ಮೊದಲ ದಿನ ಬಾಕ್ಸ್ ಆಫೀಸ್​​ನಲ್ಲಿ ಸೊರಗಿದ ‘ಅವತಾರ್ 3’; ‘ಧುರಂಧರ್’ ಮೇಲುಗೈ

`ಅವತಾರ್: ಫೈರ್ ಆ್ಯಂಡ್ ಆ್ಯಶ್` ಭಾರತದ ಬಾಕ್ಸ್ ಆಫೀಸ್‌ನಲ್ಲಿ ಸಂಕಷ್ಟದಲ್ಲಿದೆ. ಮೊದಲ ದಿನ ಈ ಸಿನಿಮಾ ಹೀನಾಯ ಕಲೆಕ್ಷನ್ ಮಾಡಿದೆ. ‘ಧುರಂಧರ್` ಸಿನಿಮಾದ ಭರ್ಜರಿ ಯಶಸ್ಸು `ಅವತಾರ್ 3` ಚಿತ್ರಕ್ಕೆ ದೊಡ್ಡ ಸ್ಪರ್ಧೆಯೊಡ್ಡಿದೆ. ಮಿಶ್ರ ಪ್ರತಿಕ್ರಿಯೆ ಮತ್ತು ಸ್ಕ್ರೀನ್ ಕೊರತೆಯು ಕಲೆಕ್ಷನ್ ಕುಸಿತಕ್ಕೆ ಕಾರಣವಾಗಿದೆ. ಮುಂಬರುವ ರಜಾದಿನಗಳು ಚಿತ್ರಕ್ಕೆ ನೆರವಾಗಬಹುದೆಂಬ ನಿರೀಕ್ಷೆ ಇದೆ.

ಮೊದಲ ದಿನ ಬಾಕ್ಸ್ ಆಫೀಸ್​​ನಲ್ಲಿ ಸೊರಗಿದ ‘ಅವತಾರ್ 3’; ‘ಧುರಂಧರ್’ ಮೇಲುಗೈ
ಅವತಾರ್-ಧುರಂಧರ್

Updated on: Dec 20, 2025 | 10:02 AM

ಜೇಮ್ಸ್ ಕ್ಯಾಮೆರೂನ್ ನಿರ್ದೇಶನದ ‘ಅವತಾರ್’ ಹಾಗೂ ‘ಅವತಾರ್ 2’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಡಿಸೆಂಬರ್ 19ರಂದು ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದ ಕಲೆಕ್ಷನ್ ಸೊರಗಿದೆ. ಈ ಸಿನಿಮಾದ ಭಾರತದ ಕಲೆಕ್ಷನ್ ಎಷ್ಟು? ಈ ಹಿಂದಿನ ಭಾಗ ಎಷ್ಟು ಗಳಿಕೆ ಮಾಡಿತ್ತು? ಧುರಂಧರ್ ಗಳಿಕೆ ವಿವರ ಇಲ್ಲಿದೆ.

‘ಅವತಾರ್ 2’ ಸಿನಿಮಾ ಭಾರತದಲ್ಲಿ ಮೊದಲ ದಿನ ಗಳಿಕೆ ಮಾಡಿದ್ದು 48 ಕೋಟಿ ರೂಪಾಯಿ. ಆದರೆ, ‘ಅವತಾರ್ 3’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕೇವಲ 20 ಕೋಟಿ ರೂಪಾಯಿ. ‘ಅವತಾರ್ 2’ ಸಿನಿಮಾ ಬಗ್ಗೆ ಎಲ್ಲರಿಗೂ ನಿರೀಕ್ಷೆ ಇತ್ತು. ಈ ಚಿತ್ರ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಆದರೆ, ‘ಅವತಾರ್ 3’ ಸಿನಿಮಾ ಹೈಪ್ ಸೃಷ್ಟಿಸಲು ವಿಫಲವಾಗಿದೆ.

20 ಕೋಟಿ ರೂಪಾಯಿ ದೊಡ್ಡ ಮೊತ್ತವೇ ಎಂದು ಕೆಲವರು ಹೇಳಬಹುದು. ಆದರೆ, ‘ಅವತಾರ್’ ಸರಣಿ ಎಂದು ಪರಿಗಣಿಸಿದಾಗ ಈ ಗಳಿಕೆ ತುಂಬಾನೇ ಸಣ್ಣದು. ಈ ವೀಕೆಂಡ್, ಕ್ರಿಸ್​ಮಸ್ ಹಾಗೂ ಹೊಸ ವರ್ಷದ ರಜೆಗಳು ಚಿತ್ರಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ರಿಲೀಸ್​ಗೂ ಮೊದಲೇ ವಿಮರ್ಶಕರಿಂದ ಕೆಟ್ಟ ವಿಮರ್ಶೆ ಪಡೆದ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’

‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಚಿತ್ರಕ್ಕೆ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಸ್ಪರ್ಧೆ ಏರ್ಪಟ್ಟಿದೆ. ಡಿಸೆಂಬರ್ 5ರಂದು ತೆರೆಗೆ ಬಂದ ‘ಧುರಂಧರ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದ ಬಹುತೇಕ ಶೋ ಹೌಸ್​ಫುಲ್ ಆಗುತ್ತಿದೆ. ಹೀಗಾಗಿ, ‘ಅವಾತಾರ್ 3’ ಚಿತ್ರಕ್ಕೆ ಸಿಗುತ್ತಿರೋ ಪರದೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಡಿಸೆಂಬರ್ 19ರಂದು ಈ ಚಿತ್ರ 22.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಅವತಾರ್ ಚಿತ್ರಕ್ಕಿಂತ ಮೇಲುಗೈ ಸಾಧಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.