AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದ ಗಾಯಕಿ ಮೈಥಿಲಿ ಠಾಕೂರ್ ಟ್ರೋಲ್; ಬೆಂಬಲಕ್ಕೆ ನಿಂತ ಸಂಸದೆ ಕಂಗನಾ ರಣಾವತ್

ಮುಂಬೈನ ಲಾಲ್‌ಬಾಗ್‌ಚಾ ರಾಜ ಗಣಪತಿ ದರ್ಶನಕ್ಕೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಆಗಮಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಯುವ ಶಾಸಕಿ ಮೈಥಿಲಿ ಠಾಕೂರ್ ಪರ ಸಂಸದೆ ಕಂಗನಾ ರಣಾವತ್ ಬ್ಯಾಟಿಂಗ್ ಮಾಡಿದ್ದಾರೆ. ರಾಜಕಾರಣಿಗಳು ತಮ್ಮ ಸ್ವಂತ ಸಂಪಾದನೆಯಿಂದ ನೆಮ್ಮದಿಯ ಜೀವನ ನಡೆಸಬಾರದೇ ಎಂದು ಪ್ರಶ್ನಿಸುವ ಮೂಲಕ ಅವರು ಮೈಥಿಲಿಗೆ ಬೆಂಬಲ ಸೂಚಿಸಿದ್ದಾರೆ.

ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದ ಗಾಯಕಿ ಮೈಥಿಲಿ ಠಾಕೂರ್ ಟ್ರೋಲ್; ಬೆಂಬಲಕ್ಕೆ ನಿಂತ ಸಂಸದೆ ಕಂಗನಾ ರಣಾವತ್
ಮೈಥಿಲಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 21, 2026 | 11:23 AM

Share

ಮುಖ್ಯಾಂಶಗಳು

  • ರೋಲ್ಸ್ ರಾಯ್ಸ್ ಕಾರಿನಲ್ಲಿ ಗಣಪತಿ ದರ್ಶನ
  • ಯುವ ಶಾಸಕಿ ವಿರುದ್ಧ ನೆಟ್ಟಿಗರ ಆಕ್ರೋಶ
  • ಟ್ರೋಲಿಗರ ವಿರುದ್ಧ ಸಂಸದೆ ಕಂಗನಾ ಗರಂ

ಬಿಹಾರದ ಯುವ ಶಾಸಕಿ ಹಾಗೂ ಪ್ರಸಿದ್ಧ ಗಾಯಕಿ ಮೈಥಿಲಿ ಠಾಕೂರ್ ಇತ್ತೀಚೆಗೆ ಮುಂಬೈನ ಲಾಲ್‌ಬಾಗ್‌ಚಾ ರಾಜ ಗಣಪತಿ ದರ್ಶನಕ್ಕೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಜನಪ್ರತಿನಿಧಿಯಾಗಿ ಇಷ್ಟೊಂದು ದುಬಾರಿ ಕಾರಿನಲ್ಲಿ ಬಂದಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಮೈಥಿಲಿ ಬೆಂಬಲಕ್ಕೆ ನಿಂತು ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.

ಸೆಪ್ಟೆಂಬರ್ 15ರಂದು ಮೈಥಿಲಿ ಠಾಕೂರ್ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಪಂಡಾಲ್‌ಗೆ ಭೇಟಿ ನೀಡಿದ್ದರು. ನೀಲಿ ಬಣ್ಣದ ರೋಲ್ಸ್ ರಾಯ್ಸ್ ಕುಲ್ಲಿನಾನ್ ಐಷಾರಾಮಿ ಕಾರಿನಲ್ಲಿ ಅವರು ಆಗಮಿಸಿದ್ದರು. ಕಾರಿನಲ್ಲಿದ್ದುಕೊಂಡೇ ಜನರಿಗೆ ಕೈಬೀಸಿ ನಂತರ ಗಣೇಶನ ದರ್ಶನ ಪಡೆದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ರಾಜಕಾರಣಿಗೆ ಇಷ್ಟೊಂದು ಐಷಾರಾಮಿ ಕಾರು ಬೇಕೇ ಎಂದು ಹಲವರು ಪ್ರಶ್ನೆ ಮಾಡಿದ್ದರು.

ಈ ಟೀಕೆಗಳಿಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್, ರಾಜಕಾರಣಿಗಳು ಕೂಡ ಚೆನ್ನಾಗಿ ಬಾಳಬಾರದೇ ಎಂದು ಪ್ರಶ್ನಿಸಿದ್ದಾರೆ. ‘ರಾಜಕಾರಣಿಗಳು ನೆಮ್ಮದಿಯ ಜೀವನ ನಡೆಸುವುದನ್ನು ಕಂಡರೆ ಕೆಲವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ನಮಗೆ ಸಮಾಜ ಸೇವೆಯ ಜೊತೆಗೆ ಸ್ವಂತ ವೃತ್ತಿ ಮತ್ತು ಜನಪ್ರಿಯತೆ ಇರುತ್ತದೆ. ನಾವೇಕೆ ಬಡವರಂತೆ ಜೀವನ ನಡೆಸಬೇಕು ಎನ್ನುವ ನಿರೀಕ್ಷೆ ತೀರಾ ಅತಾರ್ಕಿಕ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ಮೈಥಿಲಿ ಠಾಕೂರ್ ಅವರ ಆಸ್ತಿ ವಿವರದ ಬಗ್ಗೆಯೂ ಅಂತರ್ಜಾಲದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. 2025ರ ಬಿಹಾರ ವಿಧಾನಸಭೆ ಚುನಾವಣೆಯ ಅಫಿಡವಿಟ್‌ನಲ್ಲಿ ಮೈಥಿಲಿ ಅವರು ಒಟ್ಟು 3.82 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅವರ ಆಸ್ತಿ ಪಟ್ಟಿಯಲ್ಲಿ ದ್ವಿಚಕ್ರ ವಾಹನ ಮತ್ತು ಚಿನ್ನಾಭರಣಗಳಿತ್ತೇ ಹೊರತು ರೋಲ್ಸ್ ರಾಯ್ಸ್ ಕಾರಿನ ಉಲ್ಲೇಖವಿರಲಿಲ್ಲ. ಹೀಗಾಗಿ ಈ ಕಾರು ಯಾರದ್ದು ಎನ್ನುವ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ.

ಇದನ್ನೂ ಓದಿ: ಹಾಡಿನ ಮೂಲಕ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾದ ಖುಷಿ ಹಂಚಿಕೊಂಡ ಮೈಥಿಲಿ ಠಾಕೂರ್

ಯುವ ಗಾಯಕಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಮೈಥಿಲಿ ಅವರಿಗೆ ಸ್ವಂತ ದುಡಿಮೆ ಇದೆ. ಹೀಗಿದ್ದರೂ ಐಷಾರಾಮಿ ಕಾರಿನಲ್ಲಿ ಬಂದಿದ್ದಕ್ಕೆ ಇಷ್ಟೊಂದು ನೆಗೆಟಿವ್ ಕಮೆಂಟ್‌ಗಳು ಬರುತ್ತಿರುವುದು ಸರಿಯಲ್ಲ ಎಂದು ಕಂಗನಾ ವಾದಿಸಿದ್ದಾರೆ. ಸದ್ಯ ಕಂಗನಾ ಅವರ ಈ ಹೇಳಿಕೆ ಮತ್ತು ಮೈಥಿಲಿ ಅವರ ರೋಲ್ಸ್ ರಾಯ್ಸ್ ಸವಾರಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us