ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
ಕಿರೀಟಿ ಅವರ ಚೊಚ್ಚಲ ಚಿತ್ರ ‘ಜೂನಿಯರ್’ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಚಿತ್ರ 1.40 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದಲ್ಲಿ ಶ್ರೀಲೀಲಾ, ರವಿಚಂದ್ರನ್ ಮತ್ತು ಜೆನಿಲಿಯಾ ಮುಂತಾದ ಪ್ರಮುಖ ನಟ-ನಟಿಯರು ನಟಿಸಿದ್ದಾರೆ.

‘ಜೂನಿಯರ್’ ಸಿನಿಮಾ ಮೂಲಕ ಕಿರೀಟಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ದಿನ ಒಳ್ಳೆಯ ಕಲೆಕ್ಷನ್ ಆಗಬೇಕು ಎಂದು ಎಲ್ಲಾ ಯುವ ಕಲಾವಿದರು ಬಯಸುತ್ತಾರೆ. ಆದರೆ, ಎಲ್ಲರಿಗೂ ಅಂಥ ಅವಕಾಶ ಸಿಗೋದಿಲ್ಲ. ಆದರೆ, ಕಿರೀಟಿ ಅವರಿಗೆ ಅಂಥದ್ದೊಂದು ಅದೃಷ್ಟ ಸಿಕ್ಕಿದೆ. ಮೊದಲ ದಿನಿಮಾ ಸಿನಿಮಾ ಗೆದ್ದು ಬೀಗುವ ಸೂಚನೆ ಕೊಟ್ಟಿದೆ. ಅವರ ನಟನೆಯ ‘ಜೂನಿಯರ್’ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ.
ಕಿರೀಟಿ ಪರಿಚಯ ಕನ್ನಡ ಹಾಗೂ ತೆಲುಗು ಮಂದಿ ಇಬ್ಬರಿಗೂ ಇದೆ. ಇದಕ್ಕೆ ಕಾರಣ ಆಗಿದ್ದು ಅವರ ತಂದೆ ಹಾಗೂ ರಾಜಕಾರಣಿ ಜನಾರ್ಧನ್ ರೆಡ್ಡಿ ಅವರು. ಈ ಕಾರಣದಿಂದ ಎರಡೂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಕಿರೀಟಿ ಜೊತೆ ಶ್ರೀಲೀಲಾ, ರವಿಚಂದ್ರನ್, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾ ಬಳಗ ಇದೆ. ಈ ಚಿತ್ರ ಜನರಿಂದ ಮೆಚ್ಚುಗೆ ಪಡೆದಿದೆ.
ಇದನ್ನೂ ಓದಿ: ‘ಜೂನಿಯರ್’ ವಿಮರ್ಶೆ: ಹೀರೋ ಇಂದ, ಹೀರೋಗಾಗಿ, ಹೀರೋಗೋಸ್ಕರ
‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ 1.40 ಕೋಟಿ ರೂಪಾಯಿ ಎನ್ನಲಾಗಿದೆ. ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಿಂದ ಸಿನಿಮಾ ಇಷ್ಟು ಗಳಿಕೆ ಮಾಡಿದೆ. ಸಿನಿಮಾದ ಪಾತ್ರವರ್ಗ ದೊಡ್ಡದು, ಅಲ್ಲದೆ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ. ಇದನ್ನು ನೋಡಿದರೆ ಇತ್ರದ ಗಳಿಕೆ ಕೊಂಚ ಕಡಿಮೆ ಅನಿಸಿಯೇ ಅನಿಸುತ್ತದೆ. ಆದರೆ, ಸಿನಿಮಾ ಮೊದಲ ದಿನ ಕೋಟಿ ರೂಪಾಯಿ ಮೇಲೆ ಗಳಿಕೆ ಮಾಡಿತು ಎಂಬುದು ಸಮಾಧಾನಕರ ಸಂಗತಿ.
ಎಕ್ಕ ಗಳಿಕೆ ವಿವರ..
ಕನ್ನಡದಲ್ಲಿ ರಿಲೀಸ್ ಆದ ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಕೂಡ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1.60 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಯುವಗೆ ದೊಡ್ಡ ಗೆಲುವು ಸಿಕ್ಕಂತೆ ಆಗಲಿದೆ. ಯುವ ರಾಜ್ಕುಮಾರ್ ಅವರ ‘ಎಕ್ಕ’ ಹಾಗೂ ‘ಕಿರೀಟಿ’ ಒಂದೇ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








