‘ಆಸ್ತಿ ತಮಿಳು ಜನರಿಗೆ ಹಂಚುವೆ’, ರಜನೀಕಾಂತ್ ಹಳೆ ವಿಡಿಯೋ ವೈರಲ್
Rajinikanth: ರಜನೀಕಾಂತ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ರಜನೀಕಾಂತ್ ತಮ್ಮ ಆಸ್ತಿ ಹಂಚಿಕೆ ಬಗ್ಗೆ ಆ ವಿಡಿಯೋನಲ್ಲಿ ಮಾತನಾಡಿದ್ದರು. ರಜನೀಕಾಂತ್ ಅವರ ರಾಘವೇಂದ್ರ ಮಂಟಪವನ್ನು ತ್ರೀ ಸ್ಟಾರ್ ಹೋಟೆಲ್ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡಲು ಆರಂಭವಾದ ಬೆನ್ನಲ್ಲೆ ಈ ವಿಡಿಯೋ ವೈರಲ್ ಆಗಿದೆ.

ಮುಖ್ಯಾಂಶಗಳು
- ರಜನೀಕಾಂತ್ ಹಳೆ ವಿಡಿಯೋ ಈಗ ವೈರಲ್
- ಆಸ್ತಿಯನ್ನು ಜನರಿಗೆ ಹಂಚುವೆ ಎಂದಿದ್ದ ರಜನಿ
- ವಿಡಿಯೋ ವೈರಲ್ ಆಗಲು ಕಾರಣವೇನು?
ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಈಗಾಗಲೇ 500 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ರಜನೀಕಾಂತ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ರಜನೀಕಾಂತ್ ತಮ್ಮ ಆಸ್ತಿ ಹಂಚಿಕೆ ಬಗ್ಗೆ ಆ ವಿಡಿಯೋನಲ್ಲಿ ಮಾತನಾಡಿದ್ದರು. ರಜನೀಕಾಂತ್ ಅವರ ರಾಘವೇಂದ್ರ ಮಂಟಪವನ್ನು ತ್ರೀ ಸ್ಟಾರ್ ಹೋಟೆಲ್ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡಲು ಆರಂಭವಾದ ಬೆನ್ನಲ್ಲೆ ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋನಲ್ಲಿ ಮಾತನಾಡಿರುವ ರಜನೀಕಾಂತ್, ‘ನನ್ನ ಹೆಸರಿನಲ್ಲಿರುವ, ನಾನು ನಿರ್ಮಿಸಿರುವ ಈ ರಾಘವೇಂದ್ರ ಮಂಟಪಂ’ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ಗೆ ಸೇರುತ್ತದೆ. ಅದಾಗಲೇ ನಾನು ಅದನ್ನು ನನ್ನ ಉಯಿಲಿನಲ್ಲಿ ನಮೂದಿಸಿದ್ದೀನಿ. ನನ್ನ ಜೀವನದ ಬಳಿಕ ಈ ಆಸ್ತಿಯು ರಾಘವೇಂದ್ರ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ಗೆ ಸೇರಲಿದೆ. ಆ ಮೂಲಕ ನನ್ನನ್ನು ಉಳಿಸಿ, ಬೆಳೆಸಿದ ತಮಿಳು ಜನರಿಗೆ ಈ ಹಣ ಬಳಕೆ ಆಗಲಿದೆ, ಒಂದು ಪೈಸೆ ಸಹ ನನ್ನ ಕುಟುಂಬಕ್ಕೆ ಸೇರುವುದಿಲ್ಲ’ ಎಂದಿದ್ದರು ರಜನೀಕಾಂತ್.
‘ಇದು ನಾನು ಕಷ್ಟಪಟ್ಟು ಗಳಿಸಿದ್ದು ಅಲ್ಲ, ನೀವು ಕಷ್ಟಪಟ್ಟು ಗಳಿಸಿದ್ದು. ನೀವುಗಳು ಕಷ್ಟಪಟ್ಟು ಪೈಸಾ, ಪೈಸಾ ಸೇರಿಸಿ ಸಿನಿಮಾ ನೋಡಿದ್ದರಿಂದಲೇ ನಾನು ಇದನ್ನೆಲ್ಲ ಗಳಿಸಲು ಸಾಧ್ಯವಾಯ್ತು. ನಾನು ಈಗಲೇ ಉಯಿಲು ಬರೆದಿದ್ದೇನೆ. ಒಳ್ಳೆಯದು ಮಾಡುವ ಆಲೋಚನೆ ಬಂದಾಗಲೇ ಅದನ್ನು ಮಾಡಿಬಿಡಬೇಕು, ತಡ ಮಾಡಬಾರದು ಎಂಬ ಕಾರಣಕ್ಕೆ ಹಾಗೆ ಮಾಡಿದ್ದೇನೆ. ಅಲ್ಲದೆ, ಉಯಿಲು ಯಾವಾಗ ಬೇಕಾದರೂ ಬದಲಾಯಿಸಬಹುದು. ಆದರೆ ಹೀಗೆ ಸಾರ್ವಜನಿಕ ಹೇಳಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ರಜನೀಕಾಂತ್ ಹೇಳಿದ್ದರು.
ಇದನ್ನೂ ಓದಿ: ತಮ್ಮದೇ ಸಿನಿಮಾದ ನಿರ್ದೇಶಕನ ಮೇಲೆ ರಜನೀಕಾಂತ್ ಮುನಿಸು?
ಆದರೆ ಇದೀಗ ಹರಿದಾಡುತ್ತಿರುವ ಕೆಲ ಸುದ್ದಿಗಳ ಪ್ರಕಾರ, ರಜನೀಕಾಂತ್ ಅವರು ಚಾರಿಟೇಬಲ್ ಟ್ರಸ್ಟ್ಗೆ ಕೊಡುವೆ ಎಂದು ಹೇಳಿದ್ದ ರಾಘವೇಂದ್ರ ಮಂಟಪಂ ಅನ್ನು ನೆಲಸಮಗೊಳಿಸಿ ಅಲ್ಲಿ ಮಾಲ್ ಹಾಗೂ ತ್ರಿ ಸ್ಟಾರ್ ಹೋಟೆಲ್ ನಿರ್ಮಾಣ ಮಾಡಲು ರಜನೀಕಾಂತ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ ರಜನೀಕಾಂತ್ ಅವರ ಹಳೆಯ ವಿಡಿಯೋ ಮತ್ತೊಮ್ಮೆ ವೈರಲ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




