ಜೂ ಎನ್​ಟಿಆರ್ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್

Jr NTR: ಬಾಲಿವುಡ್ ಸ್ಟಾರ್ ಸಂಜಯ್ ದತ್​ಗೆ ದಕ್ಷಿಣದ ಚಿತ್ರರಂಗದಲ್ಲಿ ಪ್ರತ್ಯೇಕ ಮಾರುಕಟ್ಟೆ ಸೃಷ್ಟಿಯಾಗಿರುವ ಬೆನ್ನಲ್ಲೆ, ಇದೀಗ ಸೈಫ್ ಅಲಿ ಖಾನ್ ಸಹ ದಕ್ಷಿಣದಲ್ಲಿ ಸಕ್ರಿಯವಾಗುವ ಮುನ್ಸೂಚನೆ ನೀಡಿದ್ದಾರೆ. ಜೂ ಎನ್​ಟಿಆರ್ ಜೊತೆ ಸಿನಿಮಾ ಒಂದರಲ್ಲಿ ವಿಲನ್ ಆಗಿ ಸೈಫ್ ನಟಿಸುತ್ತಿದ್ದಾರೆ.

ಜೂ ಎನ್​ಟಿಆರ್ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್
ಜೂ ಎನ್​ಟಿಆರ್-ಸೈಫ್ ಅಲಿ ಖಾನ್
Follow us
ಮಂಜುನಾಥ ಸಿ.
|

Updated on: Apr 18, 2023 | 3:08 PM

ಪ್ಯಾನ್ ಇಂಡಿಯಾ (Pan India) ಸಿನಿಮಾದ ಹವಾ ಪ್ರಾರಂಭವಾದ ಬಳಿಕ ವಿವಿಧ ಸಿನಿಮಾ ರಂಗಗಳ ನಡುವಿನ ಗಡಿಗಳು ತೆಳುವಾಗಿಬಿಟ್ಟಿವೆ. ದಕ್ಷಿಣ ಭಾರತದ ನಟ-ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ, ಬಾಲಿವುಡ್​ನ ನಟ-ನಟಿಯರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದು ತೀರ ಸಾಮಾನ್ಯವಾಗಿದೆ. ದಕ್ಷಿಣ ಭಾರತದ ಸಿನಿಮಾಗಳಿಗೆ ದೊಡ್ಡ ಬೇಡಿಕೆ ಸೃಷ್ಟಿಯಾಗಿರುವ ಬೆನ್ನಲ್ಲೆ ಬಾಲಿವುಡ್​ನ ಸ್ಟಾರ್ ನಟರು ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ಹೆಚ್ಚಿನ ಉತ್ಸುಕತೆ ತೋರುತ್ತಿದ್ದಾರೆ. ಇದೀಗ ಬಾಲಿವುಡ್​ನ ಸ್ಟಾರ್ ನಟ ಸೈಫ್ ಅಲಿ ಖಾನ್ (Saif Ali Khan), ದಕ್ಷಿಣದ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಆರ್​ಆರ್​ಆರ್ ಸಿನಿಮಾದಿಂದಾಗಿ ಗ್ಲೋಬಲ್ ಸ್ಟಾರ್ ಆಗಿರುವ ಜೂ ಎನ್​ಟಿಆರ್ (Jr NTR) ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದು ಸಿನಿಮಾದ ನಾಯಕಿ ಪಾತ್ರಕ್ಕೆ ಬಾಲಿವುಡ್​ನ ಬೆಡಗಿ ಜಾಹ್ನವಿಯನ್ನು ಕರೆತರಲಾಗಿದೆ. ಭಾರಿ ದೊಡ್ಡ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾದ ವಿಲನ್ ಪಾತ್ರದಲ್ಲಿ ಬಾಲಿವುಡ್ ಸ್ಟಾರ್​ರಾದ ಸೈಫ್ ಅಲಿ ಖಾನ್ ನಟಿಸಲಿದ್ದಾರೆ.

