
ಟಾಲಿವುಡ್ ಸ್ಟಾರ್ ನಟ ಜ್ಯೂ. ಎನ್ಟಿಆರ್ಗೆ ಇಂದು (ಮೇ 20) ಜನ್ಮದಿನದ ಸಂಭ್ರಮ. ಅವರು ಇಂದು 38ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವಿಶೇಷ ದಿನದಂದು ಅಭಿಮಾನಿಗಳು ಹಾಗೂ ಚಿತ್ರತಂಡದ ಕಡೆಯಿಂದ ಅವರಿಗೆ ದೊಡ್ಡ ಗಿಫ್ಟ್ ಸಿಗುತ್ತಿದೆ. ಇನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
ಕೋಮರಾಮ ಭೀಮನ ಹೊಸ ಅವತಾರ
ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಕೋಮರಾಮ ಭೀಮನಾಗಿ ಜ್ಯೂ. ಎನ್ಟಿಆರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಹೊಸ ಲುಕ್ ಇಂದು ರಿಲೀಸ್ ಆಗಲಿದೆ. ಸ್ಟಾರ್ಗಳ ಜನ್ಮದಿನ ಎಂದರೆ ಚಿತ್ರತಂಡದಿಂದ ಅಭಿಮಾನಿಗಳಿಗೆ ಉಡುಗರೆ ನೀಡುವ ಸಂಪ್ರದಾಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ಆರ್ಆರ್ಆರ್ ತಂಡ ಕೂಡ ಮುಂದುವರಿಸಿಕೊಂಡು ಹೋಗುತ್ತಿದೆ. ಹೀಗಾಗಿ, ಅಭಿಮಾನಿಗಳು ಈ ಬಗ್ಗೆ ಸಾಕಷ್ಟು ನಿರೀಕ್ಷ ಇಟ್ಟುಕೊಂಡಿದ್ದಾರೆ.
ಅಭಿಮಾನಿಗಳಿಂದ ಕಾಮನ್ ಡಿಪಿ ಅಭಿಯಾನ
ಅಭಿಮಾನಿಗಳು ತಮ್ಮ ನೆಚ್ಚಿನ ಜನ್ಮದಿನವನ್ನು ಹಬ್ಬದಂತೆ ಆಚರಣೆ ಮಾಡುತ್ತಾರೆ. ಜ್ಯೂ. ಎನ್ಟಿಆರ್ಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರು 38ನೇ ಜನ್ಮದಿನದ ಅಂಗವಾಗಿ ಕಾಮನ್ ಡಿಪಿ ಅಭಿಯಾನ ಆರಂಭವಾಗಿದೆ. ಕಾಮನ್ ಡಿಪಿ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಇಂದು ಅವರ ಅಭಿಮಾನಿಗಳು ಈ ಫೋಟೋವನ್ನು ಡಿಪಿಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.
ಸಂಭ್ರಮಾಚರಣೆಗಿಲ್ಲ ಅವಕಾಶ
ಪ್ರತಿ ಬಾರಿ ಜ್ಯೂ. ಎನ್ಟಿಆರ್ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಕಟೌಟ್ ನಿಲ್ಲಿಸಿ, ಹಾಲಿನ ಅಭಿಷೇಕ ಮಾಡುತ್ತಿದ್ದರು. ಕೆಲವರು ಅನ್ನದಾನ ಹಾಗೂ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. ಆದರೆ, ಕೊವಿಡ್ನಿಂದ ಇದೆಲ್ಲವಕ್ಕೂ ಬ್ರೇಕ್ ಬಿದ್ದಿದೆ. ಹೀಗಾಗಿ, ಜನ್ಮದಿನದ ಅಂಗವಾಗಿ ಯಾವುದೇ ಸಂಭ್ರಮಾಚರಣೆ ಇರುವುದಿಲ್ಲ. ಕಳೆದ ಬಾರಿಯೂ ಈ ಸಂದರ್ಭದಲ್ಲಿ ಕೊವಿಡ್ ಅಧಿಕವಾಗಿತ್ತು. ಹೀಗಾಗಿ, ಬರ್ತ್ಡೇ ಆಚರಣೆಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಅದು ಮರುಕಳಿಸಿದೆ.
ಶುಭಾಶಯಗಳ ಮಹಾಪೂರ
ಜ್ಯೂ. ಎನ್ಟಿಆರ್ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅನೇಕ ಸ್ಟಾರ್ಗಳು ಜ್ಯೂ. ಎನ್ಟಿಆರ್ಗೆ ವಿಶ್ ಮಾಡಿದ್ದಾರೆ. ಇನ್ನು, ಅವರ ಫೋಟೋಗಳನ್ನು ಹಾಕಿಕೊಂಡು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲೇ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
Published On - 7:25 am, Thu, 20 May 21