2024ರ ಮೊದಲ ಹಿಟ್ ‘ಹನುಮಾನ್’; ಗಳಿಕೆಯಲ್ಲಿ ‘ಕೆಜಿಎಫ್’, ‘ಕಾಂತಾರ’ ಹಿಂದಿಕ್ಕಿದ ಸಿನಿಮಾ..

ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು ಮೊದಲಾದ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಿದೆ. ಹಿಂದಿಯಲ್ಲೂ ಸಿನಿಮಾ ಉತ್ತಮವಾಗಿ ಗಳಿಕೆ ಮಾಡಿದೆ. ಹಿಂದಿ ವರ್ಷನ್​ನಿಂದ ಚಿತ್ರಕ್ಕೆ 12 ಕೋಟಿ ರೂಪಾಯಿ ಸಿಕ್ಕಿದೆ.

2024ರ ಮೊದಲ ಹಿಟ್ ‘ಹನುಮಾನ್’; ಗಳಿಕೆಯಲ್ಲಿ ‘ಕೆಜಿಎಫ್’, ‘ಕಾಂತಾರ’ ಹಿಂದಿಕ್ಕಿದ ಸಿನಿಮಾ..
ಕಾಂತಾರ-ಹನುಮಾನ್

Updated on: Jan 15, 2024 | 2:30 PM

2024ರ ಆರಂಭದಲ್ಲೇ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’, ತೆಜ ಸಜ್ಜಾ ನಟನೆಯ ‘ಹನುಮಾನ್’ (Hanuman Movie), ಅಕ್ಕಿನೇನಿ ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಮೊದಲಾದ ಚಿತ್ರಗಳು ಬಿಡುಗಡೆ ಆಗಿವೆ. ಈ ಪೈಕಿ ‘ಹನುಮಾನ್’ ಸಿನಿಮಾ ಗೆದ್ದಿದೆ ಎಂದು ಘೋಷಣೆ ಮಾಡಲಾಗಿದೆ. 2024ರ ಮೊದಲ ಹಿಟ್ ಎನ್ನುವ ಖ್ಯಾತಿ ‘ಹನುಮಾನ್’ ಚಿತ್ರಕ್ಕೆ ಸಿಕ್ಕಿದೆ. ಮೊದಲ ವಾರದ ಗಳಿಕೆಯಲ್ಲಿ ಈ ಚಿತ್ರ ‘ಕಾಂತಾರ’ ಹಾಗೂ ‘ಕೆಜಿಎಫ್ ಚಾಪ್ಟರ್ 1’ ಚಿತ್ರದ (ಹಿಂದಿ ವರ್ಷನ್) ಗಳಿಕೆಯನ್ನು ಹಿಂದಿಕ್ಕಿದೆ.

‘ಹನುಮಾನ್’ ಸಿನಿಮಾಗೆ ಗುರುವಾರ (ಜನವರಿ 11) ಪೇಯ್ಡ್​ ಪ್ರೀಮಿಯರ್ ಇಡಲಾಗಿತ್ತು. ಈ ವೇಳೆ ಸಿನಿಮಾ ನಾಲ್ಕು ಕೋಟಿ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ (ಜನವರಿ 12) 8 ಕೋಟಿ ರೂಪಾಯಿ, ಶನಿವಾರ (ಜನವರಿ 13) 12.45 ಕೋಟಿ ರೂಪಾಯಿ ಹಾಗೂ ಭಾನುವಾರ 16 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 40.65 ಕೋಟಿ ರೂಪಾಯಿ ಆಗಿದೆ.

ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು ಮೊದಲಾದ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಿದೆ. ಹಿಂದಿಯಲ್ಲೂ ಸಿನಿಮಾ ಉತ್ತಮವಾಗಿ ಗಳಿಕೆ ಮಾಡಿದೆ. ಹಿಂದಿ ವರ್ಷನ್​ನಿಂದ ಚಿತ್ರಕ್ಕೆ 12 ಕೋಟಿ ರೂಪಾಯಿ ಸಿಕ್ಕಿದೆ. ಮೊದಲ ವೀಕೆಂಡ್​ ಗಳಿಕೆಯಲ್ಲಿ ಈ ಚಿತ್ರ ‘ಕಾಂತಾರ’, ‘ಕೆಜಿಎಫ್ 2’ ಗೆದ್ದಿದೆ. ಈ ಚಿತ್ರವನ್ನು ಕಟ್ಟಿಕೊಟ್ಟ ರೀತಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಹನುಮಾನ್​ನ ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಚಿತ್ರದ ಕಥೆ ಸಿದ್ಧವಾಗಿದೆ.

ಈ ಬಗ್ಗೆ ಬಾಲಿವುಡ್​ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಟ್ವೀಟ್ ಮಾಡಿದ್ದಾರೆ. ‘2024ರ ಮೊದಲ ಹಿಟ್ ಸಿನಿಮಾ’ ಎಂದು ಅವರು ಘೋಷಣೆ ಮಾಡಿದ್ದಾರೆ. ‘ಹನುಮಾನ್’ ಎದುರು ರಿಲೀಸ್ ಆದ ‘ಗುಂಟೂರು ಖಾರಂ’ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ.


ಇದನ್ನೂ ಓದಿ: ‘ಹನುಮಾನ್’ ಸಿನಿಮಾಕ್ಕೆ ಭಾರಿ ನಷ್ಟ, ನಿರ್ಮಾಪಕ ದಿಲ್ ರಾಜು ಮೇಲೆ ಗುಮಾನಿ

ಸಿನಿಮಾ ಕಲೆಕ್ಷನ್ ಉತ್ತಮವಾಗಿ ಆಗುತ್ತಿದೆ. ಪ್ರತಿ ಟಿಕೆಟ್​ ಮೇಲೆ ಐದು ರೂಪಾಯಿ ಹಣವನ್ನು ರಾಮ ಮಂದಿರಕ್ಕೆ ನೀಡುವುದಾಗಿ ತಂಡ ಘೋಷಣೆ ಮಾಡಿದೆ. ಮೊದಲ ದಿನ 14 ಲಕ್ಷ ರೂಪಾಯಿ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ತಂಡ ದಾನ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:06 pm, Mon, 15 January 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us