ಸ್ಯಾಂಡಲ್ವುಡ್ನಲ್ಲಿ ನವ ಹೀರೋಗಳ ದರ್ಬಾರ್; ಚಿತ್ರರಂಗಕ್ಕೆ ಹೊಸ ಚೈತನ್ಯ
ಸ್ಯಾಂಡಲ್ವುಡ್ನಲ್ಲಿ ಕಳೆದ ಆರು ತಿಂಗಳಿಂದ ಕಾರ್ಮೋಡ ಕವಿದಿತ್ತು. 'ಎಕ್ಕ' ಮತ್ತು 'ಜೂನಿಯರ್' ಚಿತ್ರಗಳು ಯಶಸ್ವಿಯಾಗಿ ಬಾಕ್ಸ್ ಆಫೀಸ್ ಅನ್ನು ಪುಟಿದೆಬ್ಬಿಸಿದೆ. ಹೊಸ ನಟರಾದ ಯುವರಾಜ್ ಕುಮಾರ್ ಮತ್ತು ಕಿರೀಟಿ ಅವರ ಅಭಿನಯ, ಚಿತ್ರದ ಕಥೆ ಹಾಗೂ ಪ್ರಚಾರ ಕಾರ್ಯಗಳು ಈ ಯಶಸ್ಸಿಗೆ ಕಾರಣ. ಈ ಚಿತ್ರಗಳು ಗಳಿಸಿದ ಲಾಭ ಕನ್ನಡ ಚಿತ್ರರಂಗಕ್ಕೆ ಹೊಸ ಉತ್ಸಾಹ ತುಂಬಿದೆ.

ಸ್ಯಾಂಡಲ್ವುಡ್ನಲ್ಲಿ ಕಳೆದ ಆರು ತಿಂಗಳಿಂದ ಕವಿದಿದ್ದ ಕಾರ್ಮೋಡ ಮಾಯವಾಗಿದೆ. ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಹಾಗೂ ಕಿರೀಟಿ ಅಭಿನಯದ ‘ಜೂನಿಯರ್’ (Junior Movie) ಸಿನಿಮಾಗಳು ಗೆಲುವಿನ ನಗೆ ಬೀರಿವೆ. ಸತತವಾಗಿ ಸೊರಗಿ ಹೋಗಿದ್ದ ಬಾಕ್ಸ್ ಆಫೀಸ್ ಈಗ ಮತ್ತೆ ಪುಟಿದೆದ್ದು ನಿಂತಿದೆ. ಈ ನವ ಹೀರೋಗಳು ಮಾಡಿದ ಸಾಧನೆ ಅಂತಿಂಥದ್ದಲ್ಲ. ಆ ಬಗ್ಗೆ ಇಲ್ಲಿದೆ ಒಂದು ವಿವರ.
ಅದು 2024ರ ಕ್ರಿಸ್ಮಸ್ ಸಮಯ. ಕನ್ನಡದಲ್ಲಿ ಉಪೇಂದ್ರ ನಟಿಸಿ ನಿರ್ದೇಶಿಸಿದ ‘ಯುಐ’ ಹಾಗೂ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲಿಸ್ ಆದವು. ಈ ಚಿತ್ರದ ಮೂಲಕ ಅವರು ದೊಡ್ಡ ಗೆಲುವು ಕಂಡರು. ಈ ಸಿನಿಮಾದಿಂದ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಬಿಸ್ನೆಸ್ ಆಯಿತು. ಆದರೆ, ಇದಾದ ಬಳಿಕ ಯಾವುದೇ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡಲೇ ಇಲ್ಲ.
ಈಗಾಗಲೇ 2025ರ ಏಳು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಈ ಅವಧಿಯಲ್ಲಿ 100ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬಂದಿವೆ. ಇದರಲ್ಲಿ ಶರಣ್ ನಟನೆಯ ‘ಛೂ ಮಂತರ್’ ಚಿತ್ರ ಮಾತ್ರ 5 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಉಳಿದ ಎಲ್ಲಾ ಸಿನಿಮಾಗಳು ಹೇಳಿಕೊಳ್ಳುವಂಥ ಕಮಾಯಿ ಮಾಡಲು ಸಾಧ್ಯವಾಗಿರಲೇ ಇಲ್ಲ.
