AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ, ಲೈಂಗಿಕ ದೌರ್ಜನ್ಯ: ಖ್ಯಾತ ನಟನಿಗೆ 10.6 ವರ್ಷ ಜೈಲು ಶಿಕ್ಷೆ

ಹಾಲಿವುಡ್ ನಟ ರಸ್ಸೆಲ್ ಬ್ರ್ಯಾಂಡ್ (51) ಅವರಿಗೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಲಂಡನ್‌ನ ಸೌತ್‌ವಾರ್ಕ್ ಕ್ರೌನ್ ಕೋರ್ಟ್ ಸೋಮವಾರ, 10 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೆಶ ಪ್ರಕಟಿಸಿದೆ. ಒಬ್ಬ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ 9 ವರ್ಷ, ಮೂವರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ 18 ತಿಂಗಳು ಸೇರಿ ಒಟ್ಟು 10.6 ವರ್ಷಗಳ ಶಿಕ್ಷೆಯಾಗಿದೆ. ಶಿಕ್ಷೆಯ ಮೂರನೇ ಎರಡರಷ್ಟು, ಅಂದರೆ ಸುಮಾರು ಏಳು ವರ್ಷ ಜೈಲಿನಲ್ಲಿ ಕಳೆದ ನಂತರ ಬ್ರ್ಯಾಂಡ್ ಷರತ್ತುಬದ್ಧ ಬಿಡುಗಡೆಗೆ ಅರ್ಹರಾಗುತ್ತಾರೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯ: ಖ್ಯಾತ ನಟನಿಗೆ 10.6 ವರ್ಷ ಜೈಲು ಶಿಕ್ಷೆ
Rb
ಮಂಜುನಾಥ ಸಿ.
|

Updated on: Nov 09, 2026 | 9:05 PM

Share

ಖ್ಯಾತ ಹಾಲಿವುಡ್ ನಟ ರಸ್ಸೆಲ್ ಬ್ರ್ಯಾಂಡ್ (51) ಅವರಿಗೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಲಂಡನ್‌ನ ಸೌತ್‌ವಾರ್ಕ್ ಕ್ರೌನ್ ಕೋರ್ಟ್ ಸೋಮವಾರ, 10 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೆಶ ಪ್ರಕಟಿಸಿದೆ. ಒಬ್ಬ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ 9 ವರ್ಷ, ಮೂವರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ 18 ತಿಂಗಳು ಸೇರಿ ಒಟ್ಟು 10.6 ವರ್ಷಗಳ ಶಿಕ್ಷೆಯಾಗಿದೆ. ಶಿಕ್ಷೆಯ ಮೂರನೇ ಎರಡರಷ್ಟು, ಅಂದರೆ ಸುಮಾರು ಏಳು ವರ್ಷ ಜೈಲಿನಲ್ಲಿ ಕಳೆದ ನಂತರ ಬ್ರ್ಯಾಂಡ್ ಷರತ್ತುಬದ್ಧ ಬಿಡುಗಡೆಗೆ ಅರ್ಹರಾಗುತ್ತಾರೆ.

ತೀರ್ಪು ನೀಡುವಾಗ ನ್ಯಾಯಾಧೀಶರು, ಬ್ರ್ಯಾಂಡ್ ಪ್ರಸಿದ್ಧರಾಗುತ್ತಿದ್ದ ಸುಮಾರು 20 ವರ್ಷಗಳ ಹಿಂದಿನ ದಿನಗಳನ್ನು ಉಲ್ಲೇಖಿಸಿದರು. ಮಹಿಳೆಯರು ‘ಬೇಡ’ ಎನ್ನುವ ಹಕ್ಕಿನ ಬಗ್ಗೆ ಅವರು ಉದಾಸೀನ ಮತ್ತು ಅಹಂಕಾರದ ಅಲಕ್ಷ್ಯ ತೋರಿದ್ದರು ಎಂದು ಹೇಳಿದರು.

ಹಲವು ವಾರಗಳ ವಿಚಾರಣೆ ಬಳಿಕ ತೀರ್ಪು ಹೊರಬಿದ್ದಿದೆ. ಒಂದು ಅತ್ಯಾಚಾರ ಮತ್ತು ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಅವರು ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿತ್ತು. ಇನ್ನೆರಡು ಅತ್ಯಾಚಾರ ಆರೋಪಗಳು ಮತ್ತು ಒಂದು ಲೈಂಗಿಕ ದೌರ್ಜನ್ಯ ಯತ್ನದ ಆರೋಪದಿಂದ ಅವರನ್ನು ಖುಲಾಸೆಗೊಳಿಸಲಾಗಿತ್ತು. ಅತ್ಯಾಚಾರ ಪ್ರಕರಣವು 2009ರಲ್ಲಿ ಲಂಡನ್‌ನ ಹ್ಯಾಂಪ್‌ಸ್ಟೆಡ್‌ನಲ್ಲಿರುವ ಬ್ರ್ಯಾಂಡ್ ಅವರ ಮನೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು. ವಿಚಾರಣೆಯ ಅವಧಿಯಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಅವರನ್ನು ತೀರ್ಪಿಗೆ ಮುಂಚೆಯೇ ಬಂಧನಕ್ಕೆ ತೆಗೆದುಕೊಳ್ಳಲಾಗಿತ್ತು. ವಾರಾಂತ್ಯವನ್ನು ಅವರು ಜೈಲಿನಲ್ಲೇ ಕಳೆದಿದ್ದಾರೆ.

