ಶಿವರಾಜ್​ಕುಮಾರ್​ ಬಳಿಕ ‘ಹನುಮಾನ್​’ ಸಿನಿಮಾ ನೋಡಲಿರುವ ಸಂಸದ ತೇಜಸ್ವಿ ಸೂರ್ಯ

ಶಿವರಾಜ್​ಕುಮಾರ್​ ಅವರು ‘ಹನುಮಾನ್​’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಕೂಡ ಈ ಸಿನಿಮಾವನ್ನು ನೋಡುವುದಾಗಿ ಹೇಳಿದ್ದಾರೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ. ಈ ಚಿತ್ರದಲ್ಲಿ ತೇಜ ಸಜ್ಜಾ, ಅಮೃತಾ ಐಯ್ಯರ್​ ನಟಿಸಿದ್ದಾರೆ. ಪ್ರಶಾಂತ್​ ವರ್ಮಾ ನಿರ್ದೇಶನ ಮಾಡಿದ್ದಾರೆ.

ಶಿವರಾಜ್​ಕುಮಾರ್​ ಬಳಿಕ ‘ಹನುಮಾನ್​’ ಸಿನಿಮಾ ನೋಡಲಿರುವ ಸಂಸದ ತೇಜಸ್ವಿ ಸೂರ್ಯ
ತೇಜ ಸಜ್ಜಾ, ತೇಜಸ್ವಿ ಸೂರ್ಯ, ಗೀತಾ. ಶಿವರಾಜ್​ಕುಮಾರ್​

Updated on: Jan 17, 2024 | 12:40 PM

ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರನ್ನು ಟಾಲಿವುಡ್​ ಹೀರೋ ತೇಜ ಸಜ್ಜಾ ಭೇಟಿ ಆಗಿದ್ದಾರೆ. ತೆಲುಗಿನ ‘ಹನುಮಾನ್​’ ಸಿನಿಮಾದಲ್ಲಿ ತೇಜ ಸಜ್ಜಾ ಅವರು ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಗೆಲುವಿನ ಬೆನ್ನಲ್ಲೇ ತೇಜಸ್ವಿ ಸೂರ್ಯ ಅವರನ್ನು ತೇಜ ಸಜ್ಜಾ ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಈ ಭೇಟಿ ನಡೆದಿದೆ. ‘ಹನುಮಾನ್​’ ಸಿನಿಮಾ (Hanuman Movie) ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈಗ ತೇಜಸ್ವಿ ಸೂರ್ಯ ಕೂಡ ಈ ಸಿನಿಮಾವನ್ನು ನೋಡುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಅವರು ‘ಹನುಮಾನ್​’ ಚಿತ್ರ ವೀಕ್ಷಿಸಲಿದ್ದಾರೆ. ಅವರ ಜೊತೆ ತೇಜ ಸಜ್ಜಾ (Teja Sajja) ಇರುವ ಫೋಟೋ ವೈರಲ್​ ಆಗಿದೆ.

ಈ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ‘ಹನುಮಾನ್​’ ಸಿನಿಮಾ ಬಿಡುಗಡೆ ಆಯಿತು. ಒಂದು ದಿನ ಮುಂಚೆ ಪೇಯ್ಡ್​ ಪ್ರೀಮಿಯರ್​ ಏರ್ಪಡಿಸಲಾಗಿತ್ತು. ಅದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಮೂಲಗಳ ಪ್ರಕಾರ ಪೇಯ್ಡ್​ ಪ್ರೀಮಿಯರ್​ ಶೋಗಳಿಂದಲೇ ಈ ಸಿನಿಮಾಗೆ 4 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿತ್ತು. ಈಗ ಈ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: ‘ಹನುಮಾನ್’ ಸಿನಿಮಾ ನೋಡಿ ಶಿವಣ್ಣ ಹೇಳಿದ್ದು ಹೀಗೆ

ಸಂಕ್ರಾಂತಿ ಪ್ರಯುಕ್ತ ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’, ಧನುಷ್​ ಅಭಿನಯದ ‘ಕ್ಯಾಪ್ಟನ್​ ಮಿಲ್ಲರ್​’, ಅಕ್ಕಿನೇನಿ ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಮುಂತಾದ ಸಿನಿಮಾಗಳು ಬಿಡುಗಡೆ ಆದವು. ಅವುಗಳ ನಡುವೆ ‘ಹನುಮಾನ್​’ ಸಿನಿಮಾ ಕೂಡ ಪೈಪೋಟಿ ನೀಡಿತು. ಘಟಾನುಘಟಿ ಸ್ಟಾರ್​ ನಟರ ಸಿನಿಮಾಗಳ ಜೊತೆ ಪೈಪೋಟಿ ನೀಡುತ್ತಿರುವ ‘ಹನುಮಾನ್​’ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ಈ ಚಿತ್ರಕ್ಕೆ ಪ್ರಶಾಂತ್​ ವರ್ಮಾ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: 2024ರ ಮೊದಲ ಹಿಟ್ ‘ಹನುಮಾನ್’; ಗಳಿಕೆಯಲ್ಲಿ ‘ಕೆಜಿಎಫ್’, ‘ಕಾಂತಾರ’ ಹಿಂದಿಕ್ಕಿದ ಸಿನಿಮಾ..

ನಟ ಶಿವರಾಜ್​ಕುಮಾರ್​ ಇತ್ತೀಚೆಗೆ ‘ಹನುಮಾನ್​’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್​ನಲ್ಲಿ ಪತ್ನಿ ಗೀತಾ ಜೊತೆ ಶಿವರಾಜ್​ಕುಮಾರ್​ ಅವರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಈ ವೇಳೆ ನಟ ತೇಜ ಸಜ್ಜಾ ಹಾಗೂ ನಟಿ ಅಮೃತಾ ಐಯ್ಯರ್​ ಕೂಡ ಜೊತೆಗಿದ್ದರು. ಸಿನಿಮಾ ನೋಡಿದ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಶಿವರಾಜ್​ಕುಮಾರ್​ ಅವರು ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದಲ್ಲಿ ಸೂಪರ್​ ಹೀರೋ ಕಾನ್ಸೆಪ್ಟ್​ ಇದೆ. ವರಲಕ್ಷ್ಮೀ ಶರತ್ ಕುಮಾರ್, ರಾಜ್​ ದೀಪಕ್ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us