AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಫೋಟೋದೊಂದಿಗೆ ಸಚಿನ್ ತೆಂಡೂಲ್ಕರ್ ಪೋಸ್ ನೀಡಿದ್ದಾರೆಯೇ?: ಸತ್ಯ ಇಲ್ಲಿದೆ ನೋಡಿ

ಟಿವಿ9 ಕನ್ನಡ ವೈರಲ್ ಚಿತ್ರವನ್ನು ತನಿಖೆ ಮಾಡಿ, ಇದನ್ನು ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾಗಿದೆ ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಕಂಡುಹಿಡಿದಿದೆ. ಮೂಲ ಚಿತ್ರವು ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಅವರ ಸ್ವಂತ ಭಾವಚಿತ್ರದೊಂದಿಗೆ ಪೋಸ್ ನೀಡುತ್ತಿರುವುದನ್ನು ತೋರಿಸುತ್ತದೆ, ಇದನ್ನು ಜುಲೈ 10 ರಂದು ಲಾರ್ಡ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಯಿತು.

Fact Check: ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಫೋಟೋದೊಂದಿಗೆ ಸಚಿನ್ ತೆಂಡೂಲ್ಕರ್ ಪೋಸ್ ನೀಡಿದ್ದಾರೆಯೇ?: ಸತ್ಯ ಇಲ್ಲಿದೆ ನೋಡಿ
Virat Kohli And Sachin Tendulkar Fact Check
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Jul 18, 2025 | 5:08 PM

Share

ಬೆಂಗಳೂರು (ಜು. 18): ಭಾರತ ಕ್ರಿಕೆಟ್ ತಂಡ (Indian Cricket Team) ಸದ್ಯ ಆಂಗ್ಲರ ನಾಡಲ್ಲಿ ಬೀಡುಬಿಟ್ಟಿದ್ದು, ಟೆಸ್ಟ್ ಸರಣಿ ಆಡುತ್ತಿದೆ. ಮೂರನೇ ಟೆಸ್ಟ್ ಪಂದ್ಯ ಇತ್ತೀಚೆಗಷ್ಟೆ ಇಂಗ್ಲೆಂಡ್‌ನ ಐಕಾನಿಕ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಇದರಲ್ಲಿ ಇಂಗ್ಲೆಂಡ್ ಜಯ ಸಾಧಿಸಿತು. ಇದರ ಮಧ್ಯೆ ಲಾರ್ಡ್ಸ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅವರ ಭಾವಚಿತ್ರದ ಮುಂದೆ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪೋಸ್ ನೀಡುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅನೇಕ ಬಳಕೆದಾರರು “ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಅವರ ಫೋಟೋದೊಂದಿಗೆ ಸಚಿನ್ ತೆಂಡೂಲ್ಕರ್ ಫೋಟೋ ತೆಗೆದುಕೊಳ್ಳುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಆದಾಗ್ಯೂ, ಟಿವಿ9 ಕನ್ನಡ ವೈರಲ್ ಚಿತ್ರವನ್ನು ತನಿಖೆ ಮಾಡಿ, ಇದನ್ನು ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾಗಿದೆ ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಕಂಡುಹಿಡಿದಿದೆ. ಮೂಲ ಚಿತ್ರವು ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಅವರ ಸ್ವಂತ ಭಾವಚಿತ್ರದೊಂದಿಗೆ ಪೋಸ್ ನೀಡುತ್ತಿರುವುದನ್ನು ತೋರಿಸುತ್ತದೆ, ಇದನ್ನು ಜುಲೈ 10 ರಂದು ಲಾರ್ಡ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಯಿತು.

ಇದನ್ನೂ ಓದಿ
Image
ಇದು ಮಹಿಳೆ ಮೇಲೆ ಅತ್ಯಾಚಾರ ನಡೆದ ವಿಡಿಯೋವೇ?
Image
ತೆಲಂಗಾಣದಲ್ಲಿ ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿದ್ದು ಮುಸ್ಲಿಂ ಮಹಿಳೆಯೇ?
Image
Fact Check: ಆಗ್ರಾ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ಅಪಘಾತವಾಗಿಲ್ಲ
Image
ಐಸಿಯುನಲ್ಲಿ ಸಲ್ಮಾನ್ ಖಾನ್- ಬದುಕುಳಿಯುವುದು ಅನುಮಾನ?

