Jr NTR: ಜೂ ಎನ್​ಟಿಆರ್ ತೊಟ್ಟಿರುವ ಶರ್ಟಿನ ಬೆಲೆ ಎಷ್ಟು? ವಿಶೇಷತೆಗಳೇನು?

Jr NTR: ಈ ಚಿತ್ರದಲ್ಲಿ ಜೂ ಎನ್​ಟಿಆರ್ ಧರಿಸಿರುವ ಟಿ-ಶರ್ಟ್ ನೋಡಲು ಸರಳವಾಗಿ ಕಂಡರು ಬೆಲೆ ಮಾತ್ರ ಬಹಳ ದುಬಾರಿ.

Jr NTR: ಜೂ ಎನ್​ಟಿಆರ್ ತೊಟ್ಟಿರುವ ಶರ್ಟಿನ ಬೆಲೆ ಎಷ್ಟು? ವಿಶೇಷತೆಗಳೇನು?
ಜೂ ಎನ್​ಟಿಆರ್

Updated on: Apr 18, 2023 | 6:22 PM

ಸಿನಿಮಾ ಸ್ಟಾರ್​ಗಳದ್ದು (Movie Star) ಐಶಾರಾಮಿ ಜೀವನ. ದುಬಾರಿ ವಿದೇಶಿ ಕಾರುಗಳು, ಐಶಾರಾಮಿ ವಿಶಾಲ ಮನೆಗಳು, ಕೈಗೊಬ್ಬ-ಕಾಲಿಗೊಬ್ಬರು ಆಳುಗಳು, ಸ್ಟಾರ್​ ನಟ-ನಟಿಯರು ತೊಡುವ ಬಟ್ಟೆಗಳು (Fashion) ಸಹ ಭಾರಿ ದೊಡ್ಡ ಮೊತ್ತದವೇ ಆಗಿರುತ್ತವೆ. ವಿಶೇಷ ಕಾರ್ಯಕ್ರಮಗಳಿಗಲ್ಲದೆ ಸಾಮಾನ್ಯ ಸಂದರ್ಭದಲ್ಲಿ ಸಹ ಸ್ಟಾರ್ ನಟ-ನಟಿಯರು ತೊಡುವ ಬಟ್ಟೆಗಳಿಗೂ ಸಾವಿರಾರು ರುಪಾಯಿ ಹಣ ನೀಡಿರುತ್ತಾರೆ. ತೆಲುಗಿನ ಸ್ಟಾರ್ (Tollywood Star) ನಟ ಜೂ ಎನ್​ಟಿಆರ್ (Jr NTR) ಸಹ ಇದಕ್ಕೆ ಹೊರತಲ್ಲ.

ಜೂ ಎನ್​ಟಿಆರ್ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಿನಿಮಾದಲ್ಲಿ ಅವರೆದುರು ವಿಲನ್ ಆಗಿ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅನ್ನು ಖುದ್ದಾಗಿ ಸಿನಿಮಾ ಸೆಟ್​ಗೆ ಜೂ ಎನ್​ಟಿಆರ್ ಸ್ವಾಗತಿಸಿದ್ದು, ಸೈಫ್ ಅಲಿ ಖಾನ್ ಹಾಗೂ ಜೂ ಎನ್​ಟಿಆರ್ ಒಟ್ಟಿಗಿರುವ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಆ ಚಿತ್ರಗಳಲ್ಲಿ ಜೂ ಎನ್​ಟಿಆರ್ ತೊಟ್ಟಿರುವ ಟಿ-ಶರ್ಟ್ ಬಹಳ ಗಮನ ಸೆಳೆದಿದೆ.

ಕಪ್ಪು ಬಣ್ಣದ ಹುಡಿ ಮಾದರಿಯ ಟಿ ಶರ್ಟ್ ಅನ್ನು ಜೂ ಎನ್​ಟಿಆರ್ ಧರಿಸಿದ್ದಾರೆ. ಟಿ-ಶರ್ಟ್​ನ ಒಂದು ಭಾಗದಲ್ಲಿ ಮಾತ್ರವೇ ಡಿಸೈನ್ ಇದೆ. ನೋಡಲು ಸುಮಾರು 500 ರಿಂದ 1000 ಟಿ-ಶರ್ಟ್ ಇರಬಹುದೇನೋ ಎನಿಸುವಂತೆ ಕಾಣುತ್ತದೆಯಾದರೂ ಈ ಟಿ-ಶರ್ಟ್​ನ ಬೆಲೆ ಬರೋಬ್ಬರಿ 25,000 ರುಪಾಯಿಗಳು!

