AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಶ್ರೀ-ರೋಷನ್ ಪರಿಚಯಕ್ಕೆ ಕಾರಣ ಆಗಿದ್ದು ಪುನೀತ್; ಎಲ್ಲವೂ ದೈವ ಸಂಕಲ್ಪ

Anchor Anushree Wedding: ಪ್ರಸಿದ್ಧ ಆ್ಯಂಕರ್ ಅನುಶ್ರೀ ಮತ್ತು ರೋಷನ್ ಅವರ ಮದುವೆಯ ಸುದ್ದಿ ಸದ್ಯ ಸುದ್ದಿಯಲ್ಲಿದೆ. ಇವರಿಬ್ಬರ ಪರಿಚಯಕ್ಕೆ ಪುನೀತ್ ರಾಜಕುಮಾರ್ ಕಾರಣ. ಇಬ್ಬರೂ ಪುನೀತ್ ಅವರ ದೊಡ್ಡ ಅಭಿಮಾನಿಗಳು. ಆಗಸ್ಟ್ 28ರಂದು ಇವರ ವಿವಾಹ ನೆರವೇರಲಿದೆ ಎನ್ನಲಾಗುತ್ತಿದೆ .

ಅನುಶ್ರೀ-ರೋಷನ್ ಪರಿಚಯಕ್ಕೆ ಕಾರಣ ಆಗಿದ್ದು ಪುನೀತ್; ಎಲ್ಲವೂ ದೈವ ಸಂಕಲ್ಪ
ಅನುಶ್ರೀ -ರೋಷನ್
ರಾಜೇಶ್ ದುಗ್ಗುಮನೆ
| Edited By: |

Updated on:Jul 19, 2025 | 3:37 PM

Share

ಆ್ಯಂಕರ್ ಅನುಶ್ರೀ ವಿವಾಹ ವಿಚಾರ ಸದ್ಯ ಸುದ್ದಿ ಆಗುತ್ತಿದೆ. ಆಗಸ್ಟ್ 28ರಂದು ಇವರ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅನುಶ್ರೀ (Anushree) ಅವರಿಗೂ ರೋಷನ್​ಗೂ ಪರಿಚಯ ಬೆಳೆದಿದ್ದು ಹೇಗೆ ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಆರಂಭದಲ್ಲಿ ಇವರದ್ದು ಅರೇಂಜ್ ಮ್ಯಾರೇಜ್ ಎನ್ನಲಾಗುತ್ತಿತ್ತು. ಆದರೆ, ಇದು ಸಂಪೂರ್ಣ ಅರೇಂಜ್ ಮ್ಯಾರೇಜ್ ಅಲ್ಲ ಎಂದು ತಿಳಿದು ಬಂದಿದೆ. ಇವರ ಭೇಟಿಗೆ ಕಾರಣ ಆಗಿದ್ದು ಅಪ್ಪು ಅನ್ನೋದು ಮತ್ತೊಂದು ವಿಶೇಷ.

ಅನುಶ್ರೀ ಅವರು ಅಪ್ಪು ಅವರ ದೊಡ್ಡ ಅಭಿಮಾನಿ. ಪುನೀತ್ ಅವರು ಬದುಕಿದ್ದಾಗ ಸಾಕಷ್ಟು ಬಾರಿ ಅವರ ಸಂದರ್ಶನ ಮಾಡಿದ್ದರು. ಪುನೀತ್ ನಿಧನ ಹೊಂದಿದ ಬಳಿಕವೂ ಅಪ್ಪುಗಾಗಿ ಅವರ ಹೃದಯ ಮಿಡಿಯಿತು. ಯೂಟ್ಯೂಬ್ ಚಾನೆಲ್​ಗೆ ಅಪ್ಪು ಫೋಟೋ ಇರೋ ಲೋಗೋವನ್ನು ಅನುಶ್ರೀ ಮಾಡಿಸಿದ್ದಾರೆ ಅನ್ನೋದು ವಿಶೇಷ. ಇದು ಪುನೀತ್ ಮೇಲೆ ಅವರಿಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಈಗ ಅವರು ಅಪ್ಪು ಅಭಿಮಾನಿಯನ್ನೇ ವಿವಾಹ ಆಗುತ್ತಿದ್ದಾರೆ. ರೋಷನ್ ಕೂಡ ಪುನೀತ್​​ ಅವರ ದೊಡ್ಡ ಫ್ಯಾನ್ ಎಂದು ತಿಳಿದು ಬಂದಿದೆ.

