AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರೀಟಿ ರೆಡ್ಡಿಯನ್ನು ಜೂ ಎನ್​ಟಿಆರ್ ಜೊತೆ ಹೋಲಿಸಿದ ತೆಲುಗು ಪ್ರೇಕ್ಷಕರು

Jr NTR-Kireeti Reddy: ಕಿರೀಟಿ ರೆಡ್ಡಿ ನಟನೆಯ ಮೊದಲ ಸಿನಿಮಾ ‘ಜೂನಿಯರ್’ ಇದೇ ಶುಕ್ರವಾರ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಕಿರೀಟಿ ರೆಡ್ಡಿ ಡ್ಯಾನ್ಸ್ ಮತ್ತು ಫೈಟ್ಸ್ ಅನ್ನು ಸಿನಿಮಾ ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ‘ಜೂನಿಯರ್’ ಸಿನಿಮಾ ನೋಡಿರುವ ತೆಲುಗು ಸಿನಿಮಾ ಪ್ರೇಕ್ಷಕರು, ಕಿರೀಟಿ ರೆಡ್ಡಿಯನ್ನು ಜೂ ಎನ್​ಟಿಆರ್ ಜೊತೆಗೆ ಹೋಲಿಸಿದ್ದಾರೆ ಕಾರಣವೇನು?

ಕಿರೀಟಿ ರೆಡ್ಡಿಯನ್ನು ಜೂ ಎನ್​ಟಿಆರ್ ಜೊತೆ ಹೋಲಿಸಿದ ತೆಲುಗು ಪ್ರೇಕ್ಷಕರು
Jr Ntr Kireeti Reddy
ಮಂಜುನಾಥ ಸಿ.
|

Updated on: Jul 20, 2025 | 4:21 PM

Share

ರಾಜ್ಯದ ಜನಪ್ರಿಯ ರಾಜಕಾರಣಿ ಜನಾರ್ದನ ರೆಡ್ಡಿಯ ಪುತ್ರ ಕಿರೀಟಿ ರೆಡ್ಡಿ (Kireety Reddy) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ ‘ಜೂನಿಯರ್’ ಇದೇ ಶುಕ್ರವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾ ನೋಡಿದವರೆಲ್ಲ ಕಿರೀಟಿ ರೆಡ್ಡಿಯ ನೃತ್ಯ ಪ್ರತಿಭೆಯನ್ನು ಮಾತ್ರ ತಪ್ಪದೆ ಹೊಗಳಿದ್ದಾರೆ. ಡ್ಯಾನ್ಸ್ ಹಾಗೂ ಆಕ್ಷನ್ ದೃಶ್ಯಗಳನ್ನು ಕಿರೀಟಿ ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ ಎಂಬ ಸಾಮೂಹಿಕ ಪ್ರಶಂಸೆ ಕಿರೀಟಿ ರೆಡ್ಡಿಗೆ ವ್ಯಕ್ತವಾಗಿದೆ.

ಕಿರೀಟಿಯ ‘ಜೂನಿಯರ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ತೆಲುಗಿನ ಹಲವು ಕಲಾವಿದರನ್ನು ಸಹ ಬಳಸಿಕೊಳ್ಳಲಾಗಿದೆ. ‘ಜೂನಿಯರ್’ ಸಿನಿಮಾ ತೆಲುಗು ರಾಜ್ಯಗಳಲ್ಲಿಯೂ ಸಹ ಅದ್ಧೂರಿಯಾಗಿಯೇ ಬಿಡುಗಡೆ ಆಗಿದ್ದು, ತೆಲುಗಿನ ಪ್ರೇಕ್ಷಕರು ಸಹ ‘ಜೂನಿಯರ್’ ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅಲ್ಲಿಯೂ ಸಹ ಕಿರೀಟಿಯ ಡ್ಯಾನ್ಸ್ ಮತ್ತು ಆಕ್ಷನ್ ಅನ್ನು ಮೆಚ್ಚಿಕೊಂಡಿದ್ದಾರೆ.

ತೆಲುಗು ಪ್ರೇಕ್ಷಕರು ಒಂದು ಹೆಜ್ಜೆ ಮುಂದೆ ಹೋಗಿ ಜೂ ಎನ್​ಟಿಆರ್ ಜೊತೆಗೆ ಕಿರೀಟಿ ರೆಡ್ಡಿಯನ್ನು ಹೋಲಿಕೆ ಮಾಡಿದ್ದಾರೆ. ‘ಜೂನಿಯರ್’ ಸಿನಿಮಾದ ವೈರಲ್ ವೈಯ್ಯಾರಿ ಹಾಡಿಗೆ ಕಿರೀಟಿ ರೆಡ್ಡಿ ಹಾಕಿರುವ ಸ್ಟೆಪ್ಪುಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ತೆಲುಗು ಸಿನಿಮಾ ಪ್ರೇಕ್ಷಕರು, ‘ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾನೆ ಈ ಯುವಕ, ಈ ಯುವಕನ್ನು ನೋಡುತ್ತಿದ್ದರೆ ಜೂ ಎನ್​ಟಿಆರ್ ನೆನಪು ಬರುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಕಿರೀಟಿ ರೆಡ್ಡಿಯ ಡ್ಯಾನ್ಸ್ ಅನ್ನು ಕೊಂಡಾಡಿ ಹಲವಾರು ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ:ಸರಳತೆ ಬಗ್ಗೆ ದೊಡ್ಮನೆ ನೋಡಿ ಕಲಿತಿದ್ದೇನೆ: ಜನಾರ್ದನ ರೆಡ್ಡಿ ಪುತ್ರ ಕಿರೀಟಿ

ಜೂ ಎನ್​ಟಿಆರ್, ಯಾವುದೇ ಡ್ಯಾನ್ಸ್ ಸ್ಟೆಪ್ ಆದರೂ ಅದನ್ನು ನಿರಾಯಾಸವಾಗಿ ಮಾಡುತ್ತಾರೆ. ಕಿರೀಟಿ ಸಹ ಜೂ ಎನ್​ಟಿಆರ್ ರೀತಿಯೇ ಕಷ್ಟವಾದ ಸ್ಟೆಪ್ಪುಗಳನ್ನೂ ನಿರಾಯಾಸವಾಗಿ ಮಾಡಿರುವ ಪರಿಗೆ ತೆಲುಗು ಸಿನಿಮಾ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಿರೀಟಿ, ಸುಲಭವಾಗಿ ಕ್ಲಿಷ್ಟವಾದ ಸ್ಟೆಪ್ಪುಗಳನ್ನು ಮಾಡಿರುವುದನ್ನು ತೆಲುಗು ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿದ್ದು, ಜೂ ಎನ್​ಟಿಆರ್ ಜೊತೆಗೆ ಅವರನ್ನು ಹೋಲಿಸಿದ್ದಾರೆ.

ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್’ ಸಿನಿಮಾ ಮೊದಲ ದಿನ ಸಾಧಾರಣ ಕಲೆಕ್ಷನ್ ಅನ್ನು ಮಾಡಿದೆ. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಜೆನಿಲಿಯಾ ಡಿಸೋಜಾ ಸಹ ಇದ್ದಾರೆ. ರವಿಚಂದ್ರನ್, ಸುಧಾರಾಣಿ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