ಕಿರೀಟಿ ರೆಡ್ಡಿಯ ‘ಜೂನಿಯರ್’ ಪ್ರೀ ರಿಲೀಸ್ನಲ್ಲಿ ತಾರಾ ಮೇಳ, ಯಾರು ಏನು ಹೇಳಿದರು?
Junior movie: ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಟನೆಯ ಮೊದಲ ಸಿನಿಮಾ ‘ಜೂನಿಯರ್’ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಚಿತ್ರೀಕರಣ ಶುರುವಾಗಿ ಐದು ವರ್ಷಕ್ಕೂ ಹೆಚ್ಚು ಸಮಯ ಆಗಿದೆ. ಇಂದು ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು, ಶಿವರಾಜ್ ಕುಮಾರ್, ಜೆನಿಲಿಯಾ, ರವಿಚಂದ್ರನ್, ಜನಾರ್ದನ ರೆಡ್ಡಿ, ಶ್ರೀಲೀಲಾ ಅವರುಗಳು ಹಾಜರಿದ್ದರು. ಯಾರು ಏನು ಹೇಳಿದರು? ಇಲ್ಲಿದೆ ಮಾಹಿತಿ...

ಮಾಜಿ ಸಚಿವ ಜನಾರ್ದನ ರೆಡ್ಡಿಯ (Janardhana Reddy) ಪುತ್ರ ಕಿರೀಟಿ ರೆಡ್ಡಿ (Kireeti Reddy) ನಟನೆಯ ಮೊದಲ ಸಿನಿಮಾ ‘ಜೂನಿಯರ್’ ಪ್ರೀ ರಿಲೀಸ್ ಇವೆಂಟ್ ಇಂದು (ಜುಲೈ 13) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಟ ಶಿವರಾಜ್ ಕುಮಾರ್ ಭಾಗವಹಿಸಿದ್ದರು. ಜೊತೆಗೆ ಜನಾರ್ದನ ರೆಡ್ಡಿ, ನಟಿ ಜೆನಿಲಿಯಾ ಡಿಸೋಜಾ, ರವಿಚಂದ್ರನ್, ಶ್ರೀಲೀಲಾ ಇನ್ನೂ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸೆಲೆಬ್ರಿಟಿಗಳು ವೇದಿಕೆ ಮೇಲೆ ಹಲವು ವಿಷಯಗಳನ್ನು ಮಾತನಾಡಿದರು. ಯಾರು ಏನು ಹೇಳಿದರು? ಇಲ್ಲಿದೆ ಮಾಹಿತಿ…
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ಶಿವರಾಜ್ ಕುಮಾರ್, ತಮ್ಮ ಎಂದಿನ ವಿನಯತೆಯಿಂದ ವೇದಿಕೆ ಮೇಲಿದ್ದ ಎಲ್ಲ ಕಲಾವಿದರನ್ನು ಕೊಂಡಾಡಿದರು. ನಟ ರವಿಚಂದ್ರನ್ ಹಾಗೂ ನನ್ನದು ಎರಡು ದೇಹ ಒಂದೇ ಆತ್ಮ ಎಂದರು. ಶ್ರೀಲೀಲಾ ಬಗ್ಗೆ ಮಾತನಾಡಿ, ನಾನು ಮಾಧುರಿ ದೀಕ್ಷಿತ್ ಅಭಿಮಾನಿ ಈಗ ಶ್ರೀಲೀಲಾ ಅಭಿಮಾನಿ ಆಗಿದ್ದೀನಿ ಎಂದರು. ಇನ್ನು ಕಿರೀಟಿಯ ಬಗ್ಗೆ ಮಾತನಾಡಿ, ‘ಕಿರೀಟಿಯ ಡ್ಯಾನ್ಸ್ ನೋಡಿದರೆ ಅಪ್ಪು ಡ್ಯಾನ್ಸ್ ನೋಡಿದಂತೆ ಅನಿಸುತ್ತದೆ. ಅವರಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.
