AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಮೆ ಕೇಳಿದರೂ ತಪ್ಪಲಿಲ್ಲ ಕಠಿಣ ಶಿಕ್ಷೆ; ಬಿಗ್ ಬಾಸ್​ ಮನೆಯಲ್ಲಿ ಇವರು ಮಾಡಿದ ತಪ್ಪೇನು?

ಕ್ಷಮೆ ಕೇಳಿದರೂ ತಪ್ಪಲಿಲ್ಲ ಕಠಿಣ ಶಿಕ್ಷೆ; ಬಿಗ್ ಬಾಸ್​ ಮನೆಯಲ್ಲಿ ಇವರು ಮಾಡಿದ ತಪ್ಪೇನು?

ಮದನ್​ ಕುಮಾರ್​
|

Updated on:Oct 23, 2023 | 5:44 PM

Share

ದೊಡ್ಮನೆಯೊಳಗೆ ಮೈಕೆಲ್​ ಅಜಯ್​ ಮತ್ತು ವಿನಯ್​ ಗೌಡ ಅವರು ತಪ್ಪು ಮಾಡಿದ್ದಾರೆ. ಮಾಡಿದ ತಪ್ಪಿಗೆ ಅವರು ಕ್ಷಮೆ ಕೂಡ ಕೇಳಿದ್ದಾರೆ. ಅದರೂ ಬಿಗ್​ ಬಾಸ್​ ಕರುಣೆ ತೋರಿಸಿಲ್ಲ. ಇವರಿಬ್ಬರು ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಇದು ಕೆಲವರ ಅಸಮಾಧಾನಕ್ಕೆ ಕಾರಣ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲಿ ಹಲವು ಟ್ವಿಸ್ಟ್​ಗಳು ಸಿಗುತ್ತಿವೆ. ಈಗಾಗಲೇ ಸ್ನೇಕ್​ ಶ್ಯಾಮ್​, ಗೌರೀಶ್ ಅಕ್ಕಿ, ವರ್ತೂರು ಸಂತೋಷ್​ ಅವರು ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್​ ಬಾಸ್​ ಮನೆಯೊಳಗಿನ ನಿಯಮಗಳು ತುಂಬ ಡಿಫರೆಂಟ್​ ಆಗಿರುತ್ತವೆ. ಆ ನಿಯಮ ಮುರಿದರೆ ಸಿಗುವ ಶಿಕ್ಷೆ ಕೂಡ ಅಷ್ಟೇ ಡಿಫರೆಂಟ್​ ಆಗಿರುತ್ತದೆ. ಈಗ ದೊಡ್ಮನೆಯೊಳಗೆ ಮೈಕೆಲ್​ ಅಜಯ್​ (Michael Ajay) ಮತ್ತು ವಿನಯ್​ ಗೌಡ ಅವರು ತಪ್ಪು ಮಾಡಿದ್ದಾರೆ. ಏಕಕಾಲಕ್ಕೆ ಸ್ಮೋಕಿಂಗ್​ ರೂಮ್​ ಅನ್ನು ಒಬ್ಬರಿಗಿಂತ ಹೆಚ್ಚು ಜನರು ಬಳಸಬಾರದು ಎಂಬ ನಿಯಮ ಇದೆ. ಅದನ್ನು ಮೈಕೆಲ್​ ಮತ್ತು ವಿನಯ್​ (Vinay Gowda) ಉಲ್ಲಂಘಿಸಿದ್ದಾರೆ. ಮಾಡಿದ ತಪ್ಪಿಗೆ ಅವರು ಕ್ಷಮೆ ಕೂಡ ಕೇಳಿದ್ದಾರೆ. ಅದರೂ ಬಿಗ್​ ಬಾಸ್​ ಕರುಣೆ ತೋರಿಸಿಲ್ಲ. ಇವರಿಬ್ಬರು ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಶಿಕ್ಷೆ ನೀಡಲಾಗಿದೆ. ಕಲರ್ಸ್​ ಕನ್ನಡದಲ್ಲಿ ಈ ಎಪಿಸೋಡ್​ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಕಾಣುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 23, 2023 05:18 PM

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More