ಹಾಲಿವುಡ್ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ‘ಅವತಾರ್’ (Avatar) ಸರಣಿ ಮೂಲಕ ಜನರನ್ನು ಸೆಳೆದುಕೊಂಡಿದ್ದಾರೆ. ಈ ಸಿನಿಮಾ ಡಿಸೆಂಬರ್ 19ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ಗೂ ಮೊದಲೇ ದೊಡ್ಡ ನೆಗೆಟಿವ್ ವಿಮರ್ಶೆ ಪಡೆದಿದೆ. ಜನಪ್ರಿಯ ‘ರಾಟನ್ ಟೊಮ್ಯಾಟೋಸ್’ ಸಂಸ್ಥೆ ಈ ಸಿನಿಮಾಗೆ ಕೇವಲ ಶೇ.70 ರೇಟಿಂಗ್ ನೀಡಿದೆ. ಇದು ಈ ಫ್ರಾಂಚೈಸ್ನಲ್ಲೇ ಅತ್ಯಂತ ಕಡಿಮೆ ರೇಟಿಂಗ್ ಪಡೆದ ಸಿನಿಮಾ ಆಗಿದೆ.
‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಅನ್ನೋದು ‘ಅವತಾರ್’ ಸರಣಿಯ ಮೂರನೇ ಭಾಗದ ಹೆಸರು. ಈ ಸರಣಿಗೆ ಜೇಮ್ಸ್ ಕ್ಯಾಮೆರೂನ್ ನಿರ್ದೇಶನ ಇದೆ. ಈ ಸರಣಿಯ ಟ್ರೇಲರ್ ಗಮನ ಸೆಳೆಯಲು ವಿಫಲವಾಗಿದೆ. ಈ ಸಿನಿಮಾಗೆ ಅಂದುಕೊಂಡ ರೀತಿಯ ಹೈಪ್ ಕೂಡ ಸಿಗುತ್ತಿಲ್ಲ. ಇನ್ನು, ಸಿನಿಮಾದ ಅವಧಿ 3.17 ಗಂಟೆ ಇದೆ. ಇದು ಕೂಡ ಸಿನಿಮಾಗೆ ಹಿನ್ನಡೆ ಆಗೋ ಸಾಧ್ಯತೆ ಇದೆ. ಹೀಗಿರುವಾಗಲೇ ರಾಟನ್ ಟೊಮ್ಯಾಟೋ ಕಡೆಯಿಂದ ಚಿತ್ರಕ್ಕೆ ಇಷ್ಟು ಕಡಿಮೆ ರೇಟಿಂಗ್ ಸಿಕ್ಕಿದೆ.
ರಾಟನ್ ಟೊಮ್ಯಾಟೋ ಪ್ರಕಾರ ಇಡೀ ಸಿನಿಮಾದಲ್ಲಿ ವಿಎಫ್ಎಕ್ಸ್ ಮಾತ್ರ ಹೈಲೈಟ್ ಆಗಿದೆಯಂತೆ. ಕಥೆಯ ಬಗ್ಗೆ ಅಸಮಾಧಾನ ಹೊರಹಾಕಲಾಗಿದೆ. ಅವತಾರ್ ಮೊದಲ ಭಾಗಕ್ಕೆ ಶೇ.81 ಹಾಗೂ ಎರಡನೇ ಭಾಗಕ್ಕೆ ಶೇ.76 ರೇಟಿಂಗ್ ನೀಡಲಾಗಿತ್ತು. ಈಗ ಮೂರನೇ ಪಾರ್ಟ್ ಕೇವಲ ಶೇ.70 ರೇಟಿಂಗ್ ಪಡೆದಿದೆ.
ಇದನ್ನೂ ಓದಿ: ‘ಅವತಾರ್ 3’ ಸಿನಿಮಾನಲ್ಲಿ ಮಹೇಶ್ ಬಾಬು? ಇದೆಂಥ ಅಚ್ಚರಿ
ಇನ್ನು ಕೆಲವರು ವಿಮರ್ಶಕರು ಸಿನಿಮಾನ ಬೋರಿಂಗ್ ಎಂದು ಕರೆದಿದ್ದಾರೆ. ‘ಸಿನಿಮಾ ಎಲ್ಲರಿಗೂ ಇಷ್ಟ ಆಗೋದು ಅನುಮಾನವಿದೆ’ ಎಂಬುದು ಕೆಲವರ ಅಭಿಪ್ರಾಯ. ಜನರು ಈ ಸಿನಿಮಾನ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ವಿಮರ್ಶಕರಿಗೆ ಇಷ್ಟ ಆಗದ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗಿ ಹಿಟ್ ಆದ ಸಾಕಷ್ಟು ಉದಾಹರಣೆ ಇದೆ. ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಹಿಟ್ ಆಗಲು ಇದೇ ರೀತಿಯ ಒಂದು ಜಾದೂ ನಡೆಯಬೇಕಾದ ಅವಶ್ಯಕತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.