ಹಾಲಿವುಡ್ ನಟ, ವೃತ್ತಿಪರ WWE ಆಟಗಾರ ಜಾನ್ ಸೀನಾ (John Cena) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಇತ್ತೀಚೆಗೆ ಅವರು ಆಸ್ಕರ್ ಪ್ರಶಸ್ತಿ (Oscars 2024) ಪ್ರದಾನ ಸಮಾರಂಭದಲ್ಲಿ ಬೆತ್ತಲಾಗಿ ಕಾಣಿಸಿಕೊಂಡರು! ಅವರ ಅವತಾರ ಕಂಡು ಎಲ್ಲರಿಗೂ ಅಚ್ಚರಿ ಆಯಿತು. ಈ ಘಟನೆ ನಡೆದ ಬಳಿಕ ಜಾನ್ ಸೀನಾ ಅವರ ಫೋಟೋಗಳು ವೈರಲ್ ಆದವು. ಸಾರ್ವಜನಿಕವಾಗಿ ಹೀಗೆ ಬೆತ್ತಲಾಗಿ ಕಾಣಿಸಿಕೊಂಡಿದ್ದರಿಂದ ಜಾನ್ ಸೀನಾ ಅವರಿಗೆ ಭಾರಿ ನಷ್ಟ ಆಗಿದೆ ಎಂದು ವರದಿ ಆಗಿದೆ. ಆದರೆ ಆ ವರದಿಯಲ್ಲಿ ಹುರುಳು ಇಲ್ಲ ಎಂಬುದು ಈಗ ಗೊತ್ತಾಗಿದೆ.
WWE ಪಟುವಾಗಿರುವ ಜಾನ್ ಸೀನಾ ಅವರಿಗೆ ಪ್ರಯೋಜಕರು ಇದ್ದಾರೆ. ಅವರ ಮೇಲೆ ಬಹುಕೋಟಿ ರೂಪಾಯಿ ಸುರಿಯಲಾಗುತ್ತದೆ. ಅದಕ್ಕೆ ತಕ್ಕಂತೆ ಜಾನ್ ಸೀನಾ ಅವರು ಪ್ರತಿಷ್ಠೆ ಕಾಪಾಡಿಕೊಳ್ಳಬೇಕು. ಆದರೆ ಆಸ್ಕರ್ ರೀತಿಯ ಪ್ರತಿಷ್ಠಿತ ವೇದಿಕೆಗೆ ಅವರು ಬೆತ್ತಲಾಗಿ ಬಂದಿದ್ದಕ್ಕೆ ಪ್ರಯೋಜಕರಿಗೆ ಬೇಸರ ಆಗಿದೆ. ಹಾಗಾಗಿ ಅವರು ಜಾನ್ ಸೀನಾಗೆ ನೀಡುವ ಹಣವನ್ನು ಹಿಂಪಡೆಯಲು ತೀರ್ಮಾನಿಸಿದ್ದಾರೆ ಎಂದು ವೆಬ್ಸೈಟ್ವೊಂದರಲ್ಲಿ ವರದಿ ಪ್ರಕಟ ಆಗಿದೆ.
ಇದನ್ನೂ ಓದಿ: ಸಿದ್ದಾರ್ಥ್ ಶುಕ್ಲಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ WWE ಸೂಪರ್ ಸ್ಟಾರ್ ಜಾನ್ ಸೀನಾ
ಆಸ್ಕರ್ ಪ್ರದಾನ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ವೇದಿಕೆಗೆ ಬಂದು ಬೇರೆ ಬೇರೆ ವಿಭಾಗದಲ್ಲಿ ಅವಾರ್ಡ್ ಗೆದ್ದವರ ಹೆಸರು ಘೋಷಿಸಿದರು. ‘ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್’ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರ ಹೆಸರು ಘೋಷಿಸಿಲು ಬಂದ ಜಾನ್ ಸೀನಾ ಅವರು ಯಾವುದೇ ಬಟ್ಟೆ ಧರಿಸಿರಲಿಲ್ಲ. ಪ್ರಶಸ್ತಿ ವಿಜೇತರ ಹೆಸರು ಇರುವ ಲಕೋಟೆಯನ್ನೇ ತಮ್ಮ ಗುಪ್ತಾಂಗಕ್ಕೆ ಅಡ್ಡವಾಗಿ ಹಿಡಿದುಕೊಂಡು ಅವರು ವೇದಿಕೆಗೆ ಬಂದರು. ಕೊನೆಯಲ್ಲಿ ಅವರಿಗೆ ಶಾಲು ನೀಡಲಾಯಿತು. ಅದನ್ನು ಮೈಗೆ ಸುತ್ತಿಕೊಂಡರು.
ಇದನ್ನೂ ಓದಿ: ನಟ ಅರ್ಷದ್ ವಾರ್ಸಿ ಫೋಟೋ ಪೋಸ್ಟ್ ಮಾಡಿದ WWE ಸೂಪರ್ ಸ್ಟಾರ್ ಜಾನ್ ಸೀನಾ; ಕಾರಣವೇನು?
ಈ ಘಟನೆ ನಡೆದ ನಂತರ ಜಾನ್ ಸೀನಾ ಅವರ ಕುರಿತಾಗಿ ಹತ್ತು ಹಲವು ಗಾಸಿಪ್ಗಳು ಹರಿದಾಡಿವೆ. ಪ್ರಯೋಜಕರು ಮುನಿಸಿಕೊಂಡಿದ್ದರಿಂದ ಜಾನ್ ಸೀನಾ ಅವರು ಸುಮಾರು 82 ಕೋಟಿ ರೂಪಾಯಿ ಹಣವನ್ನು ಕಳೆದುಕೊಳ್ಳಬೇಕಾಗಿದೆ ಎಂದು ಕೂಡ ವರದಿ ಆಗಿದೆ. ಅದನ್ನು ಕೆಲವರು ನಿಜ ಎಂದೇ ನಂಬಿದ್ದಾರೆ. ಅಸಲಿ ವಿಚಾರ ಏನೆಂದರೆ, ಆ ಸುದ್ದಿ ಪ್ರಕಟಿಸಿದ ವೆಬ್ಸೈಟ್ ಇರುವುದೇ ಕಟ್ಟುಕಥೆಗಳನ್ನು ಪಬ್ಲಿಶ್ ಮಾಡಲು. ಆದರೆ ಆ ವರದಿಯ ಕೊನೆಯಲ್ಲಿ ನಿಜ ಏನು ಎಂಬುದನ್ನು ತಿಳಿಸಲಾಗಿದೆ. ‘ಇದು ಕಾಲ್ಪನಿಕ ಸುದ್ದಿ’ ಎಂದು ಬರೆಯಲಾಗಿದೆ. ಆ ಮೂಲಕ 82 ಕೋಟಿ ರೂಪಾತಿ ನಷ್ಟದ ಸುದ್ದಿ ಕೇವಲ ಕಟ್ಟುಕಥೆ ಎಂಬುದು ಗೊತ್ತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.