ಪ್ರಿಯಾಂಕಾ ಚೋಪ್ರಾಗೆ ಕಳಿಸಿದ್ದ ಮೊದಲ ಸಂದೇಶ ಬಹಿರಂಗಪಡಿಸಿದ ನಿಕ್, ಪ್ರಿಯಾಂಕಾ ಪ್ರತಿಕ್ರಿಯೆ ಏನಾಗಿತ್ತು?

|

Updated on: May 17, 2023 | 8:28 PM

Priyanka Chopra-Nick Jonas: ಪ್ರಿಯಾಂಕಾ ಚೋಪ್ರಾಗೆ ಕಳಿಸಿದ್ದ ಮೊದಲ ಸಂದೇಶವನ್ನು ಬಹಿರಂಗಗೊಳಿಸಿದ ನಿಕ್ ಜೋನಸ್! ಪ್ರಿಯಾಂಕಾ ಪ್ರತಿಕ್ರಿಯೆ ಏನಾಗಿತ್ತು?

ಪ್ರಿಯಾಂಕಾ ಚೋಪ್ರಾಗೆ ಕಳಿಸಿದ್ದ ಮೊದಲ ಸಂದೇಶ ಬಹಿರಂಗಪಡಿಸಿದ ನಿಕ್, ಪ್ರಿಯಾಂಕಾ ಪ್ರತಿಕ್ರಿಯೆ ಏನಾಗಿತ್ತು?
ಪ್ರಿಯಾಂಕಾ-ನಿಕ್
Follow us on

ವಿಶ್ವದ ಟಾಪ್ ಸೆಲೆಬ್ರಿಟಿ ಜೋಡಿಗಳಲ್ಲಿ ನಿಕ್ ಜೋನಸ್ (Nick Jonas) ಹಾಗೂ ಪ್ರಿಯಾಂಕಾ ಚೋಪ್ರಾರಿಗೂ (Priyanka Chopra) ಸ್ಥಾನವಿದೆ. ಪ್ರಿಯಾಂಕಾ ಚೋಪ್ರಾಗಿಂತಲೂ 11 ವರ್ಷದ ಕಿರಿಯ ನಿಕ್ ಜೋನಸ್. 2018 ರಲ್ಲಿ ಈ ಜೋಡಿ ವಿವಾಹವಾದಾಗ ಇಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು, ಆದರೆ ಇಬ್ಬರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ. ಈ ಡಿಸೆಂಬರ್​ ಬಂತೆಂದರೆ ಇಬ್ಬರೂ ಮದುವೆಯಾಗಿ ಐದು ವರ್ಷವಾಗುತ್ತದೆ. ಹಾಲಿವುಡ್​ನಲ್ಲಿ ಇದು ಸುದೀರ್ಘ ದಾಂಪತ್ಯವೇ.

ಪ್ರಿಯಾಂಕಾ ಚೋಪ್ರಾ ಅಥವಾ ನಿಕ್ ಜೋನಸ್? ಮೊದಲಿಗೆ ಆಸಕ್ತಿ ವ್ಯಕ್ತಪಡಿಸಿದ್ದು ಯಾರು? ಈ ಬಗ್ಗೆ ನಿಕ್ ಜೋನಸ್ ಶೋ ಒಂದರಲ್ಲಿ ಉತ್ತರ ನೀಡಿದ್ದಾರೆ. ತಾವು ಪ್ರಿಯಾಂಕಾ ಚೋಪ್ರಾಗೆ ಮಾಡಿದ ಮೊದಲ ಸಂದೇಶದ ಚಿತ್ರವನ್ನು ಸೇವ್ ಮಾಡಿಟ್ಟುಕೊಂಡಿರುವ ನಿಕ್ ಜೋನಸ್ ಶೋ ನಲ್ಲಿ ಸಂದೇಶವನ್ನು ತೋರಿಸಿದರಲ್ಲದೆ ತಮ್ಮ ಮೊದಲ ಭೇಟಿಯ ಬಗ್ಗೆ, ಅದೆಷ್ಟು ಬೇಗ ತಾವು ಹತ್ತಿರವಾದೆವು ಎಂಬ ಬಗ್ಗೆಯೂ ಮಾತನಾಡಿದ್ದಾರೆ.

ಅಂದಹಾಗೆ ಮೊದಲಿಗೆ ನಿಕ್ ಅವರೇ ಸಂದೇಶ ಕಳುಹಿಸಿದರಂತೆ. ಇಬ್ಬರ ಆಲೋಚನೆಗಳು ಒಂದೇ ರೀತಿ ಎನಿಸಿತ್ತು, ಇಬ್ಬರ ಗೆಳೆಯರೂ ಸಹ ಕಾಮನ್ ಆಗಿದ್ದರು, ಇಬ್ಬರಿಗೂ ಗೊತ್ತಿದ್ದ ವ್ಯಕ್ತಿಯೊಬ್ಬರು ನೀನು ಪ್ರಿಯಾಂಕಾರನ್ನು ಭೇಟಿ ಆಗಬೇಕು ಎಂದಿದ್ದರು, ನನಗೂ ಆಸಕ್ತಿ ಇತ್ತು ಹಾಗಾಗಿ ನಾನೇ ಮೊದಲಿಗೆ ಟ್ವಿಟ್ಟರ್ ಮೂಲಕ ಪ್ರಿಯಾಂಕಾಗೆ ಸಂದೇಶ ಕಳುಹಿಸಿದೆ ಎಂದು ಗುಟ್ಟು ರಟ್ಟು ಮಾಡಿದ್ದಾರೆ ನಿಕ್ ಜೋನಸ್.

