ಕಾಲಿವುಡ್ನ ಖ್ಯಾತ ನಟ ಜಯಂ ರವಿ (Jayam Ravi) ಅವರು ಸಖತ್ ಬ್ಯುಸಿ ಆಗಿದ್ದಾರೆ. 2022 ಮತ್ತು 2023ರಲ್ಲಿ ಅವರು ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ಮಿಂಚಿದರು. 2024ರ ಆರಂಭದಲ್ಲೇ ಅವರ ‘ಸೈರನ್’ ಸಿನಿಮಾ ಬಿಡುಗಡೆ ಆಯಿತು. ಆ ಚಿತ್ರದ ಯಶಸ್ಸಿನ ಬಳಿಕ ಅವರು ಮತ್ತೆ ಕಾರ್ಯನಿರತರಾಗಿದ್ದಾರೆ. ಜಯಂ ರವಿ ಅವರ ಈಗ ‘ಜೀನಿ’ (Genie) ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ (Genie First Look) ಬಿಡುಗಡೆ ಆಗಿದೆ. ಅದರಲ್ಲಿ ಜಯಂ ರವಿ ಅವರ ಗೆಟಪ್ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
ಜಯಂ ರವಿ ನಟಿಸುತ್ತಿರುವ ‘ಜೀನಿ’ ಸಿನಿಮಾಗೆ ಅರ್ಜುನನ್ ಜೂನಿಯರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಅನಾವರಣ ಆಗಿದೆ. ‘ಜೀನಿ’ ಸಿನಿಮಾದಲ್ಲಿ ಜಯಂ ರವಿ ಅವರಿಗೆ ಸಂಪೂರ್ಣ ಹೊಸ ಅವತಾರ ಇರಲಿದೆ. ಯಾಕೆಂದರೆ, ಇದು ಒಂದು ಫ್ಯಾಂಟಸಿ ಸಿನಿಮಾ. ಅದಕ್ಕೆ ತಕ್ಕಂತೆಯೇ ಈ ಪೋಸ್ಟರ್ ಮೂಡಿಬಂದಿದೆ. ಇದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ‘ಪುಷ್ಪ 2’ ಬಳಿಕ ರಾಮ್ ಚರಣ್ಗೆ ಸುಕುಮಾರ್ ನಿರ್ದೇಶನ; ಇಲ್ಲಿದೆ ಸಿಹಿ ಸುದ್ದಿ
ಇದೇ ಮೊದಲ ಬಾರಿಗೆ ಜಯಂ ರವಿ ಅವರು ಫ್ಯಾಂಟಸಿ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಕಾರಣದಿಂದ ಅವರ ಅಭಿಮಾನಿಗಳಿಗೆ ಈ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ಸಿನಿಮಾದ ಕಾನ್ಸೆಪ್ಟ್ಗೆ ತಕ್ಕಂತೆ ಫಸ್ಟ್ ಲುಕ್ ಪೋಸ್ಟರ್ ಕೂಡ ಡಿಫರೆಂಟ್ ಆಗಿದೆ. ಸರಪಳಿಯಲ್ಲಿ ಜಯಂ ರವಿ ಬಂಧಿಯಾಗಿದ್ದಾರೆ. ಜುಟ್ಟು ಕಟ್ಟಿಕೊಂಡು ಸಂಪೂರ್ಣ ಬೇರೆಯದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಜಯಂ ರವಿ ಜೊತೆ ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್, ವಾಮಿಕಾ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಆಸ್ಕರ್ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ‘ಜೀನಿ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಹೇಶ್ ಮುತ್ತುಸ್ವಾಮಿ ಛಾಯಾಗ್ರಹಣ, ಪ್ರದೀಪ್ ಇ. ರಾಗವ್ ಅವರ ಸಂಕಲನ, ಯಾನಿಕ್ ಬೆನ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
First look of #Genie🧞
A movie which is unique and close to my heart 🤍
Get ready for the magical experience 💥Produced by @VelsFilmIntl Dr @IshariKGanesh
An @arrahman Musical
An #ArjunanJr. Magical @IamKrithiShetty @kalyanipriyan @GabbiWamiqa @YannickBen2 @PradeepERagav… pic.twitter.com/Fu8VizKcin— Jayam Ravi (@actor_jayamravi) March 24, 2024
‘ವೆಲ್ಸ್ ಫಿಲ್ಮ್ ಇಂಟರ್‌ನ್ಯಾಶನಲ್’ ಮೂಲಕ ಡಾ. ಇಶಾರಿ ಕೆ. ಗಣೇಶ್ ಅವರು ‘ಜೀನಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೇಕಡ 75 ಭಾಗ ಚಿತ್ರೀಕರಣ ಮುಕ್ತಾಯ ಆಗಿದೆ. ಕೇವಲ ಮೂರು ಸಾಂಗ್ಸ್ ಚಿತ್ರೀಕರಣವಷ್ಟೇ ಬಾಕಿ ಇದೆ. ಇನ್ನು 10 ದಿನದಲ್ಲಿ ಶೂಟಿಂಗ್ ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.