Deepika Padukone: ಆಸ್ಕರ್​ ಪ್ರಶಸ್ತಿ ನೀಡಲು ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ; ಹಾಲಿವುಡ್​ ಮಂದಿ ಜೊತೆ ಅವಕಾಶ

95th Academy Awards | Oscars 2023: ಮಾರ್ಚ್​​ 12ರಂದು ಲಾಸ್​ ಏಂಜಲಿಸ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ವಿಜೇತರಿಗೆ ಈ ವೇದಿಕೆಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಟ್ರೋಫಿ ನೀಡಲಿದ್ದಾರೆ.

Deepika Padukone: ಆಸ್ಕರ್​ ಪ್ರಶಸ್ತಿ ನೀಡಲು ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ; ಹಾಲಿವುಡ್​ ಮಂದಿ ಜೊತೆ ಅವಕಾಶ
ದೀಪಿಕಾ ಪಡುಕೋಣೆ

Updated on: Mar 03, 2023 | 1:14 PM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ದಿನದಿಂದ ದಿನಕ್ಕೆ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಹಾಲಿವುಡ್​ ಮಂದಿಗೂ ಅವರ ಪರಿಚಯ ಇದೆ. ಜಾಗತಿಕ ಮಟ್ಟದ ಪ್ರತಿಷ್ಠಿತ ವೇದಿಕೆಗಳಲ್ಲೂ ದೀಪಿಕಾ ಪಡುಕೋಣೆ ಅವರಿಗೆ ಅವಕಾಶಗಳು ಸಿಗುತ್ತಿದೆ. ವಿದೇಶದಲ್ಲಿನ ಅನೇಕ ಸಿನಿಮೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅವರು ಮಿಂಚಿದ್ದಾರೆ. ಈಗ ಅವರಿಗೆ ಆಸ್ಕರ್​ (Oscar Awards) ವೇದಿಕೆ ಏರುವ ಅವಕಾಶ ಸಿಕ್ಕಿದೆ. ಹಲವು ಹಾಲಿವುಡ್​ ಸೆಲೆಬ್ರಿಟಿಗಳ ಜೊತೆ ಇಂಥ ಅವಕಾಶ ಪಡೆದ ಭಾರತದ ಸೆಲೆಬ್ರಿಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗುತ್ತಿದ್ದಾರೆ. ಈ ಸುದ್ದಿ ಕೇಳಿ ದೀಪಿಕಾ ಪಡುಕೋಣೆ ಫ್ಯಾನ್ಸ್​ ಖುಷಿ ಆಗಿದ್ದಾರೆ. 95ನೇ ಅಕಾಡೆಮಿ ಅವಾರ್ಡ್ಸ್​ (95th Academy Awards) ಕಾರ್ಯಕ್ರಮದಲ್ಲಿ ಆಸ್ಕರ್​ ಪ್ರಶಸ್ತಿ ಗೆದ್ದವರಿಗೆ ದೀಪಿಕಾ ಪಡುಕೋಣೆ ಅವರು ಟ್ರೋಫಿ ನೀಡಲಿದ್ದಾರೆ.

ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಿದ್ದರು. ಈಗ ದೀಪಿಕಾ ಪಡುಕೋಣೆ ಅವರಿಗೆ ಆ ಅವಕಾಶ ಸಿಗುತ್ತಿದೆ. ಮಾರ್ಚ್​​ 12ರಂದು ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಆ ಪೈಕಿ ಒಂದು ವಿಭಾಗದಲ್ಲಿ ಪ್ರಶಸ್ತಿ ಗೆದ್ದವರಿಗೆ ದೀಪಿಕಾ ಪಡುಕೋಣೆ ಅವರು ಟ್ರೋಫಿ ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ
119 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ರಣವೀರ್​-ದೀಪಿಕಾ; ಇದರ ವಿಶೇಷತೆಗಳೇನು?
Brahmastra: ಮಾಜಿ ಪ್ರೇಮಿಯ ಸಿನಿಮಾದಲ್ಲಿ ದೀಪಿಕಾ ಕದ್ದುಮುಚ್ಚಿ ನಟನೆ? ಝೂಮ್​ ಮಾಡಿ ಸಾಕ್ಷಿ ತೋರಿಸಿದ ನೆಟ್ಟಿಗರು
Deepika Padukone: ಹೈದರಾಬಾದ್​ನಲ್ಲಿ ಶೂಟಿಂಗ್ ಬಿಟ್ಟು ಆಸ್ಪತ್ರೆಗೆ ಓಡಿದ ದೀಪಿಕಾ ಪಡುಕೋಣೆ; ಅಂಥದ್ದೇನಾಯ್ತು?
Cannes 2022: ಕಾನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಮಿಂಚಿದ ದೀಪಿಕಾ; ಇಲ್ಲಿವೆ ಫೋಟೋಗಳು

ಇದನ್ನೂ ಓದಿ: ‘ಪಠಾಣ್​’ ಗೆದ್ದಿದ್ದಕ್ಕೆ ಶಾರುಖ್​ ಖಾನ್​ಗೆ ದೀಪಿಕಾ ಸಿಹಿ ಮುತ್ತು

ತಮಗೆ ಈ ಚಾನ್ಸ್​ ಸಿಕ್ಕಿದೆ ಎಂಬುದನ್ನು ದೀಪಿಕಾ ಪಡುಕೋಣೆ ಅವರು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ಅದಕ್ಕೆ ಸೆಲೆಬ್ರಿಟಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ದೀಪಿಕಾ ಪತಿ ರಣವೀರ್​ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಟಿ ನೇಹಾ ಧೂಪಿಯಾ ಅವರು, ‘ನಿಮ್ಮನ್ನು ನೋಡಲು ಕಾಯುತ್ತಿದ್ದೇನೆ ದೀಪು’ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಜನಸಾಮಾನ್ಯರ ಜೊತೆ ಪ್ರಯಾಣಿಸಿದ ದೀಪಿಕಾ ಪಡುಕೋಣೆ; ಗುರುತು ತಿಳಿಯದಂತೆ ಮಾಡಲು ನಟಿ ಮಾಡಿದ್ದೇನು?

ದೀಪಿಕಾ ಪಡುಕೋಣೆ ಅವರು ಈ ವರ್ಷ ಆರಂಭದಲ್ಲಿಯೇ ಗೆಲುವಿನ ನಗು ಬೀರಿದ್ದಾರೆ. ಶಾರುಖ್​ ಖಾನ್​ ಜೊತೆ ಅವರು ನಟಿಸಿದ ‘ಪಠಾಣ್​’ ಚಿತ್ರ ಸೂಪರ್​ ಹಿಟ್​ ಆಗಿದೆ. ಅದರ ಬೆನ್ನಲ್ಲೇ ಆಸ್ಕರ್​ ವೇದಿಕೆ ಏರುವ ಅವಕಾಶ ಸಿಗುತ್ತಿರುವುದರಿಂದ ಅವರ ಚಾರ್ಮ್​ ಹೆಚ್ಚಿದೆ.

ಈ ಬಾರಿ ಭಾರತದ ಪಾಲಿಗೆ ಆಸ್ಕರ್​ ಪ್ರಶಸ್ತಿ ಸಮಾರಂಭ ವಿಶೇಷ ಎನಿಸಿಕೊಂಡಿದೆ. ಯಾಕೆಂದರೆ, ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ನಾಮಿನೇಟ್​ ಆಗಿದೆ. ಭಾರತದ ‘ಆಲ್​ ದಟ್​ ಬ್ರೀಥ್ಸ್​’, ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಗಳು ಕೂಡ ನಾಮಿನೇಟ್​ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್​ ಗೆಲ್ಲುವ ಚಾನ್ಸ್​ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us