‘ಹಣ ದೋಚಿದ್ದೂ ಗೊತ್ತಾಗಲಿಲ್ಲ’; ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

ಇತ್ತೀಚೆಗಷ್ಟೇ ಬಿಗ್ ಬಾಸ್ ಹಿಂದಿ ಒಟಿಟಿಯ ಎರಡನೇ ಸೀಸನ್ ಪೂರ್ಣಗೊಂಡಿದೆ. ಯೂಟ್ಯೂಬರ್ ಎಲ್ವಿಶ್ ಯಾದವ್ ಅವರು ವಿನ್ನರ್ ಆದರೆ, ಅಭಿಷೇಕ್ ರನ್ನರ್ ಅಪ್ ಆಗಿದ್ದರು. ಆಲಿಯಾ ಭಟ್ ಸಹೋದರಿ ಪೂಜಾ ಭಟ್​ಗೆ ಹಿನ್ನಡೆ ಆಯಿತು.

‘ಹಣ ದೋಚಿದ್ದೂ ಗೊತ್ತಾಗಲಿಲ್ಲ’; ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ
ಅಭಿಷೇಕ್

Updated on: Oct 24, 2023 | 7:40 AM

ಬಿಗ್ ಬಾಸ್ (Bigg Boss) ಹಿಂದಿ ಒಟಿಟಿ ಸೀಸನ್ 2’ರ ರನ್ನರ್ ಅಪ್​ ಅಭಿಷೇಕ್ ಮಲ್ಹನ್ ಅವರು ತೊಂದರೆಗೆ ಸಿಲುಕಿದ್ದಾರೆ. ಇತ್ತೀಚೆಗೆ ಅವರು ಆಫ್ರಿಕಾಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅವರು 1.5 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಈ ಹಣವನ್ನು ಕಳ್ಳರು ದೋಚಿದ್ದಾರೆ. ಈ ಹಣ ಯಾವಾಗ ಕಳ್ಳತನ ಆಯಿತು ಎಂಬುದೇ ಅವರಿಗೆ ಗೊತ್ತಾಗಲಿಲ್ಲ. ಈ ಬಗ್ಗೆ ಅವರು ಯೂಟ್ಯೂಬ್ ಚಾನೆಲ್ ಮೂಲಕ ತಿಳಿಸಿದ್ದಾರೆ. ಅವರಿಗೆ ಈ ಘಟನೆಯಿಂದ ಶಾಕ್ ಆಗಿದ್ದು, ಇದರಿಂದ ಹೊರ ಬರಲು ಅವರ ಬಳಿ ಸಾಧ್ಯವಾಗುತ್ತಿಲ್ಲ.

‘ನಾನು ಒಂದೂವರೆ ಲಕ್ಷ ರೂಪಾಯಿ ಕ್ಯಾಶ್ ಹಿಡಿದು ಹೊರಟಿದ್ದೆ. ನಾನು ಐಫೋನ್ ಒಂದನ್ನು ಖರೀದಿಸಬೇಕಿತ್ತು. ಇದಕ್ಕಾಗಿ ಹಣ ತಂದಿದ್ದೆ. ಆದರೆ, ನನ್ನ ಬ್ಯಾಗ್​ನಲ್ಲಿ ಹಣವೇ ಇಲ್ಲ. ನನಗೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ. ಹಣದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಎಂದು ನನ್ನ ತಂದೆ ಹೇಳುತ್ತಲೇ ಇದ್ದರು. ಆದರೆ, ಹಣ ಹೇಗೆ ಕಳ್ಳತನ ಆಯಿತು ಎಂಬುದೇ ತಿಳಿದಿಲ್ಲ’ ಎಂದಿದ್ದಾರೆ ಅಭಿಷೇಕ್. ಅವರು ಓಡಾಡಿದ ಜಾಗವನ್ನೆಲ್ಲವನ್ನೂ ನೆನಪಿಸಿಕೊಂಡಿದ್ದಾರೆ. ಆದರೆ, ಹಣ ಯಾವಾಗ ಕಳ್ಳತನವಾಯಿತು ಎಂಬುದನ್ನು ಮಾತ್ರ ಅವರಿಗೆ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

‘ನಾನು ಅಷ್ಟು ದೊಡ್ಡ ಮೊತ್ತದ ನಗದನ್ನು ಈವರೆಗೆ ತೆಗೆದುಕೊಂಡು ಹೋಗಿರಲಿಲ್ಲ. ನಾನು ಹಣವನ್ನು ಕಳೆದುಕೊಂಡಿದ್ದು ಹೇಗೆ ಎನ್ನುವುದೇ ಗೊತ್ತಾಗುತ್ತಿಲ್ಲ. ಗಿಫ್ಟ್ ಮಾಡಲು ನಾನು ಐಫೋನ್ ಖರೀದಿ ಮಾಡುವವನಿದ್ದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ರೀತಿಯ ವಿಚಾರಗಳನ್ನು ನನ್ನಿಂದ ಫೇಸ್ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ವರ್ತೂರು ಸಂತೋಷ್​ ಬಿಗ್ ಬಾಸ್ ಮನೆಯಿಂದ ಎಕ್ಸಿಟ್ ಆಗಿದ್ದು ಹೇಗಿತ್ತು? ಎಪಿಸೋಡ್​ನಲ್ಲಿ ತೋರಿಸಿದ್ದಿಷ್ಟು

ಇತ್ತೀಚೆಗಷ್ಟೇ ಬಿಗ್ ಬಾಸ್ ಹಿಂದಿ ಒಟಿಟಿಯ ಎರಡನೇ ಸೀಸನ್ ಪೂರ್ಣಗೊಂಡಿದೆ. ಯೂಟ್ಯೂಬರ್ ಎಲ್ವಿಶ್ ಯಾದವ್ ಅವರು ವಿನ್ನರ್ ಆದರೆ, ಅಭಿಷೇಕ್ ರನ್ನರ್ ಅಪ್ ಆಗಿದ್ದರು. ಆಲಿಯಾ ಭಟ್ ಸಹೋದರಿ ಪೂಜಾ ಭಟ್​ಗೆ ಹಿನ್ನಡೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us