ಪುನೀತ್ ನಿವಾಸದಲ್ಲಿ ಅನುಶ್ರೀ ಹಾಗೂ ರೋಷನ್ ಪರಿಚಯ ಆದರು. ಪುನೀತ್ ನಿರ್ಮಿಸಿದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅವರು ನಿಧನ ಹೊಂದಿದ ಬಳಿಕ ರಿಲೀಸ್ ಆಯಿತು. ಇದರ ಪ್ರೀ ರಿಲೀಸ್ ಈವೆಂಟ್​ನ ಪ್ಯಾಲೇಸ್ ಗ್ರೌಂಡ್​ನಲ್ಲಿ ‘ಪುನೀತ ಪರ್ವ’ ಹೆಸರಲ್ಲಿ ಅಶ್ವಿನಿ ಅವರು ಆಯೋಜಿಸಿದ್ದರು. ಚಿತ್ರರಂಗದ ಹಲವರು ಇದರಲ್ಲಿ ಭಾಗಿ ಆಗಿದ್ದರು.   ಈ ಈವೆಂಟ್​ಗೆ ಆ್ಯಂಕರಿಂಗ್ ಮಾಡಿದ್ದು ಅನುಶ್ರೀ ಅವರು. ಈ ಈವೆಂಟ್​ನ ನಿರ್ವಹಣೆಯಲ್ಲಿ  ರೋಷನ್ ತೊಡಗಿಕೊಂಡಿದ್ದರು. ಈವೆಂಟ್​ನಲ್ಲಿ ಅನುಶ್ರೀ ಹಾಗೂ ರೋಷನ್ ಮಧ್ಯೆ ಹೆಚ್ಚು ಆಪ್ತತೆ ಬೆಳೆಯಿತು.

ಇದನ್ನೂ ಓದಿ
Image
ರಿಯಾಲಿಟಿ ಶೋ ಸಂಭಾವನೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ಅಮಿತಾಭ್ ಬಚ್ಚನ್
Image
ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
Image
‘ಎಕ್ಕ’ ಸಿನಿಮಾ ಗಳಿಕೆ; ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಯುವ
Image
ಬರ್ತ್​ಡೇ ಗರ್ಲ್ ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತೆ ಗೊತ್ತಾ?

ಇದನ್ನೂ ಓದಿ: ಆ್ಯಂಕರ್ ಅನುಶ್ರೀ ಮದುವೆ ಆಗೋ ಹುಡುಗನ ಫೋಟೋ ವೈರಲ್

ಇಬ್ಬರ ಮಧ್ಯೆ ಆಗ ಬೆಳೆದ ಗಾಢ ಗೆಳೆತನ ಈಗ ವಿವಾಹದ ಹಂತಕ್ಕೆ ಬಂದು ನಿಂತಿದೆ. ಗುರು ಹಿರಿಯ ಸಮ್ಮುಖದಲ್ಲಿ ಆಗಸ್ಟ್ 28ರಂದು ಇವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅನುಶ್ರೀ ಅವರು ಈ ವಿಚಾರವನ್ನು ಇನ್ನಷ್ಟೇ ಖಚಿತಪಡಿಸಬೇಕಿದೆ.  ಶ್ರೀದೇವಿ ಹಾಗೂ ಯುವ ಅವರಿಗೆ ರೋಷನ್ ಆಪ್ತ ಸ್ನೇಹಿತ. ಅವರು ಅಪ್ಪು ಅಭಿಮಾನಿ ಕೂಡ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:26 pm, Sat, 19 July 25

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