AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಉದಯಪುರ ಫೈಲ್ಸ್ ಸಿನಿಮಾ ನಟನ ಮನೆಗೆ ಬೆಂಕಿ ಹಂಚಿದ ಮುಸ್ಲಿಮರು?: ವೈರಲ್ ವಿಡಿಯೋದ ಸತ್ಯ ಇಲ್ಲಿದೆ ನೋಡಿ

Udaipur Files Movie Fact Check: ಜನರ ಗುಂಪೊಂದು ಮನೆಗೆ ಬೆಂಕಿ ಹಚ್ಚುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದಯಪುರ ಫೈಲ್ಸ್ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದನ ಮನೆಯನ್ನು ಮುಸ್ಲಿಮರು ಸುಟ್ಟುಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ.

Fact Check: ಉದಯಪುರ ಫೈಲ್ಸ್ ಸಿನಿಮಾ ನಟನ ಮನೆಗೆ ಬೆಂಕಿ ಹಂಚಿದ ಮುಸ್ಲಿಮರು?: ವೈರಲ್ ವಿಡಿಯೋದ ಸತ್ಯ ಇಲ್ಲಿದೆ ನೋಡಿ
Udaiur Files Fact Check
ಮಾಲಾಶ್ರೀ ಅಂಚನ್​
| Updated By: Vinay Bhat|

Updated on:Jul 30, 2025 | 8:09 PM

Share

ಬೆಂಗಳೂರು (ಜು. 21): 2022 ರಲ್ಲಿ ಉದಯಪುರದ ದರ್ಜಿ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಆಧರಿಸಿದ ಉದಯಪುರ ಫೈಲ್ಸ್ (Udaipur Files) ಎಂಬ ಹೆಸರಿನ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ ದೆಹಲಿ ಹೈಕೋರ್ಟ್ ಜುಲೈ 10, 2025 ರಂದು ಈ ಸಿನಿಮಾವನ್ನು ತಡೆಹಿಡಿದಿದೆ. ವರದಿಗಳ ಪ್ರಕಾರ, ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಈ ಚಿತ್ರವು ದ್ವೇಷ ಭಾಷಣವನ್ನು ಉತ್ತೇಜಿಸುತ್ತದೆ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುತ್ತದೆ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಬಹುದು ಎಂದು ವಾದಿಸಿ ಅದರ ಬಿಡುಗಡೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ, ಜನರ ಗುಂಪೊಂದು ಮನೆಗೆ ಬೆಂಕಿ ಹಚ್ಚುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದಯಪುರ ಫೈಲ್ಸ್ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದನ ಮನೆಯನ್ನು ಮುಸ್ಲಿಮರು ಸುಟ್ಟುಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೀವು ಕೆಳಗೆ ನೋಡಬಹುದು.

ಇದನ್ನೂ ಓದಿ
Image
ಲಾರ್ಡ್ಸ್‌ನಲ್ಲಿ ಕೊಹ್ಲಿ ಫೋಟೋದೊಂದಿಗೆ ಸಚಿನ್ ಪೋಸ್?: ಸುಳ್ಳು...
Image
ಇದು ಮಹಿಳೆ ಮೇಲೆ ಅತ್ಯಾಚಾರ ನಡೆದ ವಿಡಿಯೋವೇ?
Image
ತೆಲಂಗಾಣದಲ್ಲಿ ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿದ್ದು ಮುಸ್ಲಿಂ ಮಹಿಳೆಯೇ?
Image
Fact Check: ಆಗ್ರಾ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ಅಪಘಾತವಾಗಿಲ್ಲ

ವೈರಲ್ ವಿಡಿಯೋದ ಸತ್ಯ ಏನು?

