ಮೂರು ದಿನಕ್ಕೆ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಎಕ್ಕ’ ಸಿನಿಮಾ; ಭಾನುವಾರ ಬಂಗಾರದ ಬೆಳೆ
Ekka movie box office collection Day 3: ಯುವ ರಾಜ್‌ಕುಮಾರ್ ಅಭಿನಯದ 'ಎಕ್ಕ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಈ ಚಿತ್ರದ ಯಶಸ್ಸು ಯುವ ರಾಜ್‌ಕುಮಾರ್‌ಗೆ ಉತ್ತಮ ಬುನಾದಿಯನ್ನು ಹಾಕಿಕೊಟ್ಟಿದೆ ಎನ್ನಬಹುದು. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದ ಬಾಯ್ಮಾತಿನ ಪ್ರಚಾರವೂ ಯಶಸ್ಸಿಗೆ ಕಾರಣ. ಭಾನುವಾರ ಅನೇಕ ಕಡೆಗಳಲ್ಲಿ ಶೋ ಹೌಸ್ಫುಲ್ ಪ್ರದರ್ಶನ ಕಂಡಿದೆ.

ಯುವ ಹೀರೋ ಯುವ ರಾಜ್‌ಕುಮಾರ್‌ಗೆ (Yuva Rajkumar) ಒಂದೊಳ್ಳೆಯ ಯಶಸ್ಸು ಸಿಕ್ಕಿದೆ. ಒಂದು ಹೀರೋಗೆ ಆರಂಭದಲ್ಲಿ ಎಷ್ಟು ದೊಡ್ಡ ಬುನಾದಿ ಬೇಕೋ ಅದನ್ನು ಹಾಕಿಕೊಡುವಲ್ಲಿ ‘ಎಕ್ಕ’ ಸಿನಿಮಾ ಯಶಸ್ವಿ ಆಗಿದೆ. ನಿರ್ದೇಶಕ ರೋಹಿತ್ ಪದಕಿ ಅವರು ಅದ್ಭುತವಾಗಿ ಸಿನಿಮಾನ ಕಟ್ಟಿಕೊಡುವ ಮೂಲಕ ಕನ್ನಡಕ್ಕೆ ಒಂದೊಳ್ಳೆಯ ಸಿನಿಮಾ ಕೊಟ್ಟಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.
‘ಯುವ’ ಸಿನಿಮಾ ಮೂಲಕ ಯುವ ರಾಜ್‌ಕುಮಾರ್ ಅವರು ದೊಡ್ಡ ಗೆಲುವು ಕಂಡರು. ಈ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿತ್ತು. ಆದರೆ, ‘ಎಕ್ಕ’ ಸಿನಿಮಾ ಮಾತ್ರ ಎಲ್ಲರಿಂದ ಭೇಷ್ ಎನಿಸಿಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಅವರು ಉಡೀಸ್ ಮಾಡಿದ್ದಾರೆ. ಒಂದು ಯಂಗ್ ಹೀರೋ ಸಿನಿಮಾ ಇಷ್ಟು ದಾಖಲೆಯ ಕಲೆಕ್ಷನ್ ಮಾಡಿದ್ದು ವಿಶೇಷವೇ ಸರಿ.
ಈ ಚಿತ್ರದ ನೆಟ್ ಕಲೆಕ್ಷನ್ ಮೂರು ದಿನಕ್ಕೆ 5.66 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ಗ್ರಾಸ್ ಕಲೆಕ್ಷನ್ 6.42 ಕೋಟಿ ರೂಪಾಯಿ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ವರದಿ ಮಾಡಿದೆ. ಮೊದಲ ದಿನ ಈ ಚಿತ್ರ ಒಂದೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶನಿವಾರ ಚಿತ್ರ 1.82 ಕೋಟಿ ರೂಪಾಯಿ ಗಳಿಕೆ ಮಾಡಿತು. ಭಾನುವಾರ ಚಿತ್ರದ ಕಲೆಕ್ಷನ್ 2.39 ಕೋಟಿ ರೂಪಾಯಿ ಆಗಿದೆ. ಈ ಬಗ್ಗೆ ತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.
ಈ ಸಿನಿಮಾಗೆ ಬಾಯ್ಮಾತಿನ ಪ್ರಚಾರ ಚೆನ್ನಾಗಿ ಸಿಗುತ್ತಿದೆ. ಹೀಗಾಗಿ ಸಿನಿಮಾದ ಗಳಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಭಾನುವಾರ ಅನೇಕ ಶೋಗಳು ಹೌಸ್ಫುಲ್ ಓಡಿವೆ. ಇಷ್ಟು ದಿನ ಡಲ್ ಆಗಿದ್ದ ಚಿತ್ರರಂಗಕ್ಕೆ ಈಗ ಒಂದು ಬ್ರೇಕ್ ಸಿಕ್ಕಂತೆ ಆಗಿದೆ. ವಾರದ ದಿನಗಳಲ್ಲಿ ಈ ಚಿತ್ರ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಎಕ್ಕ’ ಸಿನಿಮಾ ಗಳಿಕೆ; ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಯುವ
ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಇದೆ. ಈ ಸಿನಿಮಾದಲ್ಲಿ ಯುವ ರಾಜ್‌ಕುಮಾರ್, ಸಂಜನಾ ಆನಂದ್, ರಾಹುಲ್ ದೇವ್ ಶೆಟ್ಟಿ, ಅತುಲ್ ಕುಲ್ಕರ್ಣಿ, ಸಂಪದಾ ನಟಿಸಿದ್ದಾರೆ. ಕೆಆರ್ಜಿ ಸ್ಟುಡಿಯೋ, ಜಯಣ್ಣ ಫಿಲ್ಮ್ಸ್, ಪಿಆರ್ಕೆ ಸ್ಟುಡಿಯೋ ಸಿನಿಮಾನ ಒಟ್ಟಾಗಿ ನಿರ್ಮಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.