ಬೆತ್ತಲಾಗಿ ಬಂದ ಜಾನ್​ ಸೀನಾಗೆ 82 ಕೋಟಿ ರೂಪಾಯಿ ನಷ್ಟ? ಇಲ್ಲಿದೆ ಅಸಲಿ ಕಥೆ

ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಅತ್ಯುತ್ತಮ ವಸ್ತ್ರವಿನ್ಯಾಸ’ ವಿಭಾಗದಲ್ಲಿ ಅವಾರ್ಡ್​ ಗೆದ್ದವರ ಹೆಸರನ್ನು ಘೋಷಿಸಲು ವೇದಿಕೆ ಬಂದ ಜಾನ್​ ಸೀನ್​ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಸಂಪೂರ್ಣ ಬೆತ್ತಲಾಗಿ, ಗುಪ್ತಾಂಗಕ್ಕೆ ಕೇವಲ ಪೇಪರ್​ ಮುಚ್ಚಿಕೊಂಡಿದ್ದ ಅವರ ವಿಡಿಯೋ, ಫೋಟೋ ವೈರಲ್​ ಆದವು. ಈ ಘಟನೆಯ ಬಳಿಕ ಜಾನ್​ ಸೀನಾ ಬಗ್ಗೆ ಅನೇಕ ಅಂತೆ-ಕಂತೆಗಳು ಹುಟ್ಟಿಕೊಂಡಿವೆ.

ಬೆತ್ತಲಾಗಿ ಬಂದ ಜಾನ್​ ಸೀನಾಗೆ 82 ಕೋಟಿ ರೂಪಾಯಿ ನಷ್ಟ? ಇಲ್ಲಿದೆ ಅಸಲಿ ಕಥೆ
ಜಾನ್​ ಸೀನಾ
Follow us
ಮದನ್​ ಕುಮಾರ್​
|

Updated on: Mar 14, 2024 | 6:06 PM

ಹಾಲಿವುಡ್​ ನಟ, ವೃತ್ತಿಪರ WWE ಆಟಗಾರ ಜಾನ್​ ಸೀನಾ (John Cena) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಇತ್ತೀಚೆಗೆ ಅವರು ಆಸ್ಕರ್​ ಪ್ರಶಸ್ತಿ (Oscars 2024) ಪ್ರದಾನ ಸಮಾರಂಭದಲ್ಲಿ ಬೆತ್ತಲಾಗಿ ಕಾಣಿಸಿಕೊಂಡರು! ಅವರ ಅವತಾರ ಕಂಡು ಎಲ್ಲರಿಗೂ ಅಚ್ಚರಿ ಆಯಿತು. ಈ ಘಟನೆ ನಡೆದ ಬಳಿಕ ಜಾನ್​ ಸೀನಾ ಅವರ ಫೋಟೋಗಳು ವೈರಲ್​ ಆದವು. ಸಾರ್ವಜನಿಕವಾಗಿ ಹೀಗೆ ಬೆತ್ತಲಾಗಿ ಕಾಣಿಸಿಕೊಂಡಿದ್ದರಿಂದ ಜಾನ್​ ಸೀನಾ ಅವರಿಗೆ ಭಾರಿ ನಷ್ಟ ಆಗಿದೆ ಎಂದು ವರದಿ ಆಗಿದೆ. ಆದರೆ ಆ ವರದಿಯಲ್ಲಿ ಹುರುಳು ಇಲ್ಲ ಎಂಬುದು ಈಗ ಗೊತ್ತಾಗಿದೆ.

WWE ಪಟುವಾಗಿರುವ ಜಾನ್​ ಸೀನಾ ಅವರಿಗೆ ಪ್ರಯೋಜಕರು ಇದ್ದಾರೆ. ಅವರ ಮೇಲೆ ಬಹುಕೋಟಿ ರೂಪಾಯಿ ಸುರಿಯಲಾಗುತ್ತದೆ. ಅದಕ್ಕೆ ತಕ್ಕಂತೆ ಜಾನ್​ ಸೀನಾ ಅವರು ಪ್ರತಿಷ್ಠೆ ಕಾಪಾಡಿಕೊಳ್ಳಬೇಕು. ಆದರೆ ಆಸ್ಕರ್​ ರೀತಿಯ ಪ್ರತಿಷ್ಠಿತ ವೇದಿಕೆಗೆ ಅವರು ಬೆತ್ತಲಾಗಿ ಬಂದಿದ್ದಕ್ಕೆ ಪ್ರಯೋಜಕರಿಗೆ ಬೇಸರ ಆಗಿದೆ. ಹಾಗಾಗಿ ಅವರು ಜಾನ್​ ಸೀನಾಗೆ ನೀಡುವ ಹಣವನ್ನು ಹಿಂಪಡೆಯಲು ತೀರ್ಮಾನಿಸಿದ್ದಾರೆ ಎಂದು ವೆಬ್​ಸೈಟ್​ವೊಂದರಲ್ಲಿ ವರದಿ ಪ್ರಕಟ ಆಗಿದೆ.

