ವಿಮಾನದಲ್ಲಿ ಪಿಟ್ ಜೊತೆ ನಡೆದ ಜಗಳದಲ್ಲಿ ಆ್ಯಂಜಲೀನಾ ಜೋಲೀ ಅನುಭವಿಸಿದ ಗಾಯಗಳ ಹೊಸ ಫೋಟೋಗಳು ಬಹಿರಂಗಗೊಂಡಿವೆ

ಪೇಜ್ ಸಿಕ್ಸ್ ವರದಿಯ ಪ್ರಕಾರ ಅವತ್ತಿನ ಪ್ರಯಾಣಲ್ಲಿ ಪಿಟ್ ಕಂಠಮಟ್ಟ ಕುಡಿದಿದ್ದ ಎಂದು ಜೋಲೀ ತನಿಖಾಧಿಕಾರಿಗಳಿಗೆ ಹೇಳಿದ್ದಾರೆ. ವಿಮಾನದ ರೆಸ್ಟ್ ರೂಮಲ್ಲಿ ಪಿಟ್ ಜೋರು ಧ್ವನಿಯಲ್ಲಿ ಕಿರುಚಾಡಿದ ಎಂದು ಜೋಲೀ ಹೇಳಿದ್ದಾರೆ. ವಿಮಾನವು ಫ್ರಾನ್ಸಿನ ನೈಸ್ ನಿಂದ ಅಮೆರಿಕಾಗೆ ಹೊರಟಿತ್ತು.

ವಿಮಾನದಲ್ಲಿ ಪಿಟ್ ಜೊತೆ ನಡೆದ ಜಗಳದಲ್ಲಿ ಆ್ಯಂಜಲೀನಾ ಜೋಲೀ ಅನುಭವಿಸಿದ ಗಾಯಗಳ ಹೊಸ ಫೋಟೋಗಳು ಬಹಿರಂಗಗೊಂಡಿವೆ
ಬ್ರಾಡ್ ಪಿಟ್​ ಮತ್ತು ಅ್ಯಂಜಲೀನಾ ಜೋಲಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 20, 2022 | 1:33 PM

ಸೆಲಿಬ್ರಿಟಿ ದಂಪತಿಯಾಗಿದ್ದ ಆ್ಯಂಜಲೀನಾ ಜೋಲಿ (Angelina Jolie) ಮತ್ತು ಬ್ರ್ಯಾಡ್ ಪಿಟ್ (Brad Pitt) ಬೇರ್ಪಟ್ಟು 7 ವರ್ಷಗಳಾದರೂ ಅವರಿಬ್ಬರ ದಾಂಪತ್ಯ, ಜಗಳಗಳು, ಮಕ್ಕಳ ಕಸ್ಟಡಿ ವಿಷಯ, ಆಸ್ತಿ ವಿಚಾರ, ಡಿವೋರ್ಸ್, ವಿಮಾನದಲ್ಲಿ ಪಿಟ್ ಹಲ್ಲೆ ನಡೆಸಿದ್ದು, ಎಫ್ ಬಿ ಐ ನಡೆಸಿದ ತನಿಖೆ ಮೊದಲಾದ ಸಂಗತಿಗಳು ಈಗಲೂ ಪ್ರತಿದಿನ ಚರ್ಚೆಯಾಗುತ್ತವೆ. ನಿಮಗೆ ನೆನಪಿರಬಹುದು, 2016ರಲ್ಲಿ ದಂಪತಿ ತಮ್ಮ ಮಕ್ಕಳೊಂದಿಗೆ ಫ್ರಾನ್ಸ್ ನಿಂದ ಯುಎಸ್ ಗೆ ಬರುವಾಗ ವಿಮಾನದಲ್ಲಿ ಅವರಿಬ್ಬರ ನಡುವೆ ನಡೆದ ಜಗಳ ಅವರ ಬದುಕಿನ ಚಿತ್ರಣವನ್ನೇ ಬದಲಿಸಿತು. ಅವರಿಬ್ಬರನ್ನು ಬೇರೆ ಮಾಡಿದ್ದು ಆ ಜಗಳವೇ!

