AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲೇ 500 ಕೋಟಿ ರೂಪಾಯಿ ಕ್ಲಬ್ ಸೇರಿದ ಸ್ಪೈಡರ್ ಮ್ಯಾನ್

'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. 12ನೇ ದಿನದ ಕಲೆಕ್ಷನ್ ಸೇರಿ ಈ ಚಿತ್ರ ಭಾರತದಲ್ಲಿ ಬೃಹತ್ 500 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಭಾತದ ಸಿನಿಮಾಗಳೇ 100 ಕೋಟಿ ರೂಪಾಯಿ ಕ್ಲಬ್ ಸೇರಲು ಒದ್ದಾಡುತ್ತಿವೆ. ಹೀಗಿರುವಾಗ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ 500 ಕೋಟಿ ರೂಪಾಯಿ ಗಳಿಕೆ ಮಾಡುತ್ತಾ ಇರೋದು ವಿಶೇಷ.

ಭಾರತದಲ್ಲೇ 500 ಕೋಟಿ ರೂಪಾಯಿ ಕ್ಲಬ್ ಸೇರಿದ ಸ್ಪೈಡರ್ ಮ್ಯಾನ್
ಸ್ಪೈಡರ್ ಮ್ಯಾನ್
ರಾಜೇಶ್ ದುಗ್ಗುಮನೆ
|

Updated on: Aug 10, 2026 | 9:33 AM

Share

ಮುಖ್ಯಾಂಶಗಳು

  • 500 ಕೋಟಿ ಕ್ಲಬ್ ಸೇರಿದ ಸ್ಪೈಡರ್ ಮ್ಯಾನ್
  • ಮೊದಲ ವಾರದಲ್ಲೇ ₹334 ಕೋಟಿ ಧೂಳೆಬ್ಬಿಸಿದ ಚಿತ್ರ
  • ಎರಡನೇ ವಾರಾಂತ್ಯದಲ್ಲೂ ಅಬ್ಬರಿಸಿದ ಬಾಕ್ಸ್ ಆಫೀಸ್ ಸುನಾಮಿ

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ (Spider Man) ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಈ ಸಿನಿಮಾ 11 ದಿನ ಪೂರೈಸಿದೆ. ಇಂದಿನ ಗಳಿಕೆಯನ್ನು ಸೇರಿಸಿದರೆ, ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 500 ಕೋಟಿ ರೂಪಾಯಿ ಗಡಿಯನ್ನು ದಾಟಲಿದೆ. ಈ ಮೂಲಕ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಅಧಿಕೃತವಾಗಿ 500 ಕೋಟಿ ರೂಪಾಯಿ ಕ್ಲಬ್ ಸೇರಿದ ಸಾಧನೆ ಮಾಡಿದೆ.

ಚಿತ್ರದ ದಿನದ ಗಳಿಕೆಯನ್ನು ಗಮನಿಸಿದರೆ, ಮೊದಲ ದಿನವೇ 60.60 ಕೋಟಿ ರೂಪಾಯಿ ಗಳಿಸುವ ಮೂಲಕ ಅದ್ದೂರಿ ಚಾಲನೆ ಪಡೆದುಕೊಂಡಿತ್ತು. ಮೊದಲ ವಾರಾಂತ್ಯದಲ್ಲಿ ಅಂದರೆ ಶುಕ್ರವಾರ 49.35 ಕೋಟಿ ರೂಪಾಯಿ, ಶನಿವಾರ 70.25 ಕೋಟಿ ರೂಪಾಯಿ ಹಾಗೂ ಭಾನುವಾರ 77.75 ಕೋಟಿ ರೂಪಾಯಿ ಬಾಚಿಕೊಂಡಿತ್ತು. ವಾರದ ದಿನಗಳಲ್ಲೂ ತನ್ನ ಅಬ್ಬರ ಮುಂದುವರಿಸಿದ್ದ ಚಿತ್ರ ಸೋಮವಾರ 23.80 ಕೋಟಿ ರೂಪಾಯಿ, ಮಂಗಳವಾರ 21.75 ಕೋಟಿ ರೂಪಾಯಿ, ಬುಧವಾರ 17.00 ಕೋಟಿ ರೂಪಾಯಿ ಹಾಗೂ ಗುರುವಾರ 14.25 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಈ ಮೂಲಕ ಮೊದಲ ವಾರದಲ್ಲೇ ಒಟ್ಟು 334.75 ಕೋಟಿ ಗಳಿಸಿ ದಾಖಲೆ ಬರೆದಿತ್ತು.

