ಎರಡನೇ ದಿನ ಎಷ್ಟು ಗಳಿಸಿತು ‘ಜೂನಿಯರ್’, ಕರ್ನಾಟದಲ್ಲೆಷ್ಟು, ತೆಲುಗಲ್ಲೆಷ್ಟು?
Kireeti Reddy: ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್’ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಿದ್ದು ಹಲೆವೆಡೆ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ‘ಜೂನಿಯರ್’ ಸಿನಿಮಾ ಮೊದಲ ದಿನ ಉತ್ತಮ ಗಳಿಕೆಯನ್ನೇ ಮಾಡಿತ್ತು. ಇದೀಗ ಸಿನಿಮಾದ ಎರಡನೇ ದಿನದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಎರಡನೇ ದಿನ ಸಿನಿಮಾ ಗಳಿಸಿದ್ದೆಷ್ಟು?

ಜನಾರ್ದನ ರೆಡ್ಡಿ ಪುತ್ರಿ ಕಿರೀಟಿ ರೆಡ್ಡಿಯ (Kireeti Reddy) ಮೊದಲ ಸಿನಿಮಾ ‘ಜೂನಿಯರ್’ ಇದೇ ಶುಕ್ರವಾರ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದು, ರವಿಚಂದ್ರನ್, ಜೆನಿಲಿಯಾ ಸೇರಿದಂತೆ ಇನ್ನೂ ಅನೇಕ ಸ್ಟಾರ್ ತಾರಾಗಣ ಚಿತ್ರದಲ್ಲಿದೆ. ಜನಾರ್ದನ ರೆಡ್ಡಿಯ ಪುತ್ರನ ಎಂಟ್ರಿ ಸಿನಿಮಾ ಆಗಿರುವ ಕಾರಣ ಸಹಜವಾಗಿಯೇ ಅದ್ಧೂರಿಯಾಗಿಯೇ ಚಿತ್ರೀಕರಣಗೊಂಡಿದೆ ಮತ್ತು ಪ್ರಚಾರವೂ ಜೋರಾಗಿಯೇ ಆಗಿದೆ. ಇದೀಗ ಸಿನಿಮಾ ಬಿಡುಗಡೆ ಆಗಿ ಎರಡು ದಿನವಾಗಿದ್ದು, ಸಿನಿಮಾದ ಕಲೆಕ್ಷನ್ ಹೇಗಿದೆ? ಇಲ್ಲಿದೆ ರಿಪೋರ್ಟ್.
‘ಜೂನಿಯರ್’ ಸಿನಿಮಾ ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ. ಮೊದಲ ದಿನ ‘ಜೂನಿಯರ್’ ಸಿನಿಮಾ ಎರಡೂ ಭಾಷೆಗಳಿಂದ ಸೇರಿ 1.40 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಮೊದಲ ದಿನ ಸಿನಿಮಾ ನೋಡಿದವರು ಸಿನಿಮಾದ ಬಗ್ಗೆ ಸಾಕಷ್ಟು ಒಳ್ಳೆ ಪ್ರತಿಕ್ರಿಯೆಗಳನ್ನೇ ನೀಡಿದ್ದಾರೆ. ವಿಶೇಷವಾಗಿ ನಟ ಕಿರೀಟಿ ರೆಡ್ಡಿಯ ಡ್ಯಾನ್ಸ್, ಫೈಟ್, ಪ್ರೆಸೆನ್ಸ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹಾಗಾಗಿ ಎರಡನೇ ದಿನ ಸಿನಿಮಾದ ಕಲೆಕ್ಷನ್ ತುಸು ಉತ್ತಮಗೊಂಡಿದೆ.
