AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀನಿ’ ಫಸ್ಟ್ ಲುಕ್: ಭಿನ್ನ ಅವತಾರದಲ್ಲಿ ಬಂದ ನಟ ಜಯಂ ರವಿ

ನಟ ಜಯಂ ರವಿ ಅವರು ಇದೇ ಮೊದಲ ಬಾರಿಗೆ ಫ್ಯಾಂಟಸಿ ಕಥಾಹಂದರದ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳ ಪಾಲಿಗೆ ಈ ಸಿನಿಮಾ ವಿಶೇಷವಾಗಲಿದೆ. ‘ಜೀನಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ಬಿಡುಗಡೆ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಲಿದೆ.

‘ಜೀನಿ’ ಫಸ್ಟ್ ಲುಕ್: ಭಿನ್ನ ಅವತಾರದಲ್ಲಿ ಬಂದ ನಟ ಜಯಂ ರವಿ
ಜೀನಿ ಸಿನಿಮಾ ಫಸ್ಟ್​ ಲುಕ್​
ಮದನ್​ ಕುಮಾರ್​
|

Updated on: Mar 25, 2024 | 10:43 PM

Share

ಕಾಲಿವುಡ್​ನ ಖ್ಯಾತ ನಟ ಜಯಂ ರವಿ (Jayam Ravi) ಅವರು ಸಖತ್​ ಬ್ಯುಸಿ ಆಗಿದ್ದಾರೆ. 2022 ಮತ್ತು 2023ರಲ್ಲಿ ಅವರು ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾದಲ್ಲಿ ಮಿಂಚಿದರು. 2024ರ ಆರಂಭದಲ್ಲೇ ಅವರ ‘ಸೈರನ್​’ ಸಿನಿಮಾ ಬಿಡುಗಡೆ ಆಯಿತು. ಆ ಚಿತ್ರದ ಯಶಸ್ಸಿನ ಬಳಿಕ ಅವರು ಮತ್ತೆ ಕಾರ್ಯನಿರತರಾಗಿದ್ದಾರೆ. ಜಯಂ ರವಿ ಅವರ ಈಗ ‘ಜೀನಿ’ (Genie) ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್​ (Genie First Look) ಬಿಡುಗಡೆ ಆಗಿದೆ. ಅದರಲ್ಲಿ ಜಯಂ ರವಿ ಅವರ ಗೆಟಪ್​ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಜಯಂ ರವಿ ನಟಿಸುತ್ತಿರುವ ‘ಜೀನಿ’ ಸಿನಿಮಾಗೆ ಅರ್ಜುನನ್ ಜೂನಿಯರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಅನಾವರಣ ಆಗಿದೆ. ‘ಜೀನಿ’ ಸಿನಿಮಾದಲ್ಲಿ ಜಯಂ ರವಿ ಅವರಿಗೆ ಸಂಪೂರ್ಣ ಹೊಸ ಅವತಾರ ಇರಲಿದೆ. ಯಾಕೆಂದರೆ, ಇದು ಒಂದು ಫ್ಯಾಂಟಸಿ ಸಿನಿಮಾ. ಅದಕ್ಕೆ ತಕ್ಕಂತೆಯೇ ಈ ಪೋಸ್ಟರ್​ ಮೂಡಿಬಂದಿದೆ. ಇದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ‘ಪುಷ್ಪ 2’ ಬಳಿಕ ರಾಮ್​ ಚರಣ್​ಗೆ ಸುಕುಮಾರ್​ ನಿರ್ದೇಶನ; ಇಲ್ಲಿದೆ ಸಿಹಿ ಸುದ್ದಿ

ಇದೇ ಮೊದಲ ಬಾರಿಗೆ ಜಯಂ ರವಿ ಅವರು ಫ್ಯಾಂಟಸಿ ಸಬ್ಜೆಕ್ಟ್​ ಆಯ್ಕೆ ಮಾಡಿಕೊಂಡಿದ್ದಾರೆ. ಆ ಕಾರಣದಿಂದ ಅವರ ಅಭಿಮಾನಿಗಳಿಗೆ ಈ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ಸಿನಿಮಾದ ಕಾನ್ಸೆಪ್ಟ್​ಗೆ ತಕ್ಕಂತೆ ಫಸ್ಟ್ ಲುಕ್ ಪೋಸ್ಟರ್​ ಕೂಡ ಡಿಫರೆಂಟ್​ ಆಗಿದೆ. ಸರಪಳಿಯಲ್ಲಿ ಜಯಂ ರವಿ ಬಂಧಿಯಾಗಿದ್ದಾರೆ. ಜುಟ್ಟು ಕಟ್ಟಿಕೊಂಡು ಸಂಪೂರ್ಣ ಬೇರೆಯದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಜಯಂ ರವಿ ಜೊತೆ ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್, ವಾಮಿಕಾ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಆಸ್ಕರ್ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್ ಅವರು ‘ಜೀನಿ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಹೇಶ್ ಮುತ್ತುಸ್ವಾಮಿ ಛಾಯಾಗ್ರಹಣ, ಪ್ರದೀಪ್ ಇ. ರಾಗವ್ ಅವರ ಸಂಕಲನ, ಯಾನಿಕ್ ಬೆನ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

‘ವೆಲ್ಸ್ ಫಿಲ್ಮ್ ಇಂಟರ್‌ನ್ಯಾಶನಲ್‌’ ಮೂಲಕ ಡಾ. ಇಶಾರಿ ಕೆ. ಗಣೇಶ್ ಅವರು ‘ಜೀನಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೇಕಡ 75 ಭಾಗ ಚಿತ್ರೀಕರಣ ಮುಕ್ತಾಯ ಆಗಿದೆ. ಕೇವಲ ಮೂರು ಸಾಂಗ್ಸ್​ ಚಿತ್ರೀಕರಣವಷ್ಟೇ ಬಾಕಿ ಇದೆ. ಇನ್ನು 10 ದಿನದಲ್ಲಿ ಶೂಟಿಂಗ್​ ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