ಜನಾರ್ದನ ರೆಡ್ಡಿ ಮಾತನಾಡಿ, ‘ದೊಡ್ಮನೆಯೊಟ್ಟಿಗೆ ನಮ್ಮ ಗೆಳೆತನ ಬಹಳ ಹಳೆಯದ್ದು. ಪುನೀತ್ ರಾಜ್ಕುಮಾರ್ ಎದುರುಗಡೆ ನನ್ನ ಮಗ ‘ಎಕ್ಕ ರಾಜ ರಾಣಿ’ ಹಾಡಿಗೆ ಡ್ಯಾನ್ಸ್ ಮಾಡಿದ್ದ. ‘ಜೇಮ್ಸ್’ ಚಿತ್ರದ ವೇಳೆ 10 ದಿನ ಶೂಟಿಂಗ್ ನಲ್ಲಿ ಕಿರೀಟಿ ಅಪ್ಪು ಜೊತೆಗೇ ಇದ್ದ. ಶಿಸ್ತಿನಿಂದ ಹೇಗೆ ಇರಬೇಕು ಎಂಬುದನ್ನು ಅವರು ಹೇಳಿಕೊಟ್ಟಿದ್ದಾರೆ. ನನಗೂ ಸಹ ಸಿನಿಮಾ ನಿರ್ದೇಶಕ ಆಗುವ ಆಸೆ ಇತ್ತು. ಚೆನ್ನೈ ನಲ್ಲೇ ಒಂದು ವರ್ಷ ಇದ್ದೇ ಆದ್ರೆ ದುಡ್ಡು ಮಾಡಿ ನಂತರ ಸಿನಿಮಾ ಮಾಡೋಣ ಅಂತ ವಾಪಸ್ ಬಂದೆ. ಶ್ರೀಲೀಲಾ ಬಗ್ಗೆ ಮಾತನಾಡಿ, ದೀಪಿಕಾ ಪಡುಕೋಣೆ, ಆಲಿಯಾ ಭಟ್ ರೀತಿಯ ಯಶಸ್ಸು ಅವರಿಗೆ ಸಿಗಲಿ, ನಾನು ಅವರನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೀನಿ’ ಎಂದು ಶುಭ ಹಾರೈಸಿದರು.
ಇದನ್ನೂ ಓದಿ:ಮಯಾಮಿಯಲ್ಲಿ ಸಖತ್ ಎಂಜಾಯ್ ಮಾಡಿದ ಶ್ರೀಲೀಲಾ, ವಿಡಿಯೋ ನೋಡಿ…
ನಟಿ ಶ್ರೀಲೀಲಾ ಮಾತನಾಡಿ, ‘ನಾನು ಮೊದಲ ವರ್ಷ ಎಂಬಿಬಿಎಸ್ ವಿದ್ಯಾರ್ಥಿ ಆಗಿದ್ದಾಗ ಈ ಸಿನಿಮಾದ ಚಿತ್ರೀಕರಣ ಪ್ರಾರಂಬವಾಯ್ತು, ಈಗ ನಾನು ಡಾಕ್ಟರ್ ಈಗ ಬಿಡುಗಡೆ ಆಗುತ್ತಿದೆ. ಸಿನಿಮಾದ ನಿರ್ದೇಶಕರು ನಿಧಾನವಾಗಿ ಆದರೆ ಒಳ್ಳೆ ಸಿನಿಮಾ ಮಾಡಿದ್ದಾರೆ. ಆರು ತಿಂಗಳಿಗೆ ಒಂದಾದರೂ ಕನ್ನಡ ಸಿನಿಮಾ ಆಫರ್ಗಳು ನನಗೆ ಸಿಗಲಿ ಎಂಬುದು ನನ್ನ ಆಸೆ. ನಾನು ಆ ಕಾಲದಲ್ಲಿ ಇದ್ದಿದ್ರೆ ರವಿಚಂದ್ರನ್ ಅವರಿಗೆ ನಾಯಕಿ ಆಗುತ್ತಿದ್ದೆ. ಇನ್ನು ಶಿವರಾಜ್ ಕುಮಾರ್ ಅವರ ಸಿನಿಮಾದಲ್ಲಿ ನಟಿಸಿಯೇ ನಟಿಸುತ್ತೀನಿ ಎಂಬ ನಂಬಿಕೆ ನನಗೆ ಇದೆ’ ಎಂದಿದ್ದಾರೆ.
