ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಾಜಲ್​; ಅಬ್ಬಾ ಅವರು ಮಾಡಿದ ಸಹಾಯ ಮರೆಯಂಗಿಲ್ಲ!

ಶನಿವಾರ (ಏಪ್ರಿಲ್​ 3) ಹೈದರಾಬಾದಿನ ಎಂ ಫಾರ್ಮಸಿ ವಿದ್ಯಾರ್ಥಿನಿ ಸುಮಾ ಟ್ವೀಟ್​ ಒಂದನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಈ ಕಷ್ಟಕ್ಕೆ ಕಾಜಲ್​ ಸ್ಪಂದಿಸಿದ್ದಾರೆ.

ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಾಜಲ್​; ಅಬ್ಬಾ ಅವರು ಮಾಡಿದ ಸಹಾಯ ಮರೆಯಂಗಿಲ್ಲ!
ಕಾಜಲ್​ ಅಗರ್​ವಾಲ್​​
Edited By:

Updated on: Apr 04, 2021 | 4:34 PM

ಅನೇಕ ಸ್ಟಾರ್​ ನಟ-ನಟಿಯರು ಅಭಿಮಾನಿಗಳಿಗೆ ಸಹಾಯ ಮಾಡುತ್ತಾರೆ. ಅಭಿಮಾನಿಗಳು ಟ್ವಿಟರ್​ನಲ್ಲಿ ಇಡುವ ಬೇಡಿಕೆಗೆ ಸ್ಟಾರ್​ಗಳು ಸ್ಪಂದಿಸಿದ ಉದಾಹರಣೆ ಇದೆ. ಇದಕ್ಕೆ ಈಗ ತಾಜಾ ಉದಾಹರಣೆ ಕಾಜಲ್​ ಅಗರ್​ವಾಲ್​​. ಕಷ್ಟ ಎಂದು ಹೇಳಿಕೊಂಡ ಅಭಿಮಾನಿಗೆ ಹಿಂದು-ಮುಂದು ನೋಡದೇ ಕಾಜಲ್​ ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಶನಿವಾರ (ಏಪ್ರಿಲ್​ 3) ಹೈದರಾಬಾದಿನ ಎಂ ಫಾರ್ಮಸಿ ವಿದ್ಯಾರ್ಥಿನಿ ಸುಮಾ ಎಂಬುವವರು ಟ್ವೀಟ್​ ಒಂದನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ ಅವರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸುಮಾ ಪಾರ್ಟ್​ ಟೈಮ್​ ಕೆಲಸ ಮಾಡುತ್ತಲೇ ಕಾಲೇಜಿಗೂ ಹೋಗುತ್ತಿದ್ದರು. ಆದರೆ, ಇತ್ತೀಚೆಗೆ ಅವರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಕಾಲೇಜ್​ನ ಫೀಸ್​ ತುಂಬಲು ಅವರ ಬಳಿ ಸಾಧ್ಯವಾಗಿಯೇ ಇಲ್ಲ.

ಕಾಲೇಜ್​ ಸೇರಬೇಕು ಎಂದರೆ 83,000 ಸಾವಿರ ರೂಪಾಯಿ ಹಣ ಪಾವತಿಸಬೇಕಿತ್ತು. ಇದಕ್ಕೆ ಸಹಾಯ ಮಾಡುವಂತೆ ಟ್ವಿಟರ್​ನಲ್ಲಿ ಕಾಜಲ್​ ಬಳಿ ಸುಮಾ ಮನವಿ ಮಾಡಿದ್ದಾರೆ. ಇದಕ್ಕೆ ಕಾಜಲ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವೀಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಕಾಜಲ್​ ವಕ್ತಾರರು ಸುಮಾ ಅವರನ್ನು ಕಾಂಟ್ಯಾಕ್ಟ್ ಮಾಡಿದ್ದಾರೆ. ಅವರ ಬ್ಯಾಂಕ್​ ಖಾತೆ ಮಾಹಿತಿ ಪಡೆದು ಒಂದು ಲಕ್ಷ ರೂಪಾಯಿ ಹಣ ಪಾವತಿ ಮಾಡಿದ್ದಾರೆ.

ಈ ವಿಚಾರ ತಿಳಿದು ಹುಡುಗಿ ಕಡೆಯವರು ಸಖತ್​ ಖುಷಿ ಆಗಿದ್ದಾರೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲ, ಕಾಜಲ್​ ಮಾಡಿದ ಸಹಾಯಕ್ಕೆ ಎಲ್ಲರೂ ತಲೆ ಬಾಗಿದ್ದಾರೆ.

ಕಳೆದ ವರ್ಷ ಕಾಜಲ್​ ಅಗರ್​ವಾಲ್​ ಹಸಮಣೆ ಏರಿದ್ದರು. ಇದಾದ ನಂತರ ಅವರು ಹನಿಮೂನ್​ಗೂ ತೆರಳಿದ್ದರು. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: 30 ವರ್ಷಗಳಿಂದಲೂ ಶ್ವಾಸನಾಳದ ಅಸ್ತಮಾದಿಂದ ಬಳಲುತ್ತಿದ್ದಾರೆ ಖ್ಯಾತ ನಟಿ ಕಾಜಲ್​ ಅಗರ್​ವಾಲ್

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us