ಎರಡನೇ ವಾರದಲ್ಲೂ ಸಿನಿಮಾದ ಗಳಿಕೆಯ ವೇಗ ಕಡಿಮೆಯಾಗಿಲ್ಲ. 9ನೇ ದಿನ ಅಂದರೆ ಎರಡನೇ ಶುಕ್ರವಾರ 15.00 ಕೋಟಿ ರೂಪಾಯಿ ಗಳಿಸಿದ್ದ ಚಿತ್ರ, ಶನಿವಾರ 31.00 ಕೋಟಿ ರೂಪಾಯಿ ಹಾಗೂ ಭಾನುವಾರ 34.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಲ್ಲಿಯವರೆಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರೋಸ್ ಕಲೆಕ್ಷನ್ 496.93 ಕೋಟಿ ರೂಪಾಯಿಯಾಗಿದ್ದು, ನೆಟ್ ಕಲೆಕ್ಷನ್ 415.51 ಕೋಟಿ ರೂಪಾಯಿ ಅಷ್ಟಾಗಿದೆ. ಇಂದಿನ ಗಳಿಕೆಯೊಂದಿಗೆ ಭಾರತದಲ್ಲಿ 500 ಕೋಟಿಯ ಬೃಹತ್ ಮೈಲಿಗಲ್ಲನ್ನು ದಾಟಿ ಹೊಸ ಇತಿಹಾಸ ಬರೆದಿದೆ.

ಇದನ್ನೂ ಓದಿ: ಎಲ್ಲ ದಾಖಲೆಗಳ ಮುರಿದು ಹಾಕಿದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

ಭಾತದ ಸಿನಿಮಾಗಳೇ 100 ಕೋಟಿ ರೂಪಾಯಿ ಕ್ಲಬ್ ಸೇರಲು ಒದ್ದಾಡುತ್ತಿವೆ. ಹೀಗಿರುವಾಗ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ 500 ಕೋಟಿ ರೂಪಾಯಿ ಗಳಿಕೆ ಮಾಡುತ್ತಾ ಇರೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ನ್ಯೂಜಿಲೆಂಡ್ ಪ್ರವಾಸಕ್ಕೆ ಬೆಂಗಳೂರಿನಿಂದ ವಿಮಾನ ಹತ್ತಿದ ಟೀಂ ಇಂಡಿಯಾ
ನ್ಯೂಜಿಲೆಂಡ್ ಪ್ರವಾಸಕ್ಕೆ ಬೆಂಗಳೂರಿನಿಂದ ವಿಮಾನ ಹತ್ತಿದ ಟೀಂ ಇಂಡಿಯಾ
ದೊಡ್ಡ ಹೊಟೇಲ್‌ಗಳಲ್ಲಿ ಸಭೆ, ಬಗೆ ಬಗೆಯ ಆಮಿಷಕ್ಕೆ ಮಾರು ಹೋದಿರಾ ಜೋಕೆ!
ದೊಡ್ಡ ಹೊಟೇಲ್‌ಗಳಲ್ಲಿ ಸಭೆ, ಬಗೆ ಬಗೆಯ ಆಮಿಷಕ್ಕೆ ಮಾರು ಹೋದಿರಾ ಜೋಕೆ!
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!