ಪ್ರಭಾಸ್ ಸಿನಿಮಾನಲ್ಲಿ ಮೆಗಾಸ್ಟಾರ್ ಚಿರಂಜೀವಿ: ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು?

Megastar Chiranjeevi: ‘ಸ್ಪಿರಿಟ್’ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ತಮ್ಮ ಮಾಮೂಲಿ ಸ್ಟೈಲ್ ಬಿಟ್ಟು ತುಸು ಭಿನ್ನವಾದ ಕತೆಯನ್ನು ಪ್ರಭಾಸ್ ಅವರಿಗಾಗಿ ರೆಡಿ ಮಾಡಿಕೊಂಡಿದ್ದಾರಂತೆ. ಮಾತ್ರವಲ್ಲದೆ, ಈ ಸಿನಿಮಾನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಬಗ್ಗೆ ಮಾತನಾಡಿದ್ದಾರೆ.

ಪ್ರಭಾಸ್ ಸಿನಿಮಾನಲ್ಲಿ ಮೆಗಾಸ್ಟಾರ್ ಚಿರಂಜೀವಿ: ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು?
Prabhas

Updated on: Nov 14, 2025 | 12:26 PM

ಪ್ರಭಾಸ್ (Prabhas) ಕೈಯಲ್ಲಿ ಈಗಾಗಲೇ ನಾಲ್ಕೈದು ಸಿನಿಮಾಗಳಿವೆ. ಮೊದಲಿಗೆ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದೆ. ಇದೇ ತಿಂಗಳಿನಿಂದ ಪ್ರಭಾಸ್ ನಟನೆಯ ಹೊಸ ಸಿನಿಮಾ ‘ಸ್ಪಿರಿಟ್’ ಶೂಟಿಂಗ್ ಪ್ರಾರಂಭ ಆಗಲಿದೆ. ‘ಸ್ಪಿರಿಟ್’ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ತಮ್ಮ ಮಾಮೂಲಿ ಸ್ಟೈಲ್ ಬಿಟ್ಟು ತುಸು ಭಿನ್ನವಾದ ಕತೆಯನ್ನು ಪ್ರಭಾಸ್ ಅವರಿಗಾಗಿ ರೆಡಿ ಮಾಡಿಕೊಂಡಿದ್ದಾರಂತೆ. ಮಾತ್ರವಲ್ಲದೆ, ಈ ಸಿನಿಮಾನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿದೆ.

ಸಂದೀಪ್ ರೆಡ್ಡಿ ವಂಗಾ, ಮೆಗಾಸ್ಟಾರ್ ಚಿರಂಜೀವಿಯ ಅಭಿಮಾನಿ. ಅವರ ಸಿನಿಮಾ ಒಂದರ ಫೋಟೊವನ್ನು ದೊಡ್ಡದಾಗಿ ತಮ್ಮ ಮನೆಯಲ್ಲಿ ಹಾಕಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ, ‘ಚಿರಂಜೀವಿ ರೀತಿ ತೀಕ್ಷ್ಣವಾದ ನಟನೆ ಯಾರಿಗೂ ಬರದು’ ಎಂದಿದ್ದರು. ಇದೀಗ ಸಂದೀಪ್ ರೆಡ್ಡಿ ವಂಗಾ ಅವರು, ಚಿರಂಜೀವಿ ಅವರನ್ನು ‘ಸ್ಪಿರಿಟ್’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುವಂತೆ ಮನವಿ ಮಾಡಿದ್ದು, ಚಿರಂಜೀವಿ ಸಹ ಒಪ್ಪಿಕೊಂಡಿದ್ದಾರೆ. ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಸ್ವತಃ ಸಂದೀಪ್ ರೆಡ್ಡಿ ವಂಗಾ ಅವರಿಗೆ ಪ್ರಶ್ನೆ ಮಾಡಲಾಗಿದ್ದು, ಸಂದೀಪ್ ರೆಡ್ಡಿ ವಂಗಾ ಈ ಗಾಳಿಸುದ್ದಿಯನ್ನು ನಿರಾಕರಿಸಿದ್ದಾರೆ. ‘ಸ್ಪಿರಿಟ್’ ಸಿನಿಮಾನಲ್ಲಿ ಚಿರಂಜೀವಿ ನಟಿಸುತ್ತಿಲ್ಲ ಎಂದು ಸಂದೀಪ್ ರೆಡ್ಡಿ ವಂಗಾ ಸ್ಪಷ್ಟಪಡಿಸಿದ್ದಾರೆ. ‘ಸ್ಪಿರಿಟ್’ ಸಿನಿಮಾದಲ್ಲಿಯೇ ಕೊರಿಯನ್ ಚಿತ್ರರಂಗದ ಸ್ಟಾರ್ ನಟ ಡಾನ್ ಲೀ ಅಲಿಯಾಸ್ ಮಾ ಡಾಂಗ್ ಸೊಕ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಂದೀಪ್ ರೆಡ್ಡಿ ವಂಗಾ ನಿರಾಕರಿಸಿದ್ದಾರೆ. ಆದರೆ ಡಾನ್ ಲೀ ಈಗಾಗಲೇ ಪ್ರಭಾಸ್ ಅವರ ಕೆಲವು ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಡಾನ್ ಲೀ ‘ಸ್ಪಿರಿಟ್’ ಸಿನಿಮಾನಲ್ಲಿ ನಟಿಸುವುದು ಖಾತ್ರಿ ಎನ್ನಲಾಗುತ್ತಿದೆ.

