ಅಪಘಾತದ ಬಳಿಕ ಕಂಬ್ಯಾಕ್ ಮಾಡೋಕೆ ನಭಾ ನಟೇಶ್ ರೆಡಿ; ಸಿಕ್ಕಿದೆ ಎರಡು ಆಫರ್

ನಭಾ ನಟೇಶ್​ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರು ಸಾಕಷ್ಟು ಗಾಯಗೊಂಡಿದ್ದರು. ಅವರು ಸರ್ಜರಿಗೂ ಒಳಗಾಗಬೇಕಾಯಿತು. ಈಗ ಅವರು ರಿಕವರಿ ಆಗಿದ್ದಾರೆ. ಸಂಪೂರ್ಣ ಚೇತರಿಕೆ ಕಂಡಿರುವ ಅವರು ನಟನೆಗೆ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ.

ಅಪಘಾತದ ಬಳಿಕ ಕಂಬ್ಯಾಕ್ ಮಾಡೋಕೆ ನಭಾ ನಟೇಶ್ ರೆಡಿ; ಸಿಕ್ಕಿದೆ ಎರಡು ಆಫರ್
ನಭಾ
Follow us
ರಾಜೇಶ್ ದುಗ್ಗುಮನೆ
|

Updated on: Mar 26, 2024 | 7:28 AM

ನಟಿ ನಭಾ ನಟೇಶ್ (Nabha Natesh) ಅವರು ಕನ್ನಡದಲ್ಲಿ ಯಶಸ್ಸು ಕಂಡ ಬಳಿಕ ತೆಲುಗಿಗೆ ಹಾರಿದರು. ‘ಇಸ್ಮಾರ್ಟ್ ಶಂಕರ್’ ಚಿತ್ರದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿತ್ತು. ಇದಾದ ಬಳಿಕ ಅವರಿಗೆ ಅಂಥ ಯಶಸ್ಸು ಒಲಿಯಲಿಲ್ಲ. ಕೊನೆಗೆ ಅವರು ಸಿನಿಮಾ ಒಪ್ಪಿಕೊಳ್ಳುವುದನ್ನೇ ನಿಲ್ಲಿಸಿದ್ದರು. ಕೋಟಿ ಕೋಟಿ ಡಿಮ್ಯಾಂಡ್ ಮಾಡಿದ್ದರಿಂದ ನಭಾಗೆ ಆಫರ್ ಸಿಕ್ಕಿಲ್ಲ ಎಂದೆಲ್ಲ ಸುದ್ದಿ ಹರಡಿಸಲಾಯಿತು. ಆದರೆ, ಅಸಲಿಗೆ ಅವರು ಅಪಘಾತಕ್ಕೆ ಒಳಗಾಗಿದ್ದರು. ಈಗ ನಭಾ ನಟೇಶ್ ಸಂಪೂರ್ಣ ರಿಕವರ್ ಆಗಿದ್ದಾರೆ. ಅವರು ಕಂಬ್ಯಾಕ್ ಮಾಡೋಕೆ ರೆಡಿ ಆಗಿದ್ದಾರೆ.

ನಭಾ ನಟೇಶ್​ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರು ಸಾಕಷ್ಟು ಗಾಯಗೊಂಡಿದ್ದರು. ಅವರು ಸರ್ಜರಿಗೂ ಒಳಗಾಗಬೇಕಾಯಿತು. ಈಗ ಅವರು ರಿಕವರಿ ಆಗಿದ್ದಾರೆ. ಸಂಪೂರ್ಣ ಚೇತರಿಕೆ ಕಂಡಿರುವ ಅವರು ನಟನೆಗೆ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ನಿಖಿಲ್ ಸ್ವಯಂಬು ಅವರ ಸಿನಿಮಾದಲ್ಲಿ ನಭಾ ನಟೇಶ್ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಇವರ ಜೊತೆ ಸಂಯುಕ್ತಾ ಮೆನನ್ ಕೂಡ ಇರಲಿದ್ದಾರೆ. ಈ ಸಿನಿಮಾ ಅವರಿಗೆ ದೊಡ್ಡ ಮಟ್ಟದಲ್ಲಿ ಬೂಸ್ಟ್ ಕೊಡೋ ಸಾಧ್ಯತೆ ಇದೆ.

ನಭಾ ನಟೇಶ್ ಅವರು ಮಹಿಳಾ ಪ್ರಧಾನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಹನುಮಾನ್’ ನಿರ್ಮಾಪಕರು ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಭಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆರಡೂ ಸಿನಿಮಾಗಳು ನಭಾ ನಟೇಶ್​ಗೆ ಮೈಲೇಜ್ ನೀಡೋ ಸಾಧ್ಯತೆ ಇದೆ.

ಇದನ್ನೂ ಓದಿ: ಬಾರ್ಬಿ ಗರ್ಲ್​ ರೀತಿ ಪೋಸ್​ ನೀಡಿದ ಕನ್ನಡತಿ ನಭಾ ನಟೇಶ್​

ಚಿತ್ರರಂಗದಿಂದ ಸ್ವಲ್ಪ ದಿನ ದೂರ ಇದ್ದರೂ ಪ್ರೇಕ್ಷಕರು ಅವರನ್ನು ಮರೆತು ಬಿಡುವ ಸಾಧ್ಯತೆ ಇರುತ್ತದೆ. ಈ ರೀತಿ ಆಗಬಾರದು ಎನ್ನುವ ಕಾರಣದಿಂದಲೇ ನಭಾ ನಟೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಆಗಾಗ ಫೋಟೋ ಹಂಚಿಕೊಳ್ಳುತ್ತಲೇ ಇರುತ್ತಾರೆ. ನಭಾ ಕನ್ನಡ ಚಿತ್ರರಂಗಕ್ಕೂ ಕಂಬ್ಯಾಕ್ ಮಾಡಲಿ ಅನ್ನೋದು ಅನೇಕರ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