ಮೊದಲ 1000 ಕೋಟಿ ಸಿನಿಮಾ ಆಗಲಿದೆ ‘ಜೈಲರ್ 2’

ಬಾಲಿವುಡ್, ತೆಲುಗಿವಿನ ಹಲವು ಸಿನಿಮಾಗಳು ಈಗಾಗಲೇ 1000 ಕೋಟಿ ಗಳಿಕೆ ಮಾಡಿವೆ. ಕನ್ನಡದ ಕೆಜಿಎಫ್, ಕಾಂತಾರ ಸಿನಿಮಾಗಳು ಸಹ 1000 ಕೋಟಿ ಗಡಿ ದಾಟಿವೆ. ಆದರೆ ರಜನೀಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ಸೂರ್ಯ ಅಂಥಹಾ ಸ್ಟಾರ್ ನಟರುಗಳು ಇರುವ ತಮಿಳು ಚಿತ್ರರಂಗಕ್ಕೆ ಮಾತ್ರ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ ‘ಜೈಲರ್ 2’ ಈಗ 1000 ಕೋಟಿ ಗಳಿಸುವ ಸೂಚನೆ ನೀಡಿದೆ.

ಮೊದಲ 1000 ಕೋಟಿ ಸಿನಿಮಾ ಆಗಲಿದೆ ‘ಜೈಲರ್ 2’
Jailer 2

Updated on: Oct 23, 2026 | 5:28 PM

ಮುಖ್ಯಾಂಶಗಳು

  • ರಜನೀಕಾಂತ್ ನಟನೆಯ ‘ಜೈಲರ್ 2’ ಭರ್ಜರಿ ಪ್ರದರ್ಶನ
  • ‘ಜೈಲರ್ 2’ ಬಾಕ್ಸ್ ಆಫೀಸ್​​ನಲ್ಲಿ 600 ಕೋಟಿ ಗಳಿಸಿದೆ
  • ತಮಿಳಿನ ಮೊದಲ ಸಾವಿರ ಕೋಟಿ ಸಿನಿಮಾ ಆಗಲಿದೆ

ದೊಡ್ಡ ಬಜೆಟ್ ಸಿನಿಮಾಗಳು ಸಾವಿರ ಕೋಟಿ ತಲುಪುವುದು ಈಗ ಸರ್ವೇ ಸಾಮಾನ್ಯ. ದೊಡ್ಡ ಸ್ಟಾರ್ ನಟರ ಕೆಲ ಕೆಟ್ಟ ಸಿನಿಮಾಗಳು ಸಹ 1000 ಕೋಟಿ ಗಳಿಕೆ ಮಾಡಿವೆ ಅದೂ ಕೇವಲ ಒಂದು ತಿಂಗಳ ಒಳಗೆ ಗಳಿಕೆ ಮಾಡಿಬಿಡುತ್ತವೆ. ಬಾಲಿವುಡ್, ತೆಲುಗಿವಿನ ಹಲವು ಸಿನಿಮಾಗಳು ಈಗಾಗಲೇ 1000 ಕೋಟಿ ಗಳಿಕೆ ಮಾಡಿವೆ. ಕನ್ನಡದ ಕೆಜಿಎಫ್, ಕಾಂತಾರ ಸಿನಿಮಾಗಳು ಸಹ 1000 ಕೋಟಿ ಗಡಿ ದಾಟಿವೆ. ಆದರೆ ರಜನೀಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ಸೂರ್ಯ ಅಂಥಹಾ ಸ್ಟಾರ್ ನಟರುಗಳು ಇರುವ ತಮಿಳು ಚಿತ್ರರಂಗಕ್ಕೆ ಮಾತ್ರ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ ‘ಜೈಲರ್ 2’ ಈಗ 1000 ಕೋಟಿ ಗಳಿಸುವ ಸೂಚನೆ ನೀಡಿದೆ.

ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹1000 ಕೋಟಿ ದಾಟಿದ ಒಂದೇ ಒಂದು ತಮಿಳು ಚಿತ್ರವೂ ಇಲ್ಲ. ಭಾರತದ ದೊಡ್ಡ ಚಿತ್ರರಂಗಗಳಲ್ಲಿ ಒಂದೆನಿಸಿಕೊಂಡಿದ್ದರೂ ಸಹ 1000 ಕೋಟಿ ಗಳಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಸಾವಿರ ಕೋಟಿ ಗಳಿಕೆಯ ಸಿನಿಮಾ ಕೊಡುವುದು ತಮಿಳು ಸಿನಿಮಾ ನಟ, ನಿರ್ದೇಶಕರುಗಳ ಕನಸಾಗಿತ್ತು. ಈಗ ಆ ಕನಸಿನ ಹೊಣೆ ಸೂಪರ್‌ಸ್ಟಾರ್ ರಜನೀಕಾಂತ್ ಅವರ ‘ಜೈಲರ್ 2’ ಮೇಲಿದೆ.

‘ಜೈಲರ್ 2’ ಸಿನಿಮಾ ಬಿಡುಗಡೆ ಆಗಿ ವಾರವಾಗಿದ್ದು ವಾರದಲ್ಲೇ ಈ ಸಿನಿಮಾ ಸುಮಾರು 600 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಒಂದು ವಾರದಲ್ಲಿ ಇಷ್ಟು ದೊಡ್ಡ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್​​ನಲ್ಲಿ ಸಂಚಲನ ಮೂಡಿಸಿದೆ. ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಅಂದರೆ ಒಟಿಟಿಗೆ ಬರುವ ಮುಂಚೆಯೇ ಈ ಸಿನಿಮಾ ಉಳಿದ ನಾಲ್ಕು ನೂರು ಕೋಟಿ ಗಳಿಸುವ ದಟ್ಟ ಸಾಧ್ಯತೆ ಇದೆಯೆಂದು ಬಾಕ್ಸ್ ಆಫೀಸ್​​ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ. ಆ ಮೂಲಕ ‘ಜೈಲರ್ 2’ 1000 ಕೋಟಿ ಗಳಿಕೆ ಮಾಡಿದ ಮೊಟ್ಟ ಮೊದಲ ಸಿನಿಮಾ ಎನಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:ರಜನೀಕಾಂತ್ ಬಳಿಕ ಚಿರಂಜೀವಿಗೆ ಸಿನಿಮಾ ನಿರ್ದೇಶಿಸಲಿರುವ ಕಾರ್ತಿಕ್ ಸುಬ್ಬರಾಜು

‘ಜೈಲರ್ 2’ ಅನ್ನು ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನೀಕಾಂತ್ ನಟನೆ ಮಾಡಿದ್ದು, ಈ ಬಾರಿ ಅವರು ವಿಗ್ರಹ ಕಳ್ಳಸಾಗಣೆ ಜಾಲದ ವಿರುದ್ಧ ಹೋರಾಡುತ್ತಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದ ಬಜೆಟ್ ₹240 ರಿಂದ ₹300 ಕೋಟಿ ಎಂದು ಅಂದಾಜಿಸಲಾಗಿದೆ. ವಿದ್ಯಾ ಬಾಲನ್, ಎಸ್.ಜೆ. ಸೂರ್ಯ, ರಮ್ಯಾ ಕೃಷ್ಣನ್, ಸುರಾಜ್ ವೆಂಜರಮೂಡು ಅವರಂತಹ ದೊಡ್ಡ ತಾರಾಗಣವಿದೆ. ಮೋಹನ್‌ಲಾಲ್, ಶಿವರಾಜ್‌ಕುಮಾರ್, ಹೃತಿಕ್ ರೋಷನ್ ಮುಂತಾದವರು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಲ ಭಾಗ ‘ಜೈಲರ್’ (2023) ದೊಡ್ಡ ಯಶಸ್ಸು ಕಂಡಿತ್ತು. ಅದು ವಿಶ್ವದಾದ್ಯಂತ ಸುಮಾರು ₹600–650 ಕೋಟಿ ಗಳಿಸಿತು. ಇದೇ ಕಾರಣಕ್ಕೆ ಎರಡನೇ ಭಾಗದ ಮೇಲೆ ನಿರೀಕ್ಷೆ ಆಕಾಶದೆತ್ತರಕ್ಕಿತ್ತು. ಅನಿರುದ್ಧ್ ರವಿಚಂದ್ರನ್ ಅವರ ಸಂಗೀತ ಸಿನಿಮಾಕ್ಕೆ ಒಳ್ಳೆಯ ಬೂಸ್ಟ್ ಕೊಟ್ಟಿದೆ. ಸಿನಿಮಾದ ಸಂಗೀತ ಈಗಾಗಲೇ ದೊಡ್ಡ ಹಿಟ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us