ಸೈಫ್ ಅಲಿ ಖಾನ್ ಅವರದ್ದು ಸಿನಿಮಾದ ಮುಖ್ಯ ವಿಲನ್ ಪಾತ್ರವಾಗಿರಲಿದ್ದು, ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸೈಫ್ ಅಲಿ ಖಾನ್ ಆಗಮಿಸಿದ್ದಾರೆ. ಸೆಟ್​ನಲ್ಲಿ ಸೈಫ್ ಅಲಿ ಖಾನ್ ಹಾಗೂ ಜೂ ಎನ್​ಟಿಆರ್ ಒಟ್ಟಿಗೆ ಇರುವ ಚಿತ್ರಗಳು ಇದೀಗ ವೈರಲ್ ಆಗಿದ್ದು, ದಕ್ಷಿಣ ಭಾರತದ ನಾಯಕ ನಟನಿಗೆ ಸೈಫ್ ಅಲಿ ಖಾನ್ ಎರಡನೇ ಬಾರಿ ವಿಲನ್ ಆಗಿ ನಟಿಸುತ್ತಿದ್ದಾರೆ.

ಜೂ ಎನ್​ಟಿಆರ್​ ಅವರ ಹೊಸ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದು, ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ. ಹಾಲಿವುಡ್​ನ ಜನಪ್ರಿಯ ಆಕ್ಷನ್ ಸಿನಿಮಾಗಳಿಗೆ ಆಕ್ಷನ್ ನಿರ್ದೇಶನ ಮಾಡಿರುವ ಕೆನ್ನಿ ಬೇಟ್ಸ್ ಈ ಸಿನಿಮಾದ ಆಕ್ಷನ್ ದೃಶ್ಯಗಳನ್ನು ನಿರ್ದೇಶನ ಮಾಡಲಿದ್ದಾರೆ. ಇನ್ನು ಬಾಲಿವುಡ್ ನಟಿ ಜಾಹ್ನವಿಯನ್ನು ಈ ಸಿನಿಮಾದ ನಾಯಕಿ ಪಾತ್ರಕ್ಕೆ ಹಾಕಿಕೊಳ್ಳಲಾಗಿದ್ದು, ಇದೀಗ ದುಬಾರಿ ನಟ ಸೈಫ್ ಅಲಿ ಖಾನ್ ಅನ್ನು ವಿಲನ್ ಪಾತ್ರಕ್ಕೆ ಚಿತ್ರೀಕರಣ ಆರಂಭಿಸಿದ್ದಾರೆ.

ಇದನ್ನೂ ಓದಿ: Ibrahim Ali Khan: ಬಾಲಿವುಡ್ ಪ್ರವೇಶಿಸಲು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಸಿದ್ಧ; ಆದರೆ ನಟನಾಗಿ ಅಲ್ಲ

ಸೈಫ್ ಅಲಿ ಖಾನ್ ಕೆಲವು ಸಿನಿಮಾಗಳಲ್ಲಿ ಈಗಾಗಲೇ ವಿಲನ್ ಆಗಿ ನಟಿಸಿದ್ದಾರೆ. ಪ್ರಭಾಸ್ ನಟಿಸಿರುವ ಆದಿಪುರುಷ್ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ್ದಾರೆ ಸೈಫ್ ಅಲಿ ಖಾನ್. ಆ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಬಾಲಿವುಡ್​ನ ಹಲವು ಸ್ಟಾರ್ ನಟರು ದಕ್ಷಿಣದ ಕಡೆ ಮುಖ ಮಾಡುತ್ತಿದ್ದಾರೆ. ಸಂಜಯ್ ದತ್ ಈಗಾಗಲೇ ಕೆಜಿಎಫ್ 2 ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಧ್ರುವ ಸರ್ಜಾ ನಟನೆಯ ಕೆಡಿ ಹಾಗೂ ತಮಿಳಿನಲ್ಲಿ ವಿಜಯ್ ನಟನೆಯ ಲಿಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್, ಚಿರಂಜೀವಿ ಜೊತೆ ತೆಲುಗು ಸಿನಿಮಾ ಗಾಡ್​ಫಾದರ್​ನಲ್ಲಿ ಕಾಣಿಸಿಕೊಂಡಿದ್ದರು. ಅಜಯ್ ದೇವಗನ್, ಆರ್​ಆರ್​ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಜಾನ್ ಅಬ್ರಹಾಂ ಸಹ ದಕ್ಷಿಣದ ಸಿನಿಮಾ ಒಂದರಲ್ಲಿ ನಟಿಸುವ ಸಾಧ್ಯತೆ ಇದೆ. ನವಾಜುದ್ಧೀನ್ ಸಿದ್ಧಿಕಿ ಇನ್ನೂ ಕೆಲವು ನಟರು ದಕ್ಷಿಣದ ಸಿನಿಮಾಗಳಲ್ಲಿ ಮುಂದಿನ ದಿನಗಳಲ್ಲಿ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