ಕನ್ನಡ ಚಿತ್ರರಂಗದ ಸ್ಟಾರ್ಗಳು ವರ್ಷಕ್ಕೆ ಒಂದು ಸಿನಿಮಾ ಕೊಡೋದು ಕಷ್ಟ ಎಂಬಂತಾಗಿದೆ. ಹೊಸ ಹೀರೋಗಳ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಎಂಬ ದೂರಿದೆ. ಈ ಕಾರಣಕ್ಕೆ ಎಲ್ಲರೂ ಸ್ಟಾರ್ ಹೀರೋ ಸಿನಿಮಾಗಳಿಗಾಗಿ ಕಾದಿದ್ದರು. ಈ ವರ್ಷ ತೆರೆಮೇಲೆ ಬರೋ ಸ್ಟಾರ್ ಹೀರೋಗಳ ಪಟ್ಟಿ ಕೂಡ ಕಡಿಮೆ ಇದೆ. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ ‘45’, ರಿಷಬ್ ಶೆಟ್ಟಿ ನಟನೆಯ ‘ಕಾಂತರ’, ಧ್ರುವ ಅಭಿನಯದ ‘ಕೆಡಿ’ ಸಿನಿಮಾಗಳು ಈ ವರ್ಷ ರಿಲೀಸ್ ಆಗ ಬೇಕಿರುವ ದೊಡ್ಡ ಚಿತ್ರಗಳು. ಇವರಿಗಾಗಿ ಎಲ್ಲರೂ ಚಾತಕ ಪಕ್ಷಿಯಂತೆ ಕಾದಿದ್ದಾಗ ಬಂದಿದ್ದೇ ‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ.
‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾಗಳ ಹಿಂದೆ ದೊಡ್ಡ ನಿರ್ಮಾಣ ಸಂಸ್ಥೆ ಇದೆ ನಿಜ. ಆದರೆ, ಈ ಮೊದಲು ಕೂಡ ದೊಡ್ಡ ಸಂಸ್ಥೆಗಳು ಹೊಸ ಹೀರೋಗಳ ಸಿನಿಮಾಗೆ ಬಂಡವಾಳ ಹೂಡಿ ಕೈ ಸುಟ್ಟುಕೊಂಡ ಉದಾಹರಣೆ ಇದೆ. ಆದರೆ, ಈ ಸಿನಿಮಾ ವಿಚಾರಗಳಲ್ಲಿ ಆ ರೀತಿ ಆಗಿಲ್ಲ. ಚಿತ್ರವನ್ನು ಜನರ ಎದುರು ತಲುಪಿಸಲು ಈ ತಂಡದವರು ಸಾಕಷ್ಟು ಶ್ರಮ ಹಾಕಿದ್ದಾರೆ. ಸಾಕಷ್ಟು ಪ್ರಚಾರ ಮಾಡಿದ್ದಾರೆ. ಚಿತ್ರದ ಕಥೆ ಹಾಗೂ ನಿರೂಪಣೆ ಜನರಿಗೆ ಇಷ್ಟ ಆಗಿದೆ. ಹೊಸ ಹೀರೋಗಳ ಪರ್ಫಾರ್ಮೆನ್ಸ್ನ ಜನರು ಮೆಚ್ಚಿಕೊಂಡಿದ್ದಾರೆ. ಇದೆಲ್ಲವೂ ತಂಡಕ್ಕೆ ಸಹಕಾರಿ ಆಗಿದೆ.
ಇದನ್ನೂ ಓದಿ: ‘ಎಕ್ಕ’ ಚಿತ್ರಕ್ಕೆ ಸರಿ ಸಮಾನವಾಗಿ ಗಳಿಕೆ ಮಾಡುತ್ತಿದೆ ‘ಜೂನಿಯರ್’; ಕಿರೀಟಿಗೆ ಪರ್ಫೆಕ್ಟ್ ಲಾಂಚ್
‘ಎಕ್ಕ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 5.66 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನು, ‘ಜೂನಿಯರ್’ ಸಿನಿಮಾ 5.40 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಎರಡೂ ಸಿನಿಮಾಗಳು ಚಿತ್ರರಂಗದ ಗೆಲುವಿಗೆ ಸಹಕಾರ ನೀಡಿವೆ. ಮುಂದಿನ ದಿನಗಳಲ್ಲಿ ಬರುವ ಚಿತ್ರಕ್ಕೆ ಈ ಗೆಲುವು ಸಹಕಾರಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








