‘ಎಕ್ಕ’ ಚಿತ್ರಕ್ಕೆ ಸರಿ ಸಮಾನವಾಗಿ ಗಳಿಕೆ ಮಾಡುತ್ತಿದೆ ‘ಜೂನಿಯರ್’; ಕಿರೀಟಿಗೆ ಪರ್ಫೆಕ್ಟ್ ಲಾಂಚ್
ಕಿರೀಟಿ ರೆಡ್ಡಿ ಅವರ ಚೊಚ್ಚಲ ಚಿತ್ರ 'ಜೂನಿಯರ್' ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ'ಎಕ್ಕ' ಚಿತ್ರಕ್ಕೆ ಸರಿಸಮಾನವಾದ ಸ್ಪರ್ಧೆ ನೀಡುತ್ತಿದೆ. ಇದು ಕಿರೀಟಿಗೆ ಪರಿಪೂರ್ಣ ಲಾಂಚ್ ಆಗಿದೆ ಎಂದು ಹೇಳಬಹುದು. ಚಿತ್ರದಲ್ಲಿ ಅವರ ನಟನೆ ಮತ್ತು ನೃತ್ಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದು ಯುವ ಹೀರೋಗೆ ಸಿನಿಮಾ ರಂಗದಲ್ಲಿ ಯಶಸ್ಸು ಸಿಗಬೇಕು ಎಂದರೆ ಆರಂಭದ ಸಿನಿಮಾಗಳೇ ಯಶಸ್ಸು ಕಾಣಬೇಕು. ಆಗ ಚಿತ್ರರಂಗದ ಹಾದಿ ಸುಗಮ ಆಗುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಆಫರ್ಗಳು ಬರುತ್ತಾ ಹೋಗುತ್ತವೆ. ಈಗ ‘ಜೂನಿಯರ್’ ಸಿನಿಮಾದಲ್ಲಿ ನಟಿಸಿರೋ ಕಿರೀಟಿ ರೆಡ್ಡಿಗೂ ಅಂಥದ್ದೇ ಒಂದು ಪರ್ಫೆಕ್ಟ್ ಲಾಂಚ್ ಸಿಕ್ಕಿದೆ. ‘ಜೂನಿಯರ್’ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಅದೇ ರೀತಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ‘ಎಕ್ಕ’ (Ekka Movie) ಹಾಗೂ ‘ಜೂನಿಯರ್’ ಸರಿ ಸಮಾನವಾಗಿ ಕಲೆಕ್ಷನ್ ಮಾಡುತ್ತಿವೆ.
‘ಜೂನಿಯರ್’ ಸಿನಿಮಾ ಕಿರೀಟಿ ನಟನೆಯ ನಟನೆಯ ಮೊದಲ ಚಿತ್ರ. ಜನಪ್ರಿಯ ರಾಜಕಾರಣಿ ಜನಾರ್ಧನ್ ರೆಡ್ಡಿ ಅವರ ಪುತ್ರನೇ ಕಿರೀಟಿ. ಅವರು ಪರ್ಫೆಕ್ಟ್ ಲಾಂಚ್ಗಾಗಿ ಕಾಯುತ್ತಿದ್ದರು. ಆ ರೀತಿಯ ಲಾಂಚ್ ಈ ಚಿತ್ರದ ಮೂಲಕ ಸಿಕ್ಕಿದೆ. ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಿದ್ದು ಜನರು ಅಲ್ಲಿಯೂ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
‘ಜೂನಿಯರ್’ ಚಿತ್ರ ಮೂರು ದಿನಕ್ಕೆ 5.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ! ಯುವ ನಟನೆಯ ‘ಎಕ್ಕ’ ಸಿನಿಮಾ ಮೂರು ದಿನಕ್ಕೆ ಮಾಡಿರೋದು 5.66 ಕೋಟಿ ರೂಪಾಯಿ ಗಳಿಕೆ. ಅಂದರೆ ಎರಡೂ ಸಿನಿಮಾಗಳು ಸರಿ ಸಮಾನವಾಗಿ ಕಾಂಪಿಟೇಷನ್ ನೀಡುತ್ತಿವೆ. ಯಾರೂ ಮಾಡಲಾಗದ ಸಾಧನೆಯನ್ನು ಯಂಗ್ ಹೀರೋಗಳು ಮಾಡಿ ತೋರಿಸಿದ್ದಾರೆ.
ಶುಕ್ರವಾರ 1.5 ಕೋಟಿ ರೂಪಾಯಿ, ಶನಿವಾರ 1.8 ಕೋಟಿ ರೂಪಾಯಿ, ಭಾನುವಾರ 2.10 ಕೋಟಿ ರೂಪಾಯಿನ ‘ಜೂನಿಯರ್’ ಸಿನಿಮಾ ಕಲೆ ಹಾಕಿದೆ. ಈ ಚಿತ್ರವನ್ನು ಜನರು ತುಂಬಾನೇ ಇಷ್ಟಪಟ್ಟು ವೀಕ್ಷಣೆ ಮಾಡುತ್ತಿದ್ದಾರೆ. ಈ ಸಿನಿಮಾ ಕೂಡ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರರಂಗದ ಪಾಲಿಗೆ ಈ ಬೆಳವಣಿಗೆ ಖುಷಿ ನೀಡಿದೆ.
ಇದನ್ನೂ ಓದಿ: ಮೂರು ದಿನಕ್ಕೆ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಎಕ್ಕ’ ಸಿನಿಮಾ; ಭಾನುವಾರ ಬಂಗಾರದ ಬೆಳೆ
‘ಜೂನಿಯರ್’ ಸಿನಿಮಾದಲ್ಲಿ ದೊಡ್ಡ ತಾರಾ ಬಳಗ ಇದೆ. ಕಿರೀಟಿ ಜೊತೆ ಶ್ರೀಲೀಲಾ, ರವಿಚಂದ್ರನ್, ಜೆನೀಲಿಯಾ ಮೊದಲಾದವರು ನಟಿಸಿದ್ದಾರೆ. ಈ ಕಾರಣದಿಂದಲೂ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಿದೆ. ಚಿತ್ರದಲ್ಲಿ ಕಿರೀಟಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








