AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆ ಆಯ್ತು ‘ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್

Darshan Thoogudeepa: ದರ್ಶನ್ ತೂಗುದೀಪ ನಟನೆಯ ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಇಂದು (ಜುಲೈ 19) ‘ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ, ದರ್ಶನ್ ಅಭಿಮಾನಿಗಳ ಎದುರು ಸರಳವಾಗಿ ಬಿಡುಗಡೆ ಮಾಡಿದೆ. ‘ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್ ಹೇಗಿದೆ? ಇಲ್ಲಿದೆ ಮಾಹಿತಿ...

ಬಿಡುಗಡೆ ಆಯ್ತು ‘ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್
Devil Movie
ಮಂಜುನಾಥ ಸಿ.
|

Updated on: Jul 19, 2025 | 9:20 PM

Share

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಪ್ರಸ್ತುತ ಥಾಯ್ಲೆಂಡ್​ನಲ್ಲಿ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೆ ನಟ ದರ್ಶನ್, ನಿರ್ದೇಶಕ ಪ್ರಕಾಶ್ ಅವರುಗಳು ‘ಡೆವಿಲ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್​ಗೆ ತೆರಳಿದರು. ಕೊನೆಯ ಹಂತದ ಚಿತ್ರೀಕರಣ ನಡೆಯುವಾಗಲೇ ಸಿನಿಮಾದ ಟೀಸರ್ ಬಿಡುಗಡೆ ಬಗ್ಗೆ ಸುದ್ದಿ ಹರಿದಾಡಿತ್ತು. ಕೆಲವೇ ದಿನಗಳಲ್ಲಿ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಇದೀಗ ‘ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ.

‘ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್ ಅತ್ತಿಬೆಲೆಯಲ್ಲಿ ಇಂದು ಬಿಡುಗಡೆ ಆಗಿದೆ. ಮೋಷನ್ ಪೋಸ್ಟರ್​​ನಲ್ಲಿ ದರ್ಶನ್ ಅವರ ಎರಡು ಚಿತ್ರಗಳನ್ನು ಮಾತ್ರವೇ ತೋರಿಸಲಾಗಿದೆ. ಅದರ ಹೊರತಾಗಿ ಮೋಷನ್ ಪೋಸ್ಟರ್​​ನಲ್ಲಿ ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ನಟರ ಹೆಸರುಗಳು ಮಾತ್ರವೇ ಇವೆ. ಈ ಹೆಸರುಗಳನ್ನು ತುಸು ಭಿನ್ನವಾಗಿ ತೋರಿಸಲಾಗಿದೆ. ದರ್ಶನ್ ಅವರ ಎರಡು ಚಿತ್ರಗಳನ್ನು ಮಾತ್ರ ಪೋಸ್ಟರ್​​ನಲ್ಲಿ ಬಳಸಿಕೊಳ್ಳಲಾಗಿದೆ.

‘ಡೆವಿಲ್’ ಸಿನಿಮಾ ಚಿತ್ರೀಕರಣ ಶುರುವಾಗಿ ವರ್ಷಗಳಾಗಿವೆ. ಈ ಸಿನಿಮಾದ ಚಿತ್ರೀಕರಣದಲ್ಲಿರುವಾಗಲೇ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದರು. ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ಸುಮಾರು ಎರಡು ವರ್ಷ ತಡವಾಗುತ್ತಿದೆ. ಇದೀಗ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಥಾಯ್ಲೆಂಡ್​ನಲ್ಲಿ ನಡೆಯುತ್ತಿದ್ದು, ಇನ್ನೊಂದು ವಾರದ ಬಳಿಕ ಸಿನಿಮಾದ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಾರಂಭ ಆಗಲಿದೆ. ಅದಾದ ಬಳಿಕ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ. ಈಗಿರುವ ಕೆಲ ಸುದ್ದಿಗಳ ಪ್ರಕಾರ ‘ಡೆವಿಲ್’ ಸಿನಿಮಾ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್ ಫ್ಯಾನ್ಸ್ ಸಮ್ಮುಖದಲ್ಲಿ ಬಿಡುಗಡೆ ಆಗಲಿದೆ ‘ದಿ ಡೆವಿಲ್’ ಮೋಷನ್ ಪೋಸ್ಟರ್

‘ಡೆವಿಲ್’ ಸಿನಿಮಾ ಅನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಜೊತೆಗೆ ಇದು ಅವರ ಎರಡನೇ ಸಿನಿಮಾ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ಪ್ರಕಾಶ್ ಮತ್ತು ಜೆ ಜಯಮ್ಮ. ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ಅಜನೀಶ್ ಲೋಕನಾಥ್, ಸಿನಿಮಾನಲ್ಲಿ ರಜನಾ ರೈ, ಮಹೇಶ್ ಮಂಜ್ರೇಕರ್, ವಿನಯ್ ಗೌಡ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