WWE ಮ್ಯಾಚ್ಗಳನ್ನು ನೋಡಿ ಎಂಜಾಯ್ ಮಾಡಿದ ಎಲ್ಲರಿಗೂ ದಿ ರಾಕ್ ಅಲಿಯಾಸ್ ಡ್ವೇನ್ ಜಾನ್ಸನ್ ಬಗ್ಗೆ ಗೊತ್ತೇ ಇರುತ್ತದೆ. ಹಾಲಿವುಡ್ನ (Hollywood) ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಕೋಟ್ಯಂತರ ಮಂದಿಗೆ ದಿ ರಾಕ್ (The Rock) ಎಂದರೆ ಅಚ್ಚುಮೆಚ್ಚು. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಆದರೆ ಈಗ ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ‘ದಿ ರಾಕ್ ಅವರು ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ’ ಎಂದು ಕೆಲವರು ಆರೋಪಿಸಿದ್ದಾರೆ. ಅಮೆರಿಕದ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟ ಆಗಿದೆ. ಡ್ವೇನ್ ಜಾನ್ಸನ್ (Dwayne Johnson) ಮೇಲಿನ ಈ ಆರೋಪಗಳನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ.
ಸಿನಿಮಾದ ಶೂಟಿಂಗ್ ಸೆಟ್ಗೆ ಡ್ವೇನ್ ಜಾನ್ಸನ್ ಅವರು ತುಂಬ ತಡವಾಗಿ ಬರುತ್ತಾರೆ ಎನ್ನಲಾಗಿದೆ. ಇದರಿಂದಾಗಿ ನಿರ್ಮಾಪಕರಿಗೆ ನೂರಾರು ಕೋಟಿ ರೂಪಾಯಿ ನಷ್ಟ ಆಗಿದೆ. ಅಷ್ಟೇ ಅಲ್ಲದೇ ಸಹ-ನಟರ ಜೊತೆಗೆ ಡ್ವೇನ್ ಜಾನ್ಸನ್ ಗಲಾಟೆ ಕೂಡ ಮಾಡಿಕೊಂಡಿದ್ದಾರೆ. ಅದಕ್ಕಿಂತಲೂ ಕೆಟ್ಟ ವರ್ತನೆ ಏನೆಂದರೆ, ಅವರು ನೀರಿನ ಬಾಟಲಿಯಲ್ಲಿ ಮೂತ್ರ ಮಾಡಿ, ಅದನ್ನು ಎಸೆಯಲು ಬೇರೆಯವರಿಗೆ ಆದೇಶಿಸುತ್ತಾರೆ ಎಂದು ಹೇಳಲಾಗಿದೆ.
‘ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಕ್ಯಾರವ್ಯಾನ್ನಿಂದ ದೂರ ಇರುವಾಗ ಡ್ವೇನ್ ಜಾನ್ಸನ್ ಅವರು ಸಾರ್ವಜನಿಕ ಶೌಚಾಲಯ ಉಪಯೋಗಿಸಲು ಒಪ್ಪುವುದಿಲ್ಲ. ಅವರು ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಬಳಿಕ ತಮ್ಮ ಆಪ್ತ ಸಹಾಯಕರನ್ನು ಕರೆದು, ಅವರ ಕೈಗೆ ಮೂತ್ರದ ಬಾಟಲಿಯನ್ನು ಕೊಟ್ಟು ಎಸೆಯಲು ಹೇಳುತ್ತಾರೆ’ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ಮೊದಲು ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ತಮಗೆ ಇದೆ ಎಂದು ಸ್ವತಃ ಡ್ವೇನ್ ಜಾನ್ಸನ್ ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ಅತ್ಯಾಚಾರ ಆರೋಪಿ ಹಾರ್ವಿ ವೈನ್ಸ್ಟೀನ್ಗೆ ವಿಧಿಸಿದ್ದ ಶಿಕ್ಷೆ ರದ್ದು; ಮಿಟೂ ಅಭಿಯಾನಕ್ಕೆ ಹಿನ್ನಡೆ
ಡ್ವೇನ್ ಜಾನ್ಸನ್ ಅವರು ‘ರೆಡ್ ನೋಟಿಸ್’ ಸಿನಿಮಾದ ಶೂಟಿಂಗ್ಗೆ ಯಾವಾಗಲೂ ತಡವಾಗಿ ಬರುತ್ತಿದ್ದರು. ಇದರಿಂದಾಗಿ ಸಹ ಕಲಾವಿದ ರಿಯಾನ್ ಗಾಸ್ಲಿಂಗ್ ಅವರಿಗೆ ತುಂಬ ಕಿರಿಕಿರಿ ಆಗಿತ್ತು. ಇದರಿಂದಾಗಿ ಅವರಿಬ್ಬರು ಜಗಳ ಮಾಡಿಕೊಂಡು ಮಾತು ಬಿಟ್ಟಿದ್ದರು. ಅಲ್ಲದೇ, ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಸಿನಿಮಾದ ಚಿತ್ರೀಕರಣದ ವೇಳೆ ನಟ ವಿನ್ ಡೀಸೆಲ್ ಜೊತೆ ಕೂಡ ಡ್ವೇನ್ ಜಾನ್ಸನ್ ಗಲಾಟೆ ಮಾಡಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.