Fact Check: ಐಸಿಯುನಲ್ಲಿ ಸಲ್ಮಾನ್ ಖಾನ್- ಬದುಕುಳಿಯುವುದು ಅನುಮಾನ?: ವೈರಲ್ ಪೋಸ್ಟ್ನ ಸತ್ಯ ಇಲ್ಲಿದೆ
Salman Khan Fact Check: ಸಲ್ಮಾನ್ ಖಾನ್ ತಮಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿದ ಬೆನ್ನಲ್ಲೇ ಈ ಫೋಟೋ ವೈರಲ್ ಆಗುತ್ತಿದೆ. ಟಿವಿ9 ಕನ್ನಡ ತನಿಖೆ ನಡೆಸಿದಾಗ ಸಲ್ಮಾನ್ ಖಾನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ವೈರಲ್ ಫೋಟೋಗಳನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ.

ಬೆಂಗಳೂರು (ಜೂ. 26): ಇತ್ತೀಚೆಗೆ, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಕಪಿಲ್ ಶರ್ಮಾ ಅವರ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಅವರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದರು. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ, ಇದರಲ್ಲಿ ಸಲ್ಮಾನ್ ಖಾನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಕೊಂಡಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ಚಿತ್ರಗಳನ್ನು ನಿಜವೆಂದು ಪರಿಗಣಿಸಿ, ಸಲ್ಮಾನ್ ಖಾನ್ ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳುತ್ತಿದ್ದಾರೆ.
ವೈರಲ್ ಪೋಸ್ಟ್‌ನಲ್ಲಿ ಏನಿದೆ?
ಫೇಸ್‌ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, “ಸಲ್ಮಾನ್ ಖಾನ್ ಐಸಿಯುನಲ್ಲಿದ್ದಾರೆ. ಸಲ್ಮಾನ್ ಖಾನ್ ಬದುಕುಳಿಯುವ ಭರವಸೆ ಬಹಳ ಕಡಿಮೆ” ಎಂದು ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಐಸಿಯುನಲ್ಲಿರುವುದು ನಿಜವೇ?:
ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಆಗಿರುವ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೊಟೋ ಎಡಿಟ್ ಮಾಡಲ್ಪಟ್ಟಿವೆ. ಜನರು ಈ ಫೋಟೋಗಳನ್ನು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಫೋಟೋಗಳನ್ನು ತನಿಖೆ ಮಾಡಲು, ನಾವು ಫೋಟೋಗಳನ್ನು ಪ್ರತ್ಯೇಕವಾಗಿ ಹುಡುಕಿದೆವು.
ನಾವು ಮೊದಲು ಯಾಂಡೆಕ್ಸ್ ಉಪಕರಣದ ಮೂಲಕ ಕೊಲಾಜ್‌ನಲ್ಲಿರುವ ಮೊದಲ ಫೋಟೋವನ್ನು ಹುಡುಕಿದೆವು. ಈ ಸಂದರ್ಭ cafef.vn ವೆಬ್‌ಸೈಟ್‌ನಲ್ಲಿ ಫೋಟೋಗೆ ಸಂಬಂಧಿಸಿದ ಸುದ್ದಿಯನ್ನು ನಾವು ಕಂಡುಕೊಂಡೆವು. ಜನವರಿ 3, 2024 ರಂದು ಪ್ರಕಟವಾದ ಸುದ್ದಿಯಲ್ಲಿ, ಇದೇ ವೈರಲ್ ಫೋಟೋ ಇದ್ದು ಆದರೆ ಇದರಲ್ಲಿರುವವರು ಬೇರೊಬ್ಬರಾಗಿದ್ದಾರೆ.
Fact Check: ಇರಾನಿಯನ್ನರು ಆಶ್ರಯ ಪಡೆಯಲು ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾರಾ?: ವೈರಲ್ ವಿಡಿಯೋದ ಸತ್ಯ ಏನು?
ತನಿಖೆಯನ್ನು ಮುಂದುವರಿಸುತ್ತಾ, ನಾವು ಎರಡನೇ ಫೋಟೋವನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಿದೆವು. ಆಗ ಪಂಜಾಬಿ ಜಾಗರಣ್ ವೆಬ್‌ಸೈಟ್‌ನಲ್ಲಿ ವೈರಲ್ ಚಿತ್ರಕ್ಕೆ ಸಂಬಂಧಿಸಿದ ಸುದ್ದಿ ನಮಗೆ ಸಿಕ್ಕಿತು. ಈ ಸುದ್ದಿಯನ್ನು ಅಕ್ಟೋಬರ್ 2, 2022 ರಂದು ಪ್ರಕಟಿಸಲಾಗಿದೆ. ನೀಡಿರುವ ಮಾಹಿತಿಯ ಪ್ರಕಾರ, ಪಂಜಾಬಿ ಗಾಯಕ ಅಲ್ಫಾಜ್ ಕಾರಿನಲ್ಲಿ ಪೆಟ್ರೋಲ್ ತುಂಬಲು ನಿಂತಾಗ, ಆ ಸಮಯದಲ್ಲಿ ಅಪರಿಚಿತ ಟೆಂಪೋ ಚಾಲಕನೊಬ್ಬ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಚಿತ್ರವು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸಮಯದ್ದಾಗಿದೆ.