ಚಿತ್ರದಲ್ಲಿ ಜೂ ಎನ್​ಟಿಆರ್ ಧರಿಸಿರುವ ಟಿ-ಶರ್ಟ್ ಪೆರಿನಿಯಾ ಹೆಸರಿನ ಸಂಸ್ಥೆಯದ್ದು. ಆನ್​ಲೈನ್ ಮಳಿಗೆ ಹೊಂದಿರುವ ಪೆರಿನಿಯಾ ಕೇವಲ ಡಿಸೈನರ್ ಬಟ್ಟೆಗಳನ್ನಷ್ಟೆ ಮಾರಾಟ ಮಾಡುತ್ತದೆ. ಜೂ ಎನ್​ಟಿಆರ್ ಧರಿಸಿರುವುದು ಇದೇ ಸಂಸ್ಥೆಯ ಡಿಸೈನರ್ ಟಿ-ಶರ್ಟ್, ಇದರ ಮೇಲಿರುವ ಡಿಸೈನ್ ಅನ್ನು ಯಾವುದೇ ಯಂತ್ರಗಳನ್ನು ಬಳಸದೆ ಕೇವಲ ಕೈಯಿಂದ ಮಾಡಿರುವುದು. ಹಾಗಾಗಿಯೇ ಈ ಟಿ-ಶರ್ಟ್​ಗೆ ಅಷ್ಟು ದುಬಾರಿ ಬೆಲೆ.

ಶೇರ್ವಾನಿ, ಬ್ಲೇಜರ್, ಜಾಕೆಟ್, ಶರ್ಟ್, ಸಮ್ಮರ್ ಶರ್ಟ್ ಇನ್ನೂ ಹಲವು ಬಗೆಯ ಪುರುಷರ ಉಡುಗೆಗಳನ್ನು ಪೆರಿನಿಯಾ ಮಾರಾಟ ಮಾಡುತ್ತದೆ. ಈ ವೆಬ್​ಸೈಟ್​ನಲ್ಲಿ ಪುರುಷರ ಮಾತ್ರವೇ ಅಲ್ಲದೆ ಮಹಿಳೆಯರ ಉಡುಪು ಹಾಗೂ ಆಭರಣಗಳ ಮಾರಾಟವೂ ಮಾಡಲಾಗುತ್ತದೆ. ಆದರೆ ಕೇವಲ ಜನಪ್ರಿಯ ಡಿಸೈನರ್​ಗಳ ಉಡುಗೆಗಳನ್ನಷ್ಟೆ ವೆಬ್​ಸೈಟ್​ನಲ್ಲಿ ಮಾರಾಟ ಮಾಡಲಾಗುತ್ತದೆ ಹಾಗೂ ಒಂದೊಂದು ಬಟ್ಟೆಯ ಕೆಲವೇ ಪೀಸ್​ಗಳನ್ನಷ್ಟೆ ಮಾರಾಟಕ್ಕೆ ಇಡಲಾಗಿರುತ್ತದೆ. ಹಾಗಾಗಿ ಅತ್ಯಂತ ಬೇಗ ಬಟ್ಟೆಗಳು ಮಾರಾಟವಾಗುತ್ತವೆ.

ಜೂ ಎನ್​ಟಿಆರ್ ಸರಳವಾಗಿ ಕಾಣುವ ಆದರೆ ಸರಳವಾದ ಡಿಸೈನ್​ಗಳನ್ನು ಹೊಂದಿರುವ ಬಟ್ಟೆಗಳನ್ನು ತೊಡಲು ಇಷ್ಟಪಡುತ್ತಾರೆ. ಆಸ್ಕರ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಚಿನ್ನದ ಬಣ್ಣದ ಸಿಂಹದ ಮುಖವುಳ್ಳ ಕಪ್ಪು ಬಣ್ಣದ ಬ್ಲೇಜರ್ ಧರಿಸಿದ್ದರು ಜೂ ಎನ್​ಟಿಆರ್. ಅದೂ ಸಹ ಫ್ಯಾಷನ್ ಪ್ರಿಯರ ಗಮನ ಸೆಳೆದಿತ್ತು. ಇದೀಗ ಈ ಕಪ್ಪು ಬಣ್ಣದ ಟಿ-ಶರ್ಟ್ ಸಹ ಸಖತ್ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us