‘ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ- ಸೊಹೈಲ್ ದಂಪತಿ ಮಧ್ಯೆ ಯಾವುದೂ ಸರಿ ಇಲ್ಲ?

ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಖತುರಿಯಾ ಅವರ 2022ರ ವಿವಾಹ ಆದರು. ಇವರ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂಬ ವದಂತಿಗಳು ಹರಡುತ್ತಿವೆ. ಸೊಹೈಲ್ ಅವರು ಇದನ್ನು ನಿರಾಕರಿಸಿದ್ದಾರೆ, ಆದರೆ ಅವರ ಸ್ಪಷ್ಟೀಕರಣವು ಅಭಿಮಾನಿಗಳನ್ನು ತೃಪ್ತಿಪಡಿಸಿಲ್ಲ. ಹನ್ಸಿಕಾ ತಮ್ಮ ತಾಯಿಯ ಮನೆಗೆ ಹೋಗಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ. ಈ ಸುದ್ದಿಯಿಂದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

‘ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ- ಸೊಹೈಲ್ ದಂಪತಿ ಮಧ್ಯೆ ಯಾವುದೂ ಸರಿ ಇಲ್ಲ?
ಹನ್ಸಿಕಾ
Edited By:

Updated on: Jul 21, 2025 | 10:52 AM

ಹನ್ಸಿಕಾ ಮೋಟ್ವಾನಿ ಹಾಗೂ ಸೊಹೈಲ್ ಖತುರಿಯಾ ಅವರು 2022ರಲ್ಲಿ ವಿವಾಹ ಆದರು. ಇವರ ವಿವಾಹ ಆಗಿ ಮೂರು ವರ್ಷಗಳು ಕಳೆದಿವೆ. ಆದರೆ, ಈ ದಾಂಪತ್ಯದಲ್ಲಿ ಯಾವುದೂ ಸರಿ ಇಲ್ಲ ಎಂಬ ವದಂತಿಗಳು ಹುಟ್ಟಿಕೊಂಡಿದೆ ಎಂದರೆ ನಂಬಲೇಬೇಕು. ಈ ವಿಚಾರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಸೊಹೈಲ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಹನ್ಸಿಕಾ (Hansika ) ಅವರ ಸ್ಪಷ್ಟನೆ ಸರಿ ಇಲ್ಲ ಎಂದು ಫ್ಯಾನ್ಸ್ ಆರೋಪಿಸುತ್ತಾ ಇದ್ದಾರೆ.

ಹನ್ಸಿಕಾ ಮೋಟ್ವಾನಿ ಅವರು ಡಿಸೆಂಬರ್ 2022ರಲ್ಲಿ ವಿವಾಹ ಆದರು. ಇವರು ಮದುವೆ ಆದ ಬಳಿಕ ಹಲವು ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಈಗ ಹನ್ಸಿಕಾ ಹಾಗೂ ಸೊಹೈಲ್ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಪರಿಣಾಮ ಹನ್ಸಿಕಾ ಅವರು ತಾಯಿ ಮನೆಗೆ ಶಿಫ್ಟ್ ಆಗಿದ್ದಾರಂತೆ. ಅಂದರೆ ಇಬ್ಬರೂ ಬೇರೆ ಆಗಿ ವಾಸ ಮಾಡುತ್ತಿರುವುದು ಮೂಲಗಳಿಂದ ಸ್ಪಷ್ಟವಾಗಿದೆ ಎಂದೇ ಹೇಳಬಹುದು.

ಈ ಬಗ್ಗೆ ಸೊಹೈಲ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇದು ಸತ್ಯ ಅಲ್ಲ’ ಎಂದು ಹೇಳಿದ್ದಾರೆ. ಆದರೆ, ಮುಂದೆ ಏನನ್ನೂ ಹೇಳಿಲ್ಲ. ಈ ವಿಚಾರ ಸದ್ಯ ಚರ್ಚೆಯ ಕೇಂದ್ರ ಬಿಂದು ಆಗಿದೆ. ಅದ್ದೂರಿ ವಿವಾಹ ಇವರು ಈ ರೀತಿ ಬೇರೆ ಆಗುತ್ತಿದ್ದಾರೆ ಎಂಬ ವಿಚಾರ ತಿಳಿದು ಫ್ಯಾನ್ಸ್ ಬೇಸರಗೊಂಡಿದ್ದಾರೆ. ಜೈಪುರದಲ್ಲಿ ಹನ್ಸಿಕಾ ಹಾಗೂ ಸೊಹೈಲ್ ಅವರು ವಿವಾಹ ಆದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತು. ಈಗ ಇವರು ಬೇರೆ ಆಗುತ್ತಿರುವುದು ಸಾಕಷ್ಟು ಶಾಕಿಂಗ್ ಎನಿಸಿದೆ.

ಇದನ್ನೂ ಓದಿ
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?
ಈ ಸಸ್ಪೆನ್ಸ್ ಥ್ರಿಲ್ಲರ್​ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಲೇಬೇಡಿ
‘ಎಕ್ಕ’ ಚಿತ್ರಕ್ಕೆ ಸರಿ ಸಮಾನವಾಗಿ ಗಳಿಕೆ ಮಾಡುತ್ತಿದೆ ‘ಜೂನಿಯರ್’
ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಎಕ್ಕ’ ಸಿನಿಮಾ; ಭಾನುವಾರ ಬಂಗಾರದ ಬೆಳೆ

ಇದನ್ನೂ ಓದಿ: ಅತ್ತಿಗೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಪುನೀತ್ ಸಿನಿಮಾ ನಟಿ ಹನ್ಸಿಕಾ

ಸೊಹೈಲ್​ಗೆ ಇದು ಮೊದಲ ಮದುವೆ ಅಲ್ಲವೇ ಅಲ್ಲ. ಈ ಮೊದಲು ಅವರು ರಿಂಕಿ ಎಂಬುವವರನ್ನು ಮದುವೆ ಆಗಿದ್ದರು. ನಂತರ ವಿಚ್ಛೇದನ ಆಯಿತು. ಹೀಗಾಗಿ, ಹನ್ಸಿಕಾ ಪತ್ನಿ ಬಿಟ್ಟವನನ್ನು ಮದುವೆ ಆಗುತ್ತಿದ್ದಾರೆ ಎಂದಾಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ವಿಚಿತ್ರ ಎಂದರೆ ಹನ್ಸಿಕಾ ಅವರು ರಿಂಕಿಯ ಗೆಳತಿಯೇ ಆಗಿದ್ದರು. ಈಗ ಇವರ ಸಂಬಂಧ ಕೂಡ ಕೊನೆ ಆಗುತ್ತಾ ಇದೆ ಅನ್ನೋದು ವಿಶೇಷ. ಹನ್ಸಿಕಾ ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಇದ್ದಾರೆ. ಅವರು ಪುನೀತ್ ಜೊತೆ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us