ನಟ ಕಿರೀಟಿ ಮಾತನಾಡಿ, ‘ನನಗೆ ಅಪ್ಪು ಅವರ ‘ಜಾಕಿ’ ಸಿನಿಮಾ ನಟನಾಗಲು ಸ್ಫೂರ್ತಿ ಕೊಟ್ಟಿತು. ‘ಜೋಗಿ’ ಸಿನಿಮಾದ ಹೊಡಿ ಮಗ ಸಾಂಗ್ ನಾನು ಮೊದಲು ಡಾನ್ಸ್ ಮಾಡಿದ್ದು’ ಎಂದು ನೆನಪು ಮಾಡಿಕೊಂಡರು. ‘13 ವರ್ಷ ಆದ್ಮೇಲೆ ಕನ್ನಡಕ್ಕೆ ಜೆನಿಲಿಯ ಕಮ್ ಬ್ಯಾಕ್ ಮಾಡಿದ್ದಾರೆ. ಗಿರಿಜಾ ಲೋಕೇಶ್ ಅವರು ಒಳ್ಳೆ ಪಾತ್ರ ಮಾಡಿದ್ದಾರೆ. ನಮ್ಮ ತಂದೆ ನನಗೋಸ್ಕರ ತುಂಬಾ ತ್ಯಾಗ ಮಾಡಿದ್ದಾರೆ. ನನಲ್ಲಿ ಛಲ ತುಂಬಿದ್ದೆ ನನ್ನ ತಂದೆ, ಅದ್ಭುತವಾದ ತಂದೆಗೆ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ, ಅಣ್ಣನ ಸಮಾನ ಯುವ ಅವರ ಎಕ್ಕ ಸಿನಿಮಾ ದಿನನೇ ನಮ್ಮ ಸಿನಿಮಾ ರಿಲೀಸ್ ಆಗ್ತಿದೆ. ಅವರ ಸಿನಿಮಾಗೂ ಕನ್ನಡಿಗರ ಆಶೀರ್ವಾದ ಇರಲಿ. ತಾಯಿ ಸಮಾ ಅಶ್ವಿನಿ ಮೇಡಂ ಆಶೀರ್ವಾದ ನನ್ನ ಮೇಲಿದೆ’ ಎಂದರು.
ನಟಿ ಜೆನಿಲಿಯಾ ಸರಳವಾಗಿ ಮಾತನಾಡಿ, ‘ನನ್ನ ಮೊದಲ ಕನ್ನಡ ಸಿನಿಮಾ ಶಿವರಾಜ್ ಕುಮಾರ್ ಅವರ ಜೊತೆಗೆ ನಟಿಸಿದ ‘ಸತ್ಯ ಇನ್ ಲವ್’. ಈಗ 13 ವರ್ಷದ ಬಳಿಕ ಕನ್ನಡ ಸಿನಿಮಾ ಮಾಡಿದ್ದೀನಿ. ಕನ್ನಡ ಚಿತ್ರರಂಗ ಬಹಳ ಲಕ್ಕಿ ಏಕೆಂದರೆ ಅವರಿಗೆ ಕಿರೀಟಿ ಅಂಥಹಾ ನಾಯಕ ನಟ ಸಿಕ್ಕಿದ್ದಾರೆ’ ಎಂದರು. ‘ಜೂನಿಯರ್’ ಸಿನಿಮಾ ಜುಲೈ 18 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




