AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಕ್ಕ’ ಸಿನಿಮಾ ಗಳಿಕೆ; ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಯುವ

Ekka Movie First Day Collection: ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಮೊದಲ ದಿನ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿದೆ. ಯುವ ಕಲಾವಿದರ ಸಿನಿಮಾ ಆಗಿದ್ದರೂ ಯುವ ರಾಜಕುಮಾರ್ ಅವರ ಅಭಿನಯ ಮತ್ತು ಕಥಾವಸ್ತುವಿನ ಆಕರ್ಷಣೆ ಚಿತ್ರದ ಯಶಸ್ಸಿಗೆ ಕಾರಣವಾಗಿದೆ.

‘ಎಕ್ಕ’ ಸಿನಿಮಾ ಗಳಿಕೆ; ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಯುವ
ಯುವ
ರಾಜೇಶ್ ದುಗ್ಗುಮನೆ
|

Updated on: Jul 19, 2025 | 7:01 AM

Share

ರಾಜ್​ಕುಮಾರ್ ಕುಟುಂಬದ ಕುಡಿ ಯುವ ರಾಜ್​ಕುಮಾರ್ ಅವರು ‘ಯುವ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಸಾಧಾರಣ ಯಶಸ್ಸು ಕಂಡಿತ್ತು. ಈಗ ಅವರು ‘ಎಕ್ಕ’ ಚಿತ್ರದ (Ekka Movie) ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಮಾಸ್ ಮನರಂಜನೆ ಹೊಂದಿರುವ ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನವೇ ಅಬ್ಬರದ ಗಳಿಕೆ ಮಾಡಿರೋ ಸಿನಿಮಾ ಗೆಲ್ಲುವ ಸೂಚನೆ ನೀಡಿದೆ. ಸದ್ಯ ಸೊರಗಿ ಹೋಗಿದ್ದ ಬಾಕ್ಸ್ ಆಫೀಸ್​ಗೆ ಒಂದು ಚೇತರಿಕೆ ನೀಡಿದೆ.

ಕಳೆದ ಆರು ತಿಂಗಳಿಂದ ಕನ್ನಡದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಆದ ಹೊರತಾಗಿಯೂ ಯಾವ ಚಿತ್ರವೂ ಹೆಚ್ಚು ಗಳಿಕೆ ಮಾಡಿರಲಿಲ್ಲ. ಈ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂದರೆ ಶರಣ್ ನಟನೆಯ ‘ಛೂ ಮಂತರ್’ (5 ಕೋಟಿ ರೂಪಾಯಿ) ಸಿನಿಮಾ. ಈಗ ಈ ದಾಖಲೆಯನ್ನು ‘ಎಕ್ಕ’ ಸಿನಿಮಾ ಮುರಿಯುವ ಸೂಚನೆ ಕೊಟ್ಟಿದೆ.

Sacnilk ವರದಿ ಮಾಡಿರುವ ಪ್ರಕಾರ ‘ಎಕ್ಕ’ ಸಿನಿಮಾ ಮೊದಲ ದಿನ 1.60 ಕೋಟಿ ರೂಪಾಯಿಯಿಂದ 2 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆದ ಸಿನಿಮಾ. ಹೀಗಾಗಿ, ಈ ಚಿತ್ರಕ್ಕೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಎಂದೇ ಹೇಳಬಹುದು. ಇದೇ ಪ್ರತಿಕ್ರಿಯೆ ಮುಂದುವರಿದರೆ ಇಂದು (ಜುಲೈ 19) ಹಾಗೂ ನಾಳೆ (ಜುಲೈ 20) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಬಹುದು.

ಇದನ್ನೂ ಓದಿ
Image
ಬರ್ತ್​ಡೇ ಗರ್ಲ್ ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತೆ ಗೊತ್ತಾ?
Image
ಸಿನಿಮಾ ರಿಲೀಸ್ ಸಂದರ್ಭದಲ್ಲೇ ಆಸ್ಪತ್ರೆಗೆ ದಾಖಲಾದ ವಿಜಯ್ ದೇವರಕೊಂಡ
Image
ಥಿಯೇಟರ್​ನಲ್ಲಿ ರಿಲೀಸ್ ಆದ ಒಂದೇ ದಿನಕ್ಕೆ ಈ ಥ್ರಿಲ್ಲರ್ ಚಿತ್ರ ಒಟಿಟಿಗೆ
Image
ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ 

ಇದನ್ನೂ ಓದಿ: ಎಕ್ಕ ವಿಮರ್ಶೆ: ಕಮರ್ಷಿಯಲ್ ಚೌಕಟ್ಟಿನೊಳಗೆ ಮನರಂಜನೆ ನೀಡುವ ‘ಎಕ್ಕ’

ಯುವಕರ ಸಿನಿಮಾ ಎಂದಾಗ ಜನರು ಹೆಚ್ಚು ಥಿಯೇಟರ್​ಗೆ ಬರೋದಿಲ್ಲ, ಸ್ಟಾರ್ ಕಾಸ್ಟ್ ಇದ್ದರೆ ಮಾತ್ರ ಸಿನಿಮಾ ಗೆಲ್ಲೋದು ಎಂಬ ನಂಬಿಕೆಯನ್ನು ಯುವ ಸುಳ್ಳು ಮಾಡಿದ್ದಾರೆ. ಅವರು ‘ಎಕ್ಕ’ ಸಿನಿಮಾದಿಂದ ಪ್ರೇಕ್ಷಕರಿಗೆ ಮಾಸ್ ಮನರಂಜನೆ ನೀಡಿದ್ದಾರೆ. ಈ ಸಿನಿಮಾನ ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ. ಕಷ್ಟ ಎಂದು ಹಳ್ಳಿಯಿಂದ ಸಿಟಿಗೆ ಬರೋ ಹುಡುಗನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಈ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ. ಈ ಸಿನಿಮಾ ಗೆಲವಿಗೆ ತಂಡಕ್ಕೆ ಶುಭ ಕೋರಲಾಗುತ್ತಿದೆ. ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್, ಕಾರ್ತಿಕ್ ಗೌಡ, ಯೋಗಿ, ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!