ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಸಿನಿಮಾ ಮಾಡಿದ ದಾಖಲೆ ತುಂಬಾನೇ ದೊಡ್ಡದು. ಈ ಚಿತ್ರ ಒಳ್ಳೆಯ ರೀತಿಯಲ್ಲಿ ಬಿಸ್ನೆಸ್ ಮಾಡಿತ್ತು. ಈ ಚಿತ್ರದ ‘ತಗ್ಗೆದೆಲೆ’ (ಕನ್ನಡದಲ್ಲಿ ತಗ್ಗೋದೆ ಇಲ್ಲ, ಹಿಂದಿಯಲ್ಲಿ ಜುಕೇಗಾ ನಹಿ ಸಾಲಾ) ಡೈಲಾಗ್ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದರ ಹವಾ ಇನ್ನೂ ಕಡಿಮೆ ಆಗಿಲ್ಲ. ಹಾಲಿವುಡ್ ಸಿಂಗರ್ ಎಡ್ ಶೀರನ್ ಕೂಡ ಈ ಡೈಲಾಗ್ನ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಎಡ್ ಶೀರನ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಭಾಗಿ ಆಗಿದ್ದರು. ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಈ ಶೋ ಪ್ರಸಾರ ಕಾಣುತ್ತಿದೆ. ಇದರಲ್ಲಿ ಕಪಿಲ್ ಶರ್ಮಾ ಅವರು ಭಾರತದ ಬಗ್ಗೆ, ಭಾರತೀಯ ಸಂಸ್ಕೃತಿ ಬಗ್ಗೆ, ಭಾರತದ ಸಿನಿಮಾಗಳ ಬಗ್ಗೆ ಎಡ್ ಶೀರನ್ ಬಳಿ ಮಾತನಾಡಿದ್ದಾರೆ. ಆಗ ಅವರು ‘ತಗ್ಗದೆಲೆ’ (ತಗ್ಗೋದೆ ಇಲ್ಲ) ಡೈಲಾಗ್ ಹೇಳಿಕೊಟ್ಟಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ರಿಲೀಸ್ ದಿನಾಂಕ ಬದಲಾಗತ್ತಾ? ಅನುಮಾನಕ್ಕೆ ಕಾರಣವಾದ ಎರಡು ಅಂಶಗಳು
‘ಪುಷ್ಪ’ ಸಿನಿಮಾದಲ್ಲಿ ಪುಷ್ಪರಾಜ್ (ಅಲ್ಲು ಅರ್ಜುನ್) ಆಗಾಗ ಗಡ್ಡದ ಬಳಿ ಕೈ ಇಟ್ಟುಕೊಂಡು ‘ತಗ್ಗೋದೆ ಇಲ್ಲ’ ಎನ್ನುತ್ತಿರುತ್ತಾನೆ. ಈ ಡೈಲಾಗ್ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಡೈಲಾಗ್ನ ಕಪಿಲ್ ಶರ್ಮಾ ಅವರು ಎಡ್ ಶೀರನ್ಗೆ ಹೇಳಿಕೊಟ್ಟಿದ್ದಾರೆ. ಇದನ್ನು ಪರ್ಫೆಕ್ಟ್ ಆಗಿ ಕಾಪಿ ಮಾಡಿದ್ದಾರೆ ಎಡ್ ಶೀರನ್. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
The Great Indian Kapil Sharma Show on Netflix feat Ed Sheeran:
Kapil to Ed – I have some popular dialogues from Bollywood movies, I will teach you
Then went on to teach Ed, the iconic Allu Arjun’s dialogue from Telugu film Pushpa: The Rise
India Cinema doesn’t mean Bollywood pic.twitter.com/YPLx6B0FcG
— KhabriBhai (@RealKhabriBhai) May 19, 2024
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಮೊದಲ ಪಾರ್ಟ್ ಹಿಟ್ ಆದ ಕಾರಣ ಎರಡನೇ ಪಾರ್ಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಸುಕುಮಾರ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ‘ಮೈತ್ರಿ ಮೂವೀ ಮೇಕರ್ಸ್’ ಇದನ್ನು ನಿರ್ಮಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.