ಅವತ್ತಿನ ಜಗಳದಲ್ಲಿ ಜೋಲಿ ಗಾಯಗೊಂಡ ಪೋಟೋಗಳು ಈಗ ಬಹಿರಂಗಗೊಳ್ಳುತ್ತಿರುವುದು ಅವರ ಬಗ್ಗೆ ನಡೆಯುವ ಚರ್ಚೆಗೆ ಹೊಸ ಸರಕು ಒದಗಿಸಿದೆ.

ಪೇಜ್ ಸಿಕ್ಸ್ ವರದಿಯೊಂದರ ಪ್ರಕಾರ ಜೋಲಿಯ ಗಾಯದ ಹೊಸ ಚಿತ್ರಗಳು ಬಹಿರಂಗಗೊಂಡಿದ್ದು ಅವಗಳನ್ನು ಎಫ್ ಬಿ ಐ ಗೆ ನೀಡಲಾಗಿದೆ.

ಆಸ್ಕರ್ ಪ್ರಶಸ್ತಿ ವಿಜೇತೆ ಕೈ ಮತ್ತು ಮೊಣಕೈ ಮೇಲಿನ ಗಾಯಗಳು ಸದರಿ ಫೋಟೋಗಳಲ್ಲಿ ಗೋಚರಿಸುತ್ತಿವೆ ಎಂದು ವರದಿಯಾಗಿದೆ.

ಪೇಜ್ ಸಿಕ್ಸ್ ವರದಿಯ ಪ್ರಕಾರ ಅವತ್ತಿನ ಪ್ರಯಾಣಲ್ಲಿ ಪಿಟ್ ಕಂಠಮಟ್ಟ ಕುಡಿದಿದ್ದ ಎಂದು ಜೋಲೀ ತನಿಖಾಧಿಕಾರಿಗಳಿಗೆ ಹೇಳಿದ್ದಾರೆ. ವಿಮಾನದ ರೆಸ್ಟ್ ರೂಮಲ್ಲಿ ಪಿಟ್ ಜೋರು ಧ್ವನಿಯಲ್ಲಿ ಕಿರುಚಾಡಿದ ಎಂದು ಜೋಲೀ ಹೇಳಿದ್ದಾರೆ. ವಿಮಾನವು ಫ್ರಾನ್ಸಿನ ನೈಸ್ ನಿಂದ ಅಮೆರಿಕಾಗೆ ಹೊರಟಿತ್ತು.

ಬುಲ್ಲೆಟ್ ಟ್ರೇನ್ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಪಿಟ್ ತನ್ನ ತಲೆಯನ್ನು ಹಿಡಿದು ಜೋರಾಗಿ ಅಲುಗಾಡಿಸಿ ತನ್ನನ್ನು ಗೋಡೆಯತ್ತ ತಳ್ಳುತ್ತಾ, ‘ನಮ್ಮ ಕೌಟುಂಬಿಕ ಬದುಕನ್ನು ನೀನು ಹಾಳು ಮಾಡುತ್ತಿದ್ದೀಯಾ,’ ಅಂತ ಜೋರಾಗಿ ಅರಚಿದ ಎಂದು ಜೋಲೀ ಹೇಳಿದ್ದಾರೆ.

ಇದೆಲ್ಲ ನಡೆಯುತ್ತಿದ್ದಾಗ ತನ್ನೆರಡು ಮಕ್ಕಳು ಗಾಬರಿ ಮತ್ತು ಆತಂಕದಿಂದ ಕಿರುಚುತ್ತಾ, ಅಳುತ್ತಾ, ‘ಆರ್ ಯೂ ಓಕೆ ಮಮ್ಮೀ?’ ಅಂತ ಕೇಳಿದರು ಎಂದು ಜೋಲಿ ಹೇಳಿದ್ದಾರೆ.