ನಿಮ್ಮನ್ನು ಭೇಟಿ ಆಗುವಂತೆ ಹೇಳಲಾಗಿದೆ. ನಾವಿಬ್ಬರೂ ಭೇಟಿ ಆಗೋಣವೇ? ಎಂದು ನಿಕ್ ಜೋನಸ್ ಕೇಳಿದರಂತೆ. ನಮ್ಮಿಬ್ಬರ ಆಲೋಚನೆಗಳು, ಆಸಕ್ತಿಗಳು, ಇಷ್ಟಗಳು ಒಂದೇ ರೀತಿ ಇವೆ ನಾವು ಭೇಟಿ ಆಗಬೇಕು ಎಂದು ಸಂದೇಶ ಮಾಡಿದ್ದರಂತೆ ನಿಕ್. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಪ್ರಿಯಾಂಕಾ ಸರಿ, ಆದರೆ ಟ್ವಿಟ್ಟರ್​ನಲ್ಲಿ ಮೆಸೇಜ್ ಮಾಡಿದರೆ ನನ್ನ ಸೋಷಿಯಲ್ ಮೀಡಿಯಾ ಟೀಮ್ ನೋಡುತ್ತಿರುತ್ತಾರೆ ಟೆಕ್ಸ್ಟ್ ಮೆಸೇಜ್ ಮಾಡಿ ಎಂದರಂತೆ. ಇಬ್ಬರೂ ನಂಬರ್ ಬದಲಾಯಿಸಿಕೊಂಡು ಚಾಟಿಂಗ್ ಶುರು ಮಾಡಿದರಂತೆ.

ಇದನ್ನೂ ಓದಿ:RRR ಸಿನಿಮಾ ನೋಡಿಲ್ಲವೆಂದ ನಟಿ ಪ್ರಿಯಾಂಕಾ ಚೋಪ್ರಾ, ರಾಮ್ ಚರಣ್ ಬಗ್ಗೆ ಹೇಳಿದ್ದು ಹೀಗೆ

ಕೆಲವು ವಾರ ಮೆಸೇಜ್ ಮಾಡಿದ ಬಳಿಕ ಇಬ್ಬರೂ ಭೇಟಿಯಾಗಿದ್ದಾರೆ, ಮೊದಲ ಡೇಟ್​ಗೆ ಸಹ ಹೋಗಿದ್ದಾರೆ. ಮೊದಲ ಮೆಸೇಜ್ ಮಾಡಿದ ಕೇವಲ ಏಳು ತಿಂಗಳಲ್ಲಿಯೇ ಮದುವೆ ಮಾತುಕತೆಗಳು ಪ್ರಾರಂಭವಾದವಂತೆ. ಅದಾದ ಕೆಲವೇ ತಿಂಗಳಲ್ಲಿ ಮದುವೆ ಸಹ ಆಗಿಬಿಟ್ಟಿದ್ದಾರೆ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್. ಇದೇ ಸಂದರ್ಶನದಲ್ಲಿ, ಪ್ರಿಯಾಂಕಾ ಬರುವ ಮುಂಚೆ ನನ್ನ ಜೀವನ ಹೇಗಿತ್ತೆಂಬುದು ಸಹ ನನಗೆ ನೆನಪಿಲ್ಲ ಅಷ್ಟು ಬೋರಿಂಗ್ ಆಗಿತ್ತು ಯಾವ ವಿಶೇಷ ಘಟನೆಗಳು ಸಹ ನಡೆದಿರಲಿಲ್ಲ ಎಂದಿದ್ದಾರೆ ನಿಕ್ ಜೋನಸ್.

ನಿಕ್ ಜೋನಸ್ ಹಾಲಿವುಡ್​ನ ಖ್ಯಾತ ಗಾಯಕ ಹಾಗೂ ನಟ. ಜೋನಸ್ ಬ್ರದರ್ಸ್​ ಅವರುಗಳ ಲೈವ್ ಕಾರ್ಯಕ್ರಮ ಆಲ್ಬಂಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತವೆ. ಇನ್ನು ಪ್ರಿಯಾಂಕಾ ಚೋಪ್ರಾ ಹಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರು. ಪ್ರಿಯಾಂಕಾ ಚೋಪ್ರಾ ನಟನೆಯ ಸಿಟಾಡೆಲ್ ಹೆಸರಿನ ವೆಬ್ ಸರಣಿ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇದೀಗ ಲವ್ ಅಗೇನ್ ಹೆಸರಿನ ಸಿನಿಮಾ ಸಹ ಬಿಡುಗಡೆ ಆಗಲಿಕ್ಕಿದೆ. ಈ ಸಿನಿಮಾದ ಸಣ್ಣ ಪಾತ್ರದಲ್ಲಿ ನಿಕ್ ಜೋನಸ್ ನಟಿಸಿದ್ದಾರೆ. ಇಬ್ಬರೂ ಇತ್ತೀಚೆಗಷ್ಟೆ ಸೆರೊಗಸಿ ಮಾದರಿಯಲ್ಲಿ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಮಗುವಿಗೆ ಮಾಲತಿ ಎಂದು ಹೆಸರಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Wed, 17 May 23