ಬೊಟ್ಟಿನ ವಿಷಯಕ್ಕೆ ಬಂದರೆ ಸುಮ್ಮನಿರಲ್ಲ: ರಜತ್ಗೆ ಚೈತ್ರಾ ಆವಾಜ್
Bigg Boss Kannada: ಭವ್ಯಾ ಮೋಸ ಮಾಡಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ರಜತ್ ಅದಕ್ಕೆ ಬೆಂಬಲ ನೀಡಿದ್ದಾರೆ. ಇದೇ ಕಾರಣ ಇಟ್ಟುಕೊಂಡು ಚೈತ್ರಾ ಹಾಗೂ ರಜತ್ ಪರಸ್ಪರ ಜಗಳ ಆಡಿದ್ದು, ರಜತ್, ಚೈತ್ರಾ ಇಡುವ ಬೊಟ್ಟಿನ ಬಗ್ಗೆ ಮಾತನಾಡಿದ್ದಾರೆ. ಇದು ಚೈತ್ರಾಗೆ ವಿಪರೀತ ಸಿಟ್ಟು ತರಿಸಿದೆ.

ಬಿಗ್ಬಾಸ್ ಶನಿವಾರದ ಎಪಿಸೋಡ್ನಲ್ಲಿ ಚೈತ್ರಾ ಹಾಗೂ ರಜತ್ ಸಖತ್ ಆಗಿ ಕಿತ್ತಾಡಿಕೊಂಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ವೇಳೆಯಲ್ಲಿ ಭವ್ಯಾ ಮೋಸ ಮಾಡಿ ಕ್ಯಾಪ್ಟನ್ ಆಗಿದ್ದನ್ನು ಸುದೀಪ್ ನಿನ್ನೆಯ ಎಪಿಸೋಡ್ನಲ್ಲಿ ಎತ್ತಿ ತೋರಿಸಿದರು. ಭವ್ಯಾ ಮೋಸ ಮಾಡಿದ್ದನ್ನು ನೋಡಿದರೂ ಸಹ ರಜತ್ ಏನೂ ಹೇಳದೆ ಸುಮ್ಮನಿದ್ದು ಆ ಮೋಸಕ್ಕೆ ಸಹಾಯ ಮಾಡಿದರು. ಇದನ್ನು ಸಹ ಸುದೀಪ್ ಎತ್ತಿ ತೋರಿಸಿದರು. ಇದರಿಂದಾಗಿ ಚೈತ್ರಾ, ರಜತ್ ಮೇಲೆ ಜಗಳ ಮಾಡಿದರು. ಸಣ್ಣ-ಪುಟ್ಟ ವಿಷಯಕ್ಕೂ ಜಗಳ ಮಾಡುವ ರಜತ್, ಈ ವಿಷಯಕ್ಕೆ ಏಕೆ ಸುಮ್ಮನಿದ್ದ ಎಂದು ಚೈತ್ರಾ ಕೂಗಾಡಿದರು.
ರಜತ್ ಹಾಗೂ ಚೈತ್ರಾ ನಡುವೆ ಏಕವಚನದಲ್ಲಿ ಜಗಳ ನಡೆಯಿತು. ಬ್ರೇಕ್ ಸಮಯದಲ್ಲಿ ಜಗಳ ನಡೆದಿದ್ದು, ಚೈತ್ರಾ ಅವರು ರಜತ್ ವಿರುದ್ಧ ಕೂಗಾಡಿದರು. ಪ್ರತಿಯಾಗಿ ರಜತ್ ಸಹ ಏಕವನದಲ್ಲಿ ಬೈಗುಳ ಆರಂಭಿಸಿದರು. ಛೀ, ಥೂ ಎಂದು ಬೈಯ್ಯಲು ಪ್ರಾರಂಭ ಮಾಡಿದರು. ಚೈತ್ರಾ ಸಹ ರಜತ್ ಮಾತುಗಳಿಗೆ ಎದುರು ಮಾತುಗಳನ್ನಾಡಿದರು. ಇಬ್ಬರೂ ಸಹ ಪರಸ್ಪರರ ಬಗ್ಗೆ ವೈಯಕ್ತಿಕ ನಿಂದನೆ ಮಾಡಲು ಆರಂಭಿಸಿದರು. ರಜತ್ ತುಸು ಹೆಚ್ಚೇ ವೈಯಕ್ತಿಕ ನಿಂದನೆಗೆ ಇಳಿದರು.
