ದಕ್ಷಿಣ ಭಾರತದ ಸಿನಿಮಾಗಳಿಗೆ (South Indian Cinema) ದೊಡ್ಡ ಮಾರುಕಟ್ಟೆ ನಿರ್ಮಾಣ ಆಗಿದೆ. ಬಾಲಿವುಡ್ ಚಿತ್ರಗಳ ಎದುರಿನಲ್ಲಿ ಸೌತ್ ಸಿನಿಮಾಗಳು ಜಯಭೇರಿ ಬಾರಿಸುತ್ತಿವೆ. ಈ ಸಂದರ್ಭದಲ್ಲಿ ಇಲ್ಲಿನ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಬಹುಕೋಟಿ ರೂಪಾಯಿ ಬಂಡವಾಳ ಹೂಡಲು ಧೈರ್ಯ ತೋರಿಸುತ್ತಿವೆ. ನಟ ಕಮಲ್ ಹಾಸನ್ (Kamal Haasan) ಅವರು ಅಭಿನಯದ ಜೊತೆಗೆ ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರ ಒಡೆತನದ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಮೂಲಕ ಸಾಕಷ್ಟು ಅತ್ಯುತ್ತಮ ಸಿನಿಮಾಗಳು ಮೂಡಿಬಂದಿವೆ. ಈಗ ಆ ಬ್ಯಾನರ್ನಿಂದ ಹೊಸದೊಂದು ಚಿತ್ರ ನಿರ್ಮಾಣ ಆಗಲಿದ್ದು, ಅದಕ್ಕೆ 100 ಕೋಟಿ ರೂಪಾಯಿ ಬಂಡವಾಳ ಹೂಡಲು ಕಮಲ್ ಹಾಸನ್ ಸಜ್ಜಾಗಿದ್ದಾರೆ ಎಂದು ಸುದ್ದಿ ಆಗಿದೆ. ಆ ಚಿತ್ರಕ್ಕೆ ಸಿಂಬು (Simbu) ಹೀರೋ ಎಂದು ಹೇಳಲಾಗುತ್ತಿದೆ.
2022ರಲ್ಲಿ ಕಮಲ್ ಹಾಸನ್ ಅವರು ಭರ್ಜರಿ ಗೆಲುವು ಪಡೆದರು. ಅವರು ನಟಿಸಿದ ‘ವಿಕ್ರಮ್’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು. ಲೋಕೇಶ್ ಕನಗರಾಜ್ ನಿರ್ದೇಶನದ ಆ ಚಿತ್ರಕ್ಕೆ ಬಂಡವಾಳ ಹೂಡಿದ್ದು ಕಮಲ್ ಹಾಸನ್. ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಂಡ ‘ವಿಕ್ರಮ್’ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಇದರಿಂದ ಕಮಲ್ ಹಾಸನ್ ಅವರಿಗೆ ಸಖತ್ ಲಾಭ ಆಯಿತು.
ಇದನ್ನೂ ಓದಿ: 36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್ ಹಾಸನ್-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
‘ವಿಕ್ರಮ್’ ಚಿತ್ರದಿಂದ ಕಾಸು ಮಾಡಿಕೊಂಡಿರುವ ಕಮಲ್ ಹಾಸನ್ ಅವರು ನಿರ್ಮಾಪಕನಾಗಿ ದೊಡ್ಡ ಸಾಹಸ ಮಾಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಸಿಂಬು ನಟಿಸಲಿರುವ ಹೊಸ ಚಿತ್ರಕ್ಕೆ ಕಮಲ್ ಹಾಸನ್ ಅವರು 100 ಕೋಟಿ ರೂಪಾಯಿ ಬಂಡವಾಳ ಹೂಡಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: Kamal Haasan: ‘ನಿಮ್ಮ ಮುಂದಿನ ಚಿತ್ರದಿಂದ ಕಾಂತಾರ ಸಿನಿಮಾ ದಾಖಲೆ ಮುರಿಯಿರಿ’; ರಿಷಬ್ ಶೆಟ್ಟಿಗೆ ಕಮಲ್ ಹಾಸನ್ ಸಲಹೆ
ಸದ್ಯ ಸಿಂಬು ಅವರು ಒಳ್ಳೆಯ ಫಾರ್ಮ್ ಕಾಪಾಡಿಕೊಂಡಿದ್ದಾರೆ. ‘ಮಾನಾಡು’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಮಾರ್ಕೆಟ್ ದೊಡ್ಡದಾಗಿದೆ. ಅಲ್ಲದೇ, ಕಾಲಿವುಡ್ನಲ್ಲಿ ಹಲವು ವರ್ಷಗಳ ಅನುಭವ ಅವರಿಗೆ ಇದೆ. ತಮ್ಮದೇ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. ಅವರ ಜೊತೆ ಕಮಲ್ ಹಾಸನ್ ಕೈ ಜೋಡಿಸುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: Kamal Haasan: ‘ಕಾಂತಾರ’ ಚಿತ್ರ ನೋಡಿ ಕನ್ನಡ ಇಂಡಸ್ಟ್ರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಮಲ್ ಹಾಸನ್
ಸಿಂಬು ನಟಿಸಲಿರುವ ಈ ಸಿನಿಮಾ 2023ರಲ್ಲೇ ಸೆಟ್ಟೇರಲಿದೆ. ಐತಿಹಾಸಿಕ ಕಥಾಹಂದರದ ಈ ಚಿತ್ರದಲ್ಲಿ ಸಿಂಬು ಅವರು ದ್ವಿಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿ ಕೂಡ ಇದೆ. 100 ಕೋಟಿ ರೂಪಾಯಿ ಬಜೆಟ್ ಹಾಕುವುದು ನಿಜವೇ ಹೌದಾದರೆ ಸಿಂಬು ವೃತ್ತಿಜೀವನದ ಅತಿ ದೊಡ್ಡ ಸಿನಿಮಾ ಇದಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:31 pm, Sun, 5 March 23