ವೈರಲ್ ವಿಡಿಯೋದ ಸತ್ಯವನ್ನು ಕಂಡುಹಿಡಿಯಲು, ನಾವು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಸಂದರ್ಭ ಜುಲೈ 05, 2025 ರಂದು soyelsilencioso ಎಂಬ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಅದೇ ವಿಡಿಯೋ ನಮಗೆ ಕಂಡುಬಂತು. ಸ್ಪ್ಯಾನಿಷ್ ಶೀರ್ಷಿಕೆಯು ವಿಡಿಯೋದಲ್ಲಿ ಕೊಲಂಬಿಯಾದ ನಜರೆತ್‌ನಲ್ಲಿ ಪೊಲೀಸರು ತಪ್ಪಾಗಿ ಗುಂಡು ಹಾರಿಸಿ ಯುಲ್ಬರ್ಟ್ ಬಾರ್ಬೋಜಾ ಅವರನ್ನು ಕೊಂದ ನಂತರ ಸ್ಥಳೀಯರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತಿರುವುದನ್ನು ತೋರಿಸುತ್ತದೆ ಎಂಬ ಮಾಹಿತಿ ಇದರಲ್ಲಿದೆ.

ಹೆಚ್ಚುವರಿ ಹುಡುಕಾಟ ನಡೆಸಿದಾಗ, ಕೊಲಂಬಿಯಾದ ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಬೇರೆ ಕೋನದಿಂದ ಅದೇ ಘಟನೆ ನಮಗೆ ಸಿಕ್ಕಿತು. ದೃಶ್ಯಗಳು ವೈರಲ್ ವಿಡಿಯೋಗೆ ನಿಕಟವಾಗಿ ಹೊಂದಿಕೆಯಾಗುತ್ತವೆ. ಶೀರ್ಷಿಕೆಯು ಈ ಘಟನೆ ಕೊಲಂಬಿಯಾದ ನಜರೆತ್‌ನಲ್ಲಿ ನಡೆದಿದೆ ಎಂದು ಖಚಿತಪಡಿಸುತ್ತದೆ.

Fact Check: ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಫೋಟೋದೊಂದಿಗೆ ಸಚಿನ್ ತೆಂಡೂಲ್ಕರ್ ಪೋಸ್ ನೀಡಿದ್ದಾರೆಯೇ?: ಸತ್ಯ ಇಲ್ಲಿದೆ ನೋಡಿ

ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮತ್ತಷ್ಟು ಹುಡುಕಿದಾಗ, ಕೊಲಂಬಿಯಾದ ಹಲವಾರು ಸ್ಥಳೀಯ ಮಾಧ್ಯಮಗಳಿಂದ ಬಂದ ವರದಿಗಳು ನಮಗೆ ದೊರೆತವು. ಈ ವರದಿಗಳ ಪ್ರಕಾರ, ಜುಲೈ 04, 2025 ರಂದು, ಯುಲ್ಬರ್ಟ್ ಫೆರ್ನಾಂಡಿಸ್ ಬಾರ್ಬೋಸಾ ಅವರನ್ನು ಲಾ ಗುವಾಜಿರಾದ ನಜರೆತ್‌ನಲ್ಲಿ ಪೊಲೀಸರು ಗುಂಡಿಕ್ಕಿ ಕೊಂದರು. ಪೊಲೀಸ್ ಠಾಣೆಯ ಮೇಲೆ ಈ ಹಿಂದೆ ನಡೆದ ದಾಳಿಯಲ್ಲಿ ಬಳಸಲಾದ ವಾಹನ ಎಂದು ಅವರು ತಪ್ಪಾಗಿ ಭಾವಿಸಿದ್ದರು. ಅವರ ಸಾವು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಸ್ಥಳೀಯರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ನ್ಯಾಯಕ್ಕಾಗಿ ಒತ್ತಾಯಿಸಿದರು. ಗಲ್ಫ್ ಕ್ಲಾನ್ ಮತ್ತು ಕಾಂಕ್ವಿಸ್ಟಾಡೋರಸ್ ಡೆ ಲಾ ಸಿಯೆರಾ ನೆವಾಡಾ (ACSN) ನಂತಹ ಸಶಸ್ತ್ರ ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳಿಂದಾಗಿ ಈ ಪ್ರದೇಶದಲ್ಲಿ ಅಶಾಂತಿ ಸೃಷ್ಟಿಯಾಗಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಇದರಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೊಲಂಬಿಯಾದ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ವಿಡಿಯೋವನ್ನು, ಉದಯಪುರ ಫೈಲ್ಸ್‌ನ ಕಲಾವಿದನ ಮನೆಯನ್ನು ಮುಸ್ಲಿಮರು ಸುಟ್ಟುಹಾಕುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Mon, 21 July 25

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