ಅದಕ್ಕೆ ಪಿಟ್ ಪ್ರತಿಕ್ರಿಯಿಸಿ ‘ಇಲ್ಲ, ಮಮ್ಮಿ ಸರಿಯಿಲ್ಲ. ಅವಳು ಈ ಕುಟುಂಬವನ್ನು ಹಾಳು ಮಾಡುತ್ತಿದ್ದಾಳೆ. ಅವಳಿಗೆ ಹುಚ್ಚು ಹಿಡಿದಿದೆ,’ ಎಂದು ಕೂಗಿದ, ಅಂತ ಜೋಲಿ ಹೇಳಿದರೆಂದು ವರದಿಯಾಗಿದೆ.

ಪಿಟ್‌ನ ಪ್ರತಿಕ್ರಿಯೆಯ ನಂತರ, ಅವರ ಮಕ್ಕಳಲ್ಲಿ ಒಬ್ಬ, ‘ಹಾಳು ಮಾಡುತ್ತಿರೋದು ಅವಳಲ್ಲ, ಅದು ನೀನು, ನೀನು ಪಿ-ಕೆ,’ ಅಂತ ಕೂಗಿ ಹೇಳಿದ ಅಂತ ಜೋಲೀ ಹೇಳಿಕೊಂಡಿದ್ದಾರೆ.

‘ಅವನು ಮಾಡಿದ ಕಾಮೆಂಟ್ ಪಿಟ್‌ಗೆ ಮತ್ತಷ್ಟು ಕೋಪ ತರಿಸಿತು ಮತ್ತು ಅವನು ಮಕ್ಕಳ ಮೇಲೆ ಹಲ್ಲೆ ಮಾಡುವನೇನೋ ಎಂಬಂತೆ ಅವರತ್ತ ಓಡಿದ,’ ಎಂದು ಜೋಲಿ ತನಿಖಾಧಿಕಾರಿಗಳಿಗೆ ಹೇಳಿರುವರೆಂದು ಪತ್ರಿಕೆ ವರದಿ ಮಾಡಿದೆ.

ಅಸಲು ಸಂಗತಿಯೇನೆಂದರೆ ಆಗ 15 ವರ್ಷದವನಾಗಿದ್ದ ದಂಪತಿಯ ದತ್ತುಪುತ್ರ ಮ್ಯಾಡಾಕ್ಸ್ ವಿಮಾನದಲ್ಲಿ ಪಿಟ್ ವಿರುದ್ಧ ಕೂಗಾಡಿದ್ದು.

ಜೋಲಿ ತನ್ನ ಗಾಯಗಳ ಏಕವರ್ಣದ ಫೋಟೋಗಳನ್ನು ತನ್ನ ಮಕ್ಕಳ ಕೈಬರಹದ ಪ್ರತಿಗಳೊಂದಿಗೆ ಸಲ್ಲಿಸಿದ್ದು, ಅದರಲ್ಲಿ ಮಕ್ಕಳು ಅಂದು ವಿಮಾನದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಬ್ರಾಡ್ ತಪ್ಪಿತಸ್ಥ ಅಲ್ಲವೆಂದು ಕಂಡುಬಂದ ಬಳಿಕ, 2016 ರಲ್ಲಿ ಪ್ರಕರಣವನ್ನು ಮುಚ್ಚಲಾಯಿತು ಮತ್ತು ನಂತರ ಜೋಲೀ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.

ಈ ವರ್ಷದ ಆರಂಭದಲ್ಲಿ, ಜೇನ್ ಡೋ ಎಂಬ ಹೆಸರಿನಲ್ಲಿ ಪಿಟ್ ವಿರುದ್ಧ ಮೊಕದ್ದಮೆ ಹೂಡಿದ್ದು ಏಂಜಲೀನಾ ಜೋಲಿಯೇ ಎಂದು ತಿಳಿದುಬಂದಿದೆ.

Published On - 1:31 pm, Sat, 20 August 22