ಇದನ್ನೂ ಓದಿ:ತೃಪ್ತಿ ದಿಮ್ರಿಗೆ ಅವಕಾಶಗಳ ಬಾಗಿಲು ತೆರೆಯುತ್ತಾ ‘ಸ್ಪಿರಿಟ್’ ಸಿನಿಮಾ

‘ಸ್ಪಿರಿಟ್’ ಸಿನಿಮಾನಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ನಿಷ್ಠಾವಂತ ಪೊಲೀಸ್ ಅಧಿಕಾರಿ, ಅಂತರಾಷ್ಟ್ರೀಯ ಡಾನ್ ಒಬ್ಬನಿಂದಾಗಿ ತನ್ನ ಕುಟುಂಬದವರನ್ನೆಲ್ಲ ಕಳೆದುಕೊಳ್ಳುತ್ತಾನೆ. ಬಳಿಕ ಡಾನ್ ಅನ್ನು ಹುಡುಕಿಕೊಂಡು ಹೋಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳುವ ಕತೆಯನ್ನು ‘ಸ್ಪಿರಿಟ್’ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ದೀಪಿಕಾ ಪಡುಕೋಣೆ ಬದಲಿಗೆ ಈಗ ತೃಪ್ತಿ ದಿಮ್ರಿ ಅವರು ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ‘ಫೌಜಿ’ ಸಿನಿಮಾನಲ್ಲೂ ಪ್ರಭಾಸ್ ನಟಿಸಿದ್ದು, ಆ ಸಿನಿಮಾ ಸಹ 2026ರಲ್ಲೇ ಬಿಡುಗಡೆ ಆಗಲಿದೆ. ರಘು ಹನುಪುಡಿ ಅವರು ‘ಫೌಜಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದರ ಬಳಿಕ ‘ಸ್ಪಿರಿಟ್’ ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾ ಬರಲಿದೆ. ಅದರ ನಂತರ ‘ಸಲಾರ್ 2’ ಅದಾದ ಬಳಿಕ ಹೊಂಬಾಳೆ ಜೊತೆಗಿನ ಹೊಸ ಸಿನಿಮಾ ಸೆಟ್ಟೇರಲಿದೆ. ಒಟ್ಟಾರೆ ಇನ್ನೂ ನಾಲ್ಕೈದು ವರ್ಷಗಳ ಕಾಲ ಪ್ರಭಾಸ್ ಬಲು ಬ್ಯುಸಿಯಾಗಿ ಇರಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