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆದ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಫೋಟೋದಲ್ಲಿ ನೈಜ್ಯತೆಗೆ ದೂರವಾದ ಅನೇಕ ಅಂಶಗಳು ನಮಗೆ ಕಂಡುಬಂದವು. ಅವುಗಳಲ್ಲಿ ಗಮನಾರ್ಹವಾದವು ಕೊಹ್ಲಿಯ ಭಾವಚಿತ್ರದ ಫ್ರೇಮ್​ಗಳು ತಿರುಚಿದಂತೆ ಕಾಣುತ್ತದೆ ಮತ್ತು ಚಿತ್ರದಲ್ಲಿ ಕಾಣಿಸಿಕೊಂಡಿರುವ ಜೆರ್ಸಿಯೂ ವಿರೂಪಗೊಂಡಿದೆ. SAHARA ಎಂದು ಬರೆದಿರುವುದು ಸ್ಪಷ್ಟವಾಗಿ ಕಾಣುತ್ತಿಲ್ಲ.

Fact Check: ಇದು ಜಾರ್ಖಂಡ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದ ವಿಡಿಯೋವೇ?: ಸತ್ಯ ಇಲ್ಲಿ ತಿಳಿಯಿರಿ

ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜುಲೈ 10, 2025 ರಂದು ಸಚಿನ್ ತೆಂಡೂಲ್ಕರ್ ಹಂಚಿಕೊಂಡ X ಪೋಸ್ಟ್ ಕಂಡಿದೆ. ಈ ಪೋಸ್ಟ್ ವೈರಲ್ ಚಿತ್ರಕ್ಕೆ ಬಹುತೇಕ ಹೋಲುವ ಫೋಟೋವನ್ನು ಒಳಗೊಂಡಿದೆ. ಮತ್ತು ಇಲ್ಲಿ, ಸಚಿನ್ ಲಾರ್ಡ್ಸ್‌ನಲ್ಲಿ ತನ್ನದೇ ಆದ ಭಾವಚಿತ್ರದ ಮುಂದೆ ನಿಂತಿದ್ದಾರೆ: “ನಾನು ಮೊದಲು 1988 ರಲ್ಲಿ ಹದಿಹರೆಯದವನಾಗಿದ್ದಾಗ ಲಾರ್ಡ್ಸ್‌ಗೆ ಭೇಟಿ ನೀಡಿದ್ದೆ, ಮತ್ತು 1989 ರಲ್ಲಿ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡದೊಂದಿಗೆ ಹಿಂತಿರುಗಿದೆ… ಇಂದು, ಈ ಸ್ಥಳದಲ್ಲಿ ನನ್ನ ಭಾವಚಿತ್ರವನ್ನು ಅನಾವರಣಗೊಳಿಸುವುದು ಪದಗಳಲ್ಲಿ ಹೇಳುವುದು ಕಷ್ಟಕರವಾದ ಭಾವನೆಯಾಗಿದೆ.” ಎಂದು ಕ್ಯಾಪ್ಶನ್ ನೀಡಿದ್ದಾರೆ.

ವರದಿಯ ಪ್ರಕಾರ, ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಐಕಾನಿಕ್ ಗಂಟೆ ಬಾರಿಸಿದ ನಂತರ, ಸಚಿನ್ ಅವರ ಭಾವಚಿತ್ರವನ್ನು ಲಾರ್ಡ್ಸ್ ಪೆವಿಲಿಯನ್‌ನಲ್ಲಿ ಅನಾವರಣಗೊಳಿಸಲಾಯಿತು. ಈಗ ಎಂಸಿಸಿ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿರುವ ಈ ವರ್ಣಚಿತ್ರವನ್ನು ಕಲಾವಿದ ಸ್ಟುವರ್ಟ್ ಪಿಯರ್ಸನ್ ರೈಟ್ 18 ವರ್ಷಗಳ ಹಿಂದೆ ತೆಗೆದ ಫೋಟೋದಿಂದ ರಚಿಸಿದ್ದಾರೆ, ಇದು ಭಾರತದ ಬಿಳಿ ಉಡುಪಿನಲ್ಲಿ ಸಚಿನ್ ಅವರ ವಿಶಿಷ್ಟ ಗುಂಗುರು ಕೂದಲಿನೊಂದಿಗೆ ಸೆರೆಹಿಡಿಯಲ್ಪಟ್ಟಿದೆ.

ಆದ್ದರಿಂದ, ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಅವರ ಭಾವಚಿತ್ರದೊಂದಿಗೆ ಸಚಿನ್ ನಿಂತಿರುವ ವೈರಲ್ ಚಿತ್ರವನ್ನು ಡಿಜಿಟಲ್ ರೂಪದಲ್ಲಿ ಬದಲಾಯಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