ಇದನ್ನೂ ಓದಿ: ಸಿದ್ದಾರ್ಥ್​ ಶುಕ್ಲಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ WWE ಸೂಪರ್​ ಸ್ಟಾರ್​​ ಜಾನ್​ ಸೀನಾ

ಆಸ್ಕರ್​ ಪ್ರದಾನ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ವೇದಿಕೆಗೆ ಬಂದು ಬೇರೆ ಬೇರೆ ವಿಭಾಗದಲ್ಲಿ ಅವಾರ್ಡ್​ ಗೆದ್ದವರ ಹೆಸರು ಘೋಷಿಸಿದರು. ‘ಅತ್ಯುತ್ತಮ ಕಾಸ್ಟ್ಯೂಮ್​ ಡಿಸೈನ್​’ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರ ಹೆಸರು ಘೋಷಿಸಿಲು ಬಂದ ಜಾನ್​ ಸೀನಾ ಅವರು ಯಾವುದೇ ಬಟ್ಟೆ ಧರಿಸಿರಲಿಲ್ಲ. ಪ್ರಶಸ್ತಿ ವಿಜೇತರ ಹೆಸರು ಇರುವ ಲಕೋಟೆಯನ್ನೇ ತಮ್ಮ ಗುಪ್ತಾಂಗಕ್ಕೆ ಅಡ್ಡವಾಗಿ ಹಿಡಿದುಕೊಂಡು ಅವರು ವೇದಿಕೆಗೆ ಬಂದರು. ಕೊನೆಯಲ್ಲಿ ಅವರಿಗೆ ಶಾಲು ನೀಡಲಾಯಿತು. ಅದನ್ನು ಮೈಗೆ ಸುತ್ತಿಕೊಂಡರು.

ಇದನ್ನೂ ಓದಿ: ನಟ ಅರ್ಷದ್ ವಾರ್ಸಿ ಫೋಟೋ ಪೋಸ್ಟ್​ ಮಾಡಿದ WWE ಸೂಪರ್​ ಸ್ಟಾರ್​​ ಜಾನ್​ ಸೀನಾ; ಕಾರಣವೇನು?

ಈ ಘಟನೆ ನಡೆದ ನಂತರ ಜಾನ್​ ಸೀನಾ ಅವರ ಕುರಿತಾಗಿ ಹತ್ತು ಹಲವು ಗಾಸಿಪ್​ಗಳು ಹರಿದಾಡಿವೆ. ಪ್ರಯೋಜಕರು ಮುನಿಸಿಕೊಂಡಿದ್ದರಿಂದ ಜಾನ್​ ಸೀನಾ ಅವರು ಸುಮಾರು 82 ಕೋಟಿ ರೂಪಾಯಿ ಹಣವನ್ನು ಕಳೆದುಕೊಳ್ಳಬೇಕಾಗಿದೆ ಎಂದು ಕೂಡ ವರದಿ ಆಗಿದೆ. ಅದನ್ನು ಕೆಲವರು ನಿಜ ಎಂದೇ ನಂಬಿದ್ದಾರೆ. ಅಸಲಿ ವಿಚಾರ ಏನೆಂದರೆ, ಆ ಸುದ್ದಿ ಪ್ರಕಟಿಸಿದ ವೆಬ್​ಸೈಟ್​ ಇರುವುದೇ ಕಟ್ಟುಕಥೆಗಳನ್ನು ಪಬ್ಲಿಶ್​ ಮಾಡಲು. ಆದರೆ ಆ ವರದಿಯ ಕೊನೆಯಲ್ಲಿ ನಿಜ ಏನು ಎಂಬುದನ್ನು ತಿಳಿಸಲಾಗಿದೆ. ‘ಇದು ಕಾಲ್ಪನಿಕ ಸುದ್ದಿ’ ಎಂದು ಬರೆಯಲಾಗಿದೆ. ಆ ಮೂಲಕ 82 ಕೋಟಿ ರೂಪಾತಿ ನಷ್ಟದ ಸುದ್ದಿ ಕೇವಲ ಕಟ್ಟುಕಥೆ ಎಂಬುದು ಗೊತ್ತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.