ಇದನ್ನೂ ಓದಿ:ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಚೈತ್ರಾಗೆ ಥೂ ಎಂದು ರಜತ್ ಉಗಿದರೆ, ನಿನ್ನ ರೌಡಿಸಂ ಅನ್ನು ಹೊರಗೆ ಇಟ್ಟುಕೊ, ನನ್ನ ಬಳಿ ಅಲ್ಲ ಎಂದು ಚೈತ್ರಾ ಆವಾಜ್ ಹೊಡೆದರು. ಕೊನೆಗೆ ರಜತ್ ಹೊರಗೆ ಹೋಗುವಾಗ, ಚೈತ್ರಾ, ಓಹ್ ‘ಜೋನ್ ಗೆ ಹೋಗುತ್ತಿದ್ದೀಯಾ ಹೋಗು, ನಿನಗೆ ಅದರ ಅವಶ್ಯಕತೆ ಇದೆ, ಕೂಲ್ ಮಾಡಿಕೊ’ ಎಂದು ಕಾಲೆಳೆದರು. ಅದಕ್ಕೆ ರಜತ್, ‘ನೀನು ಹೋಗಿ ಬೊಟ್ಟು ಇಟ್ಟುಕೊಂಡು ಬಾ ಹೋಗು, ಪೂಜೆ ಮಾಡಿಕೊ ಹೋಗು’ ಎಂದರು. ಇದು ಚೈತ್ರಾರನ್ನು ವಿಪರೀತ ಕೆರಳಿಸಿತು. ‘ನನ್ನ ಬೊಟ್ಟಿನ ವಿಷಯಕ್ಕೆ ಬರಬೇಡ, ಬೊಟ್ಟು ಇಡುವುದು ನನ್ನ ಹಕ್ಕು, ಅದನ್ನು ಕೇಳಲು ನೀನ್ಯಾವನು?’ ಎಂದು ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದರು. ಕೊನೆಗೆ ಮೋಕ್ಷಿತಾ ಮಧ್ಯ ಪ್ರವೇಶ ಮಾಡಿ ಜಗಳ ಬಿಡಿಸಿದರು.
ಸುದೀಪ್ ಎದುರು ಸಹ ಇಬ್ಬರ ಜಗಳ ಮುಂದುವರೆಯಿತು, ‘ರಜತ್, ಇನ್ನೊಬ್ಬರನ್ನು ನಿಂದನೆ ಮಾಡುವ, ತುಚ್ಛವಾಗಿ ಮಾತನಾಡುವ, ರೌಡಿಸಂ ಮಾಡುವ ರಜತ್ ಈ ಮನೆಯಲ್ಲಿ ಇರಬಾರದು. ಆತ ತನ್ನ ಜೀವನ ಪೂರ್ತಿ ಇದನ್ನೇ ಮಾಡಿಕೊಂಡು ಬಂದಿದ್ದಾನೆ, ಆತನಿಗೆ ಬಿಗ್ಬಾಸ್ ಎಂದರೆ ಫಿಸಿಕಲ್ ಟಾಸ್ಕ್, ಹೊಡೆದಾಡುವುದು, ಜಗಳ ಮಾಡುವುದು ಎಂದುಕೊಂಡಿದ್ದಾನೆ ಆತ ಈ ಮನೆಗೆ ಸೂಕ್ತ ವ್ಯಕ್ತಿಯಲ್ಲ’ ಎಂದರು. ರಜತ್ ಸಹ, ಚೈತ್ರಾ ಸುಖಾ ಸುಮ್ಮನೆ ಇನ್ನೊಬ್ಬರ ವಿಷಯಕ್ಕೆ ತಲೆ ಹಾಕುತ್ತಾರೆ. ಅವರು ಈ ಮನೆಯಲ್ಲಿ ಇರಬಾರದು’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




