ವರ್ತೂರು ಸಂತೋಷ್​ ಬಿಗ್ ಬಾಸ್ ಮನೆಯಿಂದ ಎಗ್ಸಿಟ್ ಆಗಿದ್ದು ಹೇಗಿತ್ತು? ಎಪಿಸೋಡ್​ನಲ್ಲಿ ತೋರಿಸಿದ್ದಿಷ್ಟು

ಮಿಡ್ ವೀಕ್ ಎಲಿಮಿನೇಷನ್ ಬಿಗ್ ಬಾಸ್​ಗೆ ಹೊಸದೇನು ಅಲ್ಲ. ಆದರೆ, ಈ ರೀತಿಯ ಎಲಿಮಿನೇಷನ್​ಗಳು ಸೀಸನ್​ ಆರಂಭದಲ್ಲಿ ಇರುವುದಿಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳನ್ನು ಈ ರೀತಿ ಹೊರಕ್ಕೆ ಕಳುಹಿಸಲಾಗಿದೆ. ಈಗ ಸೀಸನ್ 10ರಲ್ಲೂ ಹಾಗೆಯೇ ಆಗಿದೆ.

ವರ್ತೂರು ಸಂತೋಷ್​ ಬಿಗ್ ಬಾಸ್ ಮನೆಯಿಂದ ಎಗ್ಸಿಟ್ ಆಗಿದ್ದು ಹೇಗಿತ್ತು? ಎಪಿಸೋಡ್​ನಲ್ಲಿ ತೋರಿಸಿದ್ದಿಷ್ಟು
ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on:Oct 24, 2023 | 9:36 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ವರ್ತೂರು ಸಂತೋಷ್ (Varthur Santosh) ಅವರನ್ನು ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಹುಲಿ ಉಗುರು ಹೊಂದಿರುವ ಆರೋಪ ಅವರ ಮೇಲಿದೆ. ಸದ್ಯ ಅವರನ್ನು 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ಮೂಲಕ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಬಹುತೇಕ ಖಚಿತವಾಗಿದೆ. ಅವರು ಎಗ್ಸಿಟ್ ಆಗುವ ಸಂದರ್ಭದ ದೃಶ್ಯವನ್ನು ಕೆಲವೇ ಸೆಕೆಂಡ್​ನಲ್ಲಿ ತೋರಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಿಡ್ ವೀಕ್ ಎಲಿಮಿನೇಷನ್ ಬಿಗ್ ಬಾಸ್​ಗೆ ಹೊಸದೇನು ಅಲ್ಲ. ಆದರೆ, ಈ ರೀತಿಯ ಎಲಿಮಿನೇಷನ್​ಗಳು ಸೀಸನ್​ ಆರಂಭದಲ್ಲಿ ಇರುವುದಿಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳನ್ನು ಈ ರೀತಿ ಹೊರಕ್ಕೆ ಕಳುಹಿಸಲಾಗಿದೆ. ಈಗ ಸೀಸನ್ 10ರಲ್ಲೂ ಹಾಗೆಯೇ ಆಗಿದೆ. ಸಂತೋಷ್ ಅವರು ಹುಲಿ ಉಗುರು ಹೊಂದಿದ್ದರಿಂದ ಅವರನ್ನು ‘ವನ್ಯಜೀವಿ ಸಂರಕ್ಷಣಾ ಕಾಯ್ದೆ’ ಅಡಿಯಲ್ಲಿ ಬಂಧಿಸಲಾಗಿದೆ.

ಅಕ್ಟೋಬರ್ 23ರ ಎಪಿಸೋಡ್​ನಲ್ಲಿ ಸಂತೋಷ್ ಅವರ ಎಲಿಮಿನೇಷನ್ ನೋಡಲು ಕಾದಿದ್ದರು. ಆದರೆ, ಅದನ್ನು ಎಪಿಸೋಡ್ ಕೊನೆಯಲ್ಲಿ ಕೆಲವೇ ಸೆಕೆಂಡ್ ತೋರಿಸಲಾಗಿದೆ. ಕನ್ಫೆಷನ್ ರೂಂಗೆ ಕರೆದು ಸಂತೋಷ್ ಅವರ ಹಣೆಗೆ ಪಟ್ಟಿ ಕಟ್ಟಲಾಗಿದೆ. ಆ ಬಳಿಕ ಅವರನ್ನು ಕರೆದೊಯ್ಯಲಾಗಿದೆ. ಆದರೆ, ಇದನ್ನು ಎಪಿಸೋಡ್​ನಲ್ಲಿ ತೋರಿಸಿಲ್ಲ. ಸಂತೋಷ್ ಹೊರ ಹೋದ ಬಗ್ಗೆ ಬಿಗ್ ಬಾಸ್​ನಲ್ಲೂ ಯಾವುದೇ ಚರ್ಚೆ ಆಗಿಲ್ಲ.

ಸದ್ಯ ಸಂತೋಷ್ ಅವರನ್ನು ವಿಚಾರಣೆ ಮಾಡಲಾಗುತ್ತಿದೆ. ಒಂದೊಮ್ಮೆ ಅಪರಾಧ ಸಾಬೀತಾದರೆ ಸಂತೋಷ್​ ಅವರಿಗೆ 3-7 ವರ್ಷಗಳವರೆಗೆ ಶಿಕ್ಷೆ ಹಾಗೂ 10,000ರಿಂದ 25,000ದವರೆಗೆ ದಂಡ ವಿಧಿಸುವ ಅವಕಾಶ ಇದೆ. ಮುಂದೇನಾಗುತ್ತದೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಆತಂಕ ಇದೆ.

ಇದನ್ನೂ ಓದಿ: ವರ್ತೂರು ಸಂತೋಷ್ ಧರಿಸಿದ್ದು ಹುಲಿ ಉಗುರು ಅನ್ನೋದು ಸಾಬೀತು, ಶೀಘ್ರವೇ ಕೋರ್ಟ್​ಗೆ ಹಾಜರು 

ವರ್ತೂರು ಸಂತೋಷ್ ಅವರು ರೈತ. ಟೊಮ್ಯಾಟೋ ಬೆಳೆದು ಅವರು ಸಾಕಷ್ಟು ಲಾಭ ಕಂಡರು. ಹಳ್ಳಿಕಾರ್ ಕ್ಯಾಟಲ್​ ಬ್ರೀಡ್​​ನ ಬಗ್ಗೆ ಅವರು ಹೆಚ್ಚು ಕಾಳಜಿ ಹೊಂದಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆಗೆ ಒಳಗಾಗುತ್ತಾರೆ. ಬಿಗ್ ಬಾಸ್​ಗೆ ಹೋದ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು.

ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ನಿತ್ಯದ ಎಪಿಸೋಡ್ ಪ್ರಸಾರ ಆಗುತ್ತದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:10 am, Tue, 24 October 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