಎನ್ನುವ ಕಾರಣಕ್ಕೆ ‘ಗುಂಟೂರು ಖಾರಂ’ ಸಿನಿಮಾ ಸದ್ದು ಮಾಡಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಈ ಊಹೆ ತಪ್ಪಾಗಿದೆ. ಈ ಚಿತ್ರ ಮಿಶ್ರಪ್ರತಿಕ್ರಿಯೆ ಪಡೆದಿದೆ. ಹೀಗಾಗಿ ಬುಕ್​ ಮೈ ಶೋ ಹಾಗೂ ಐಎಂಡಿಬಿಯಲ್ಲಿ ಈ ಚಿತ್ರ ಕಡಿಮೆ ರೇಟಿಂಗ್ ಪಡೆದಿದೆ. ಬುಕ್ ಮೈ ಶೋನಲ್ಲಿ ‘ಗುಂಟೂರು ಖಾರಂ’ 85 ಸಾವಿರ ವೋಟ್ ಪಡೆದಿದ್ದು, 6.6 ರೇಟಿಂಗ್ ಪಡೆದಿದೆ. ಐಎಂಡಿಬಿಯಲ್ಲಿ 5.8 ರೇಟಿಂಗ್ ಸಿಕ್ಕಿದೆ. ಈ ಮೂಲಕ ಸಿನಿಮಾ ರೇಸ್​ನಿಂದ ಹಿಂದೆ ಸರಿದಂತೆ ಆಗಿದೆ.

ಹನುಮಾನ್

ಟ್ರೇಲರ್ ಹಾಗೂ ಟೀಸರ್ ಮೂಲಕ ಗಮನ ಸೆಳೆದ ‘ಹನುಮಾನ್’ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ತೆಜ ಸಜ್ಜಾ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ರಾಮಾಯಣದಲ್ಲಿ ಬರುವ ಹನುಮಂತನ ಸ್ಫೂರ್ತಿಯಾಗಿಟ್ಟುಕೊಂಡು ಕಥಾ ನಾಯಕನ ಪಾತ್ರ ಹೆಣೆಯಲಾಗಿದೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 86 ಸಾವಿರ ಮಂದಿ ರೇಟಿಂಗ್ ನೀಡಿದ್ದು 9.6 ಅಂಕ ಪಡೆದಿದೆ. ಐಎಂಡಿಬಿಯಲ್ಲಿ 8.9 ಅಂಕ ಸಿಕ್ಕಿದೆ. ಸಿನಿಮಾ ನೋಡಿದ ಅನೇಕರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ರದ ಕಥೆ, ವಿಎಫ್​ಎಕ್ಸ್ ಇಷ್ಟ ಆಗಿದೆ.

ಕ್ಯಾಪ್ಟನ್ ಮಿಲ್ಲರ್

ಧನುಷ್ ಹಾಗೂ ಶಿವರಾಜ್​ಕುಮಾರ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಕನ್ನಡದ ಮಂದಿ ಶಿವನ್ಣನ ಪಾತ್ರಕ್ಕೆ ನಿರ್ದೇಶಕರು ಸ್ಕೋಪ್ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಚಿತ್ರ ಬುಕ್ ಮೈ ಶೋನಲ್ಲಿ 12 ಸಾವಿರ ಮತ ಪಡೆದು 8.2 ರೇಟಿಂಗ್ ಪಡೆದಿದೆ. ಐಎಂಡಿಬಿಯಲ್ಲಿ 8.3 ರೇಟಿಂಗ್ ಸಿಕ್ಕಿದೆ.

ಇದನ್ನೂ ಓದಿ: ‘ಗುಂಟೂರು ಖಾರಂ’, ‘ಹನುಮಾನ್’, ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆ ವಿವರ ಇಲ್ಲಿದೆ..

ಮೆರಿ ಕ್ರಿಸ್​ಮಸ್

ಕತ್ರಿನಾ ಕೈಫ್ ಹಾಗೂ ವಿಜಯ್ ಸೇತುಪತಿ ನಟನೆಯ ‘ಮೆರಿ ಕ್ರಿಸ್​ಮಸ್’ ಕೂಡ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 7.9 ಹಾಗೂ ಐಎಂಡಿಬಿಯಲ್ಲಿ 7.6 ರೇಟಿಂಗ್ ಸಿಕ್ಕಿದೆ. ಈ ಚಿತ್ರಕ್ಕೆ ಕಡಿಮೆ ರೇಟಿಂಗ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us