htcity ಯ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋಗೆ ಸಂಬಂಧಿಸಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಅಕ್ಟೋಬರ್ 2, 2022 ರಂದು ಮಾಡಿದ ಪೋಸ್ಟ್‌ನಲ್ಲಿ, ಫೋಟೋ ಪಂಜಾಬಿ ಗಾಯಕ ಅಲ್ಫಾಜ್ ಅವರದು ಎಂದು ಹೇಳಲಾಗಿದೆ.
View this post on Instagram
ಇತ್ತೀಚೆಗೆ ಸಲ್ಮಾನ್ ಖಾನ್ ಅವರು ನೆಟ್ಫ್ಲಿಕ್ಸ್ನ ‘ದಿ ಕಪಿಲ್ ಶರ್ಮಾ’ ಶೋಗೆ ಆಗಮಿಸಿದ್ದರು. ಈ ವೇಳೆ ಅವರು ತಮ್ಮ ಜೀವನದಲ್ಲಿ ತಮಗಿರುವ ಕಾಯಿಲೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಲ್ಮಾನ್ ಖಾನ್ಗೆ ವಿವಾಹದ ಬಗ್ಗೆ ಕೇಳಲಾಯಿತು. ಈ ವೇಳೆ ಅವರು ತಮಗಿರುವ ಸಮಸ್ಯೆ ಬಗ್ಗೆ ಹೇಳಿದರು. ‘ನನಗೆ ವಿವಿಧ ರೋಗಗಳು ಇವೆ. ಇದರ ಜೊತೆಗೆ ನಾನು ನಟನೆ ಮಾಡುವಾಗ ಫ್ರ್ಯಾಕ್ಚರ್ ಆಗುತ್ತದೆ. ನರಶೂಲೆ, ಮೆದುಳಿನಲ್ಲಿ ರಕ್ತನಾಳದ ಉರಿಯೂತ, ಎವಿಎಂ ಸಮಸ್ಯೆ ಇದ್ದರೂ ನಾನು ಈಗಲೂ ಕೆಲಸ ಮಾಡುತ್ತಿದ್ದೇನೆ. ಈ ಮಧ್ಯೆ ಅವರ (ಪತ್ನಿ) ಮೂಡ್ ಹಾಳಾಯಿತು ಎಂದರೆ ವಿಚ್ಛೇದನ ಕೊಟ್ಟು ಅರ್ಧ ಆಸ್ತಿಯನ್ನು ತೆಗೆದುಕೊಂಡು ಹೋಗಿಬಿಡಬಹುದು. ನಾನು ಯುವಕನಾಗಿದ್ದರೆ ಹೆಚ್ಚು ಸಮಸ್ಯೆ ಆಗುತ್ತಿರಲಿಲ್ಲ. ಎಲ್ಲವನ್ನೂ ಮತ್ತೆ ಗಳಿಸಬಹುದಿತ್ತು. ಆದರೆ, ಈ ವಯಸ್ಸಲ್ಲಿ ಮತ್ತೆ ಮೊದಲಿನಿಂದ ಆರಂಭಿಸಬೇಕು ಎಂದರೆ ಅದು ಅಸಾಧ್ಯ’ ಎಂದು ಅವರು ಹೇಳಿದ್ದರು.
ಸಲ್ಮಾನ್ ಖಾನ್ ತಮಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿದ ಬೆನ್ನಲ್ಲೇ ಈ ಫೋಟೋ ವೈರಲ್ ಆಗುತ್ತಿದೆ. ಟಿವಿ9 ಕನ್ನಡ ತನಿಖೆ ನಡೆಸಿದಾಗ ಸಲ್ಮಾನ್ ಖಾನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ವೈರಲ್ ಫೋಟೋಗಳನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ. ಒಂದು ಫೋಟೋ ಬೇರೆ ವ್ಯಕ್ತಿಯದ್ದಾಗಿದೆ. ಆದರೆ, ಇನ್ನೊಂದು ಫೋಟೋ ಪಂಜಾಬಿ ಗಾಯಕ ಅಲ್ಫಾಜ್ ಅವರದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