ಇದನ್ನೂ ಓದಿ:ಹಾಲಿವುಡ್​​ಗೆ ಹೊರಟರಾ ಬಾಲಿವುಡ್ ನಟ ಹೃತಿಕ್ ರೋಷನ್?

ವಿಚಾರಣೆಯ ವೇಳೆ ಪ್ರಾಸಿಕ್ಯೂಷನ್ ಪರ ವಕೀಲೆ ರೀಲ್ ಕಾರ್ಮಿ-ಜೋನ್ಸ್ ಅವರು ಬ್ರ್ಯಾಂಡ್ ಅವರನ್ನು ಕ್ರೂರ, ಕುಶಲತೆಯ “ಲೈಂಗಿಕ ಶಿಕಾರಿ” ಎಂದು ಜರಿದರು. ತಮ್ಮ ಖ್ಯಾತಿಯನ್ನು ಬಳಸಿಕೊಂಡು ದುರ್ಬಲ ಮಹಿಳೆಯರನ್ನು ನಟ ಶೋಷಿಸಿದ್ದಾನೆ ಎಂದು ಅವರು ವಾದಿಸಿದ್ದರು. ಆದರೆ ಬ್ರ್ಯಾಂಡ್ ಮೊದಲಿನಿಂದಲೂ ತಾವು ನಿರಪರಾಧಿ ಎಂದೇ ಹೇಳಿಕೊಂಡಿದ್ದರು. ತಮ್ಮದು ಸಹಮತದ ಲೈಂಗಿಕ ಕ್ರಿಯೆ ಎಂಬುದೇ ಅವರ ವಾದ ಆಗಿತ್ತು. ಆದರೆ ಅವರ ವಾದ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ.

ಶಿಕ್ಷೆ ಪ್ರಕಟಣೆಯ ದಿನ ಬ್ರ್ಯಾಂಡ್ ಅವರ ಪತ್ನಿ ಲೌರಾ ಮತ್ತು ತಂದೆ ರಾನ್ ಬ್ರ್ಯಾಂಡ್ ಕೋರ್ಟ್‌ನಲ್ಲಿ ಹಾಜರಿದ್ದರು. ಸಂತ್ರಸ್ತರ ಹೇಳಿಕೆಗಳನ್ನು ಓದುತ್ತಿದ್ದಾಗ ಬ್ರ್ಯಾಂಡ್ ಬಿಳಿ ಜಪಮಾಲೆಯನ್ನು ಹಿಡಿದು ಕುಳಿತಿದ್ದರು ಎಂದು ವರದಿಯಾಗಿದೆ. ಶಿಕ್ಷೆ ಪ್ರಕಟವಾದ ನಂತರ ನ್ಯಾಯಾಧೀಶರು ಅವರನ್ನು ಕೋರ್ಟ್‌ನ ಕೋಣೆಗಳಿಗೆ ಕರೆದೊಯ್ಯುವಂತೆ ಆದೇಶಿಸಿದರು. ಸಂತ್ರಸ್ತೆಯೊಬ್ಬರು, “ಅವನು ಇನ್ನು ಯಾವ ಮಹಿಳೆಗೂ ನೋವು ಕೊಡದಂತಿರಲಿ ಎಂದು ಆಶಿಸುತ್ತೇನೆ” ಎಂದು ಪ್ರತಿಕ್ರಿಯಿಸಿದರು.

ಇದೇ ವೇಳೆ, ಇನ್ನೂ ಎರಡು ಆರೋಪಿತ ಅತ್ಯಾಚಾರ ಪ್ರಕರಣಗಳ ಬಗ್ಗೆ ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವುಗಳಲ್ಲಿ ಒಂದು ಪ್ರಕರಣದಲ್ಲಿ ಆಗ 16 ವರ್ಷದ ಬಾಲಕಿ ಸಂತ್ರಸ್ತೆ ಎಂದು ವರದಿಯಾಗಿದೆ. ಈಗ ಬ್ರ್ಯಾಂಡ್​​ಗೆ ಶಿಕ್ಷೆ ಆಗಿರುವ ಪ್ರಕರಣ 2004 ರಿಂದ 2009 ರ ನಡುವೆ ನಡೆದಿರುವ ಪ್ರಕರಣ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