‘ಜೂನಿಯರ್’ ಸಿನಿಮಾ ಶನಿವಾರದಂದು ಕನ್ನಡಕ್ಕಿಂತಲೂ ತೆಲುಗಿನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ ‘ಜೂನಿಯರ್’ ಸಿನಿಮಾ ಶನಿವಾರದಂದು 1.55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅದೇ ಮೊದಲ ದಿನ ಅಂದರೆ ಶುಕ್ರವಾರದಂದು ಇದೇ ಸಿನಿಮಾ ತೆಲುಗಿನಲ್ಲಿ 1.30 ಕೋಟಿ ಮಾತ್ರವೇ ಗಳಿಕೆ ಮಾಡಿತ್ತು. ಕನ್ನಡದಲ್ಲಿಯೂ ಸಹ ‘ಜೂನಿಯರ್’ ಸಿನಿಮಾದ ಕಲೆಕ್ಷನ್ ತುಸು ಉತ್ತಮಗೊಂಡಿದೆ. ‘ಜೂನಿಯರ್’ ಸಿನಿಮಾ ಕನ್ನಡದಲ್ಲಿ ಶನಿವಾರದಂದು ಸುಮಾರು 50 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಅದೇ ಮೊದಲ ದಿನ ಕೇವಲ 30 ಲಕ್ಷಕ್ಕಿಂತಲೂ ತುಸುವಷ್ಟೆ ಹೆಚ್ಚು ಹಣ ಗಳಿಕೆ ಮಾಡಿತ್ತು.
ಇದನ್ನೂ ಓದಿ:ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
ಇನ್ನು ಒಟ್ಟು ಕಲೆಕ್ಷನ್ ಲೆಕ್ಕ ಹಾಕುವುದಾದರೆ ಮೊದಲ ದಿನ ‘ಜೂನಿಯರ್’ ಸಿನಿಮಾ 1.75 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತ್ತು. ಶನಿವಾರದಂದು ಕಲೆಕ್ಷನ್ ಉತ್ತಮಗೊಂಡಿದ್ದು ಎರಡನೇ ದಿನ 2.1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಲ್ಲಿಗೆ ಎರಡು ದಿನಗಳ ಒಟ್ಟು ಕಲೆಕ್ಷನ್ 3.85 ಕೋಟಿ ರೂಪಾಯಿಗಳಾಗಿವೆ. ಕರ್ನಾಟಕದಲ್ಲಿ ‘ಜೂನಿಯರ್’ ಸಿನಿಮಾಕ್ಕೆ ಯುವರಾಜ್ ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಪ್ರಬಲ ಪೈಪೋಟಿ ನೀಡುತ್ತಿರುವ ಕಾರಣ ಕರ್ನಾಟಕದಲ್ಲಿ ಕಲೆಕ್ಷನ್ ತುಸು ಕಡಿಮೆ ಆಗಿದೆ.
‘ಜೂನಿಯರ್’ ಸಿನಿಮಾನಲ್ಲಿ ಕಿರೀಟಿ ರೆಡ್ಡಿ, ಶ್ರೀಲೀಲಾ, ರವಿಚಂದ್ರನ್, ಸುಧಾರಾಣಿ, ಜೆನಿಲಿಯಾ ಡಿಸೋಜಾ, ರಾವ್ ರಮೇಶ್, ಅಚ್ಯುತ್ ಕುಮಾರ್ ತೆಲುಗಿನ ಕೆಲವು ಜನಪ್ರಿಯ ಹಾಸ್ಯನಟರು, ಕನ್ನಡದ ಹಾಸ್ಯನಟರುಗಳು ಹೀಗೆ ಹಲವಾರು ಮಂದಿ ನಟಿಸಿದ್ದಾರೆ. ಸಿನಿಮಾಕ್ಕೆ ವಾರಾಹಿ ನಿರ್ಮಾಣ ಸಂಸ್ಥೆ ಬಂಡವಾಳ ತೊಡಗಿಸಿದೆ. ಸಿನಿಮಾ ನಿರ್ದೇಶನ ಮಾಡಿರುವುದು ರಾಧಾಕೃಷ್ಣ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




