Happy Birthday Madhuri Dixit: ಮಾಧುರಿ ದೀಕ್ಷಿತ್ ಜತೆಗಿನ 22 ವರ್ಷ ಹಳೆಯ ಫೋಟೋ ಹಂಚಿಕೊಂಡ ಪತಿ ಶ್ರೀರಾಮ್

ಅನಿಲ್​ ಕಪೂರ್​ ಕೂಡ ಮಾಧುರಿ ದೀಕ್ಷಿತ್​ಗೆ ವಿಶ್​ ಮಾಡಿದ್ದಾರೆ. ಹ್ಯಾಪ್ಪಿ ಬರ್ತ್​ಡೇ ಮಾಧುರಿ ದೀಕ್ಷಿತ್​. ನಿಮ್ಮ ಜತೆ ಮತ್ತೆ ಕೆಲಸ ಮಾಡೋಕೆ ನಾನು ಕಾತುರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Happy Birthday Madhuri Dixit: ಮಾಧುರಿ ದೀಕ್ಷಿತ್ ಜತೆಗಿನ 22 ವರ್ಷ ಹಳೆಯ ಫೋಟೋ ಹಂಚಿಕೊಂಡ ಪತಿ ಶ್ರೀರಾಮ್
ಮಾಧುರಿ ದೀಕ್ಷಿತ್ ಹಾಗೂ ಪತಿ ಶ್ರೀರಾಮ್

Updated on: Aug 05, 2021 | 7:09 PM

ಮಾಧುರಿ ದೀಕ್ಷಿತ್​ ಇಂದು 54ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಮಾಧುರಿ ಡಾ. ಶ್ರೀರಾಮ್​ ನೇನೆ ಅವರು ಅಪರೂಪದ ಹಳೆಯ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ನನ್ನ ಸೋಲ್​ಮೇಟ್​ ಮಾಧುರಿ ದೀಕ್ಷಿತ್​ ಹ್ಯಾಪ್ಪಿ ಬರ್ತ್​ಡೇ. ಜೊತೆಯಾಗಿ ನಮ್ಮಿಬ್ಬರ ಪಯಣ ಅದ್ಭುತವಾಗಿತ್ತು. ನಿನಗೆ ಹ್ಯಾಪ್ಪಿ ಬರ್ತ್​ ಡೇ ಎಂದು ಶ್ರೀರಾಮ್ ಬರೆದುಕೊಂಡಿದ್ದಾರೆ.  

ಅನಿಲ್​ ಕಪೂರ್​ ಕೂಡ ಮಾಧುರಿ ದೀಕ್ಷಿತ್​ಗೆ ವಿಶ್​ ಮಾಡಿದ್ದಾರೆ. ಹ್ಯಾಪ್ಪಿ ಬರ್ತ್​ಡೇ ಮಾಧುರಿ ದೀಕ್ಷಿತ್​. ನಿಮ್ಮ ಜತೆ ಮತ್ತೆ ಕೆಲಸ ಮಾಡೋಕೆ ನಾನು ಕಾತುರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ‘ಏಕ್​ ದೋ ತೀನ್​..’ ಎಂದು ಕುಣಿದು, ಪಡ್ಡೆಗಳ ನಿದ್ದೆ ಕೆಡಿಸಿದ ಮಾಧುರಿ ದೀಕ್ಷಿತ್​ ಅಂದು ಭಾರತೀಯ ಚಿತ್ರರಂಗದ ಲೇಡಿ ಸೂಪರ್​ ಸ್ಟಾರ್​ ಆಗಿದ್ದರು.

1994ರಲ್ಲಿ ಬಂದ ಹಮ್​ ಆಪ್ಕೆ ಹೈ ಕೌನ್​ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್​ ಮತ್ತು ಸಲ್ಮಾನ್​ ಖಾನ್​ ಜೋಡಿ ಆಗಿದ್ದರು. ಆ ಚಿತ್ರ ಬರುವ ವೇಳೆಗೆ ಮಾಧುರಿ ಧೀಕ್ಷಿತ್​ಗೆ ಸ್ಟಾರ್​ ಪಟ್ಟ ಸಿಕ್ಕಿತ್ತು. ಆಗ ಸಲ್ಮಾನ್​ ಖಾನ್​ ಕೂಡ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಆದರೂ ಹಮ್​ ಆಪ್ಕೆ ಹೈ ಕೌನ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ಗಿಂತಲೂ ಹೆಚ್ಚು ಸಂಭಾವನೆಯನ್ನು ಮಾಧುರಿಗೆ ನೀಡಲಾಗಿತ್ತು. ಅದು ಅಂದು ಮಾಧುರಿಗೆ ಇದ್ದ ಬೇಡಿಕೆಗೆ ಸಾಕ್ಷಿ ಒದಗಿಸುವಂತಹ ಸಂಗತಿ. ಇಂದಿಗೂ ಡ್ಯಾನ್ಸ್​ ಸಂಬಂಧಿತ ಟಿವಿ ಕಾರ್ಯಕ್ರಮಗಳ ಜಡ್ಜ್​ ಆಗಿ ಅವರು ಸಕ್ರಿಯರಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಾಧುರಿಗೆ ಇಂದು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

ಇದನ್ನೂ ಓದಿ: Happy Birthday Madhuri Dixit: ಮಾಧುರಿ ದೀಕ್ಷಿತ್​ ಜನ್ಮದಿನ; ‘ಏಕ್​ ದೋ ತೀನ್​’ ಸುಂದರಿಗೆ ಈಗ ಎಷ್ಟು ವರ್ಷ?

Published On - 7:38 pm, Sat, 